ಕಾಮ್ರೇಡ್ ಇದ್ಲಿ ರಾಮಪ್ಪ ಗ್ರಾಮೀಣ ಬಡಜನರ ಸ್ಪೂರ್ತಿಜನಕ ಹೋರಾಟಗಾರ

By Lekha |

ಡಿಸೆಂಬರ್ 31, 2023 ರಂದು 60 ವಯಸ್ಸಿನ ಕಾಮ್ರೇಡ್ ಇದ್ಲಿ ರಾಮಪ್ಪ ಅವರು ಹೃದಯಾಘಾತದಿಂದ ತೀರಿಕೊಂಡರು. ಸಿಪಿಐ (ಎಎಂಎಲ್) ಲಿಬರೇಶನ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಾಮಪ್ಪನವರು ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾಗಿ ಹಲವಾರು ವರ್ಷ ಶ್ರಮಿಸಿದರು. ಕೆಲವು ವರ್ಷಗಳು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸಿದರು. ಅಯರ್ಲಾ ಮತ್ತು ಎಐಕೆಎಂ ಜನಸಂಘಟನೆಗಳ ಪ್ರಭಾರಿಯಾಗಿದ್ದರು.

ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರು ಸಾಮಾಜಿಕ ಕಾರ್ಯಕರ್ತರಾಗಿ ಸಕ್ರಿಯವಾಗಿದ್ದರು. ಗ್ರಾಮೀಣ ಬಡವರು, ದಮನಿತರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗದಿದ್ದರೂ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.

ಫ್ಯಾಶಿಸಂ ವಿರುದ್ಧ ಕರ್ನಾಟಕವನ್ನು ನಿರ್ಮಿಸೋಣ

By CPIML (not verified) |

ಕರ್ನಾಟಕ ರಾಜ್ಯದ ಜನರು ಬಿಜೆಪಿಯ ದುರಾಡಳಿತದ ಪರಿಣಾಮ ಭ್ರಷ್ಟಾಚಾರ, ಮಿತಿಮೀರಿದ ಜೀವನ ವೆಚ್ಚ, ಹೆಚ್ಚಿದ ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಧಾರ್ಮಿಕ ದ್ವೇಷ ಮತ್ತು ಕೋಮು ಧ್ರುವೀಕರಣದಿಂದ ನಲುಗಿ ಈಗಷ್ಟೇ ಅದರಿಂದ ಹೊರಬಂದಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ಎರಡನೇ ರಾಜ್ಯ ಸಮ್ಮೇಳನ ವನ್ನು ಡಿಸೆಂಬರ್ 9 ಮತ್ತು 10, 2023ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜಿಸಲಾಗಿತ್ತು.

ಭತ್ತದ ಕಣಜದಿಂದ ಚೆಲ್ಲಿದ ರಕ್ತ

By CPIML (not verified) |

ಕೊಪ್ಪಳ ಜಿಲ್ಲೆಯಾದ್ಯಂತ ದಲಿತರ ಮೇಲಿನ ಈ ರೀತಿಯ ದೌರ್ಜನ್ಯ ಮತ್ತು ಹತ್ಯೆಗಳು ಪದೇಪದೇ ನಡೆಯುತ್ತಿವೆ. ಒಂದೆಡೆ ಜಾತಿಯೆಂಬುದಿಲ್ಲ, ಮೀಸಲಾತಿ ತೆಗೆಯಬೇಕು ಇತ್ಯಾದಿ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಜಾತಿ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಸಾಂಕ್ರಾಮಿಕ ಕಾಲದಲ್ಲಿಯೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಪದೇ ಪದೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದ್ದು, ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೂನ್ 22 ರಾತ್ರಿ ಜರುಗಿದೆ.

ಅಸಹಜ ಸಾವುಗಳೂ ಆಡಳಿತ ಕ್ರೌರ್ಯವೂ

By Lekha |

ಕೋವಿದ್ ನಂತಹ ಒಂದು ಸಾಂಕ್ರಾಮಿಕ ಉಂಟುಮಾಡಿದ ಅನಾಹುತ ಆಡಳಿತ ವ್ಯವಸ್ಥೆಯನ್ನು ಮತ್ತು ಸರ್ಕಾರವನ್ನು ಮತ್ತಷ್ಟು ಜಾಗೃತಗೊಳಿಸಬೇಕಿತ್ತು. ಚುರುಕುಗೊಳಿಸಬೇಕಿತ್ತು. ಅಧಿಕಾರ ರಾಜಕಾರಣದಲ್ಲಿ ಅಪರೂಪವೇ ಆಗಿರುವ ನಾಗರಿಕ ಹೊಣೆಗಾರಿಕೆ ಮತ್ತು ಮಾನವ ಸಂವೇದನೆ ಕೊಂಚವಾದರೂ ಕಾಣುವಂತಿರಬೇಕಿತ್ತು. ದಿನನಿತ್ಯ ಸಾವುಗಳನ್ನು ಎಣಿಸುವ ಅಧಿಕಾರ ಕೇಂದ್ರಗಳಲ್ಲಿ ಪ್ರತಿಯೊಂದು ಸಾವು ಮನಸನ್ನು ಪ್ರಕ್ಷುಬ್ಧಗೊಳಿಸುವ ವಿಕ್ಷಿಪ್ತತೆಯನ್ನು ಉಂಟುಮಾಡಬೇಕಿತ್ತು. ಇಡೀ ಸಮಾಜವೇ ಆರೋಗ್ಯದಿಂದಿದೆ ಎನ್ನುವ ಭ್ರಮೆಯಲ್ಲಿದ್ದ ಪ್ರಜೆಗಳಿಗೆ ಒಮ್ಮಿಂದೊಮ್ಮೆಲೆ ಸರಣಿ ಸಾವುಗಳು ಎದುರಾದಾಗ ನಮ್ಮ ಸಮಾಜ ಆಘಾತಕ್ಕೊಳಗಾಗಬೇಕಿತ್ತು.

ಸಿದ್ದಲಿಂಗಯ್ಯ ನಮನ

By CPIML (not verified) |

ಸುಪ್ರಸಿದ್ದ ಬಂಡಾಯ ಸಾಹಿತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರು ಇತ್ತೀಚೆಗೆ ನಿಧನರಾಧರು. ಅವರು ಸಾವಿರದ ಓಂಬೈನೂರು ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಂಡು ಬಂದ ಎಡಪಂಥೀ ಯ ಮತ್ತು ದಲಿತ ಚಳುವಳಿಯ ಮುಖ್ಯ ಪ್ರತಿನಿದಿಯಾಗಿದ್ದವರು. ನಮ್ಮ ದೇಶದ ಕ್ರಾಂತಿಕಾರಿ ಮತ್ತು ಜನಪರ ಚಳುವಳಿಯ ಅತ್ಯಂತ ಉತ್ಕ ರ್ಷದ ಪರ್ವ 70 ರ ದಶಕ ಕಾಲ. 67 ರ ನಕ್ಸಲಬಾರಿ, ವಿಯತ್ನಾಮ್ ಯುದ್ಧ, ಪ್ರಪಂಚಾದ್ಯಂತ ಅಮೆರಿಕನ್.ಸಾಮ್ರಾಜ್ಯ ಶಾಯಿಯ ವಿರುದ್ಧ ಪ್ರತಿರೋಧ. ಎಲ್ಲಾ ದೇಶಗಲ್ಲಿ ವರ್ಗ ಹೋರಾಟ ಗಳಿಂದಾಗಿ ಎಲ್ಲೆಡೆಯಲ್ಲಿಯೂ ಕ್ರಾಂತಿಕಾರಿ ಸನ್ನಿವೇಶ. ಅದೇ ಸಮಯದಲ್ಲಿ ಅಮೆರಿಕದ ಕಪ್ಪು ಜನರ ಬ್ಲ್ಯಾಕ್ ಪ್ಯಾಂಥರ್ ಚಳುವಳಿ ಎಲ್ಲರ ಗಮನ ಸೆಳೆದಿತ್ತು.

ಕಾರ್ಪೋರೇಟ್ ಹಿಂದುತ್ವ ಕಾರ್ಯಸೂಚಿಗೆ ಪರ್ಯಾಯ ಬೇಕಿದೆ

By Lekha |

- ನಾ ದಿವಾಕರ

ಕರ್ನಾಟಕದ ಅಧಿಕಾರ ರಾಜಕಾರಣದ ವಲಯದಲ್ಲಿ ನಡೆದ ಹಸ್ತಾಂತರದ ಪ್ರಹಸನ ಇಡೀ ರಾಜ್ಯದ ಗಮನ ಸೆಳೆಯಲು ಕಾರಣವಾಗಿದ್ದು, ರಾಜ್ಯದ ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳಲ್ಲ. ಬದಲಾಗಿ ಜಾತಿ ರಾಜಕಾರಣದ ಏಳುಬೀಳುಗಳು. ರಾಜ್ಯದಲ್ಲಿ ಇಂದು ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿಯಾಗಿದ್ದು, ಜಾತಿ ಸಮೀಕರಣದಿಂದಾಚೆಗಿನ ಯಾವುದೇ ಸಂಕಥನಗಳು ನಗಣ್ಯ ಎನಿಸುತ್ತದೆ. ಯಡಿಯೂರಪ್ಪ ಸರ್ಕಾರದ ಪತನ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತದೆ. ಲಿಂಗಾಯತ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವ  ‘ ಜನಪ್ರತಿನಿಧಿಗಳ ’ ಅಧಿಕಾರ ದಾಹ ಈ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. 

ಜನಸಾಮಾನ್ಯರ ಮೇಲೆ ನಡೆಯುತ್ತಿರುವ ಫ್ಯಾಸಿಸ್ಟ್ ಕಾರ್ಪೋರೇಟ್ ಪ್ರಹಾರ

By Lekha |

ಭಾರತದ 71ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ರೈತಾಪಿ ಮತ್ತು ಸಾಮಾನ್ಯ ಜನತೆ ತಮ್ಮ ಅಭೂತಪೂರ್ವ ಚಳುವಳಿಯ ಮೂಲಕ ಗಣತಂತ್ರ ವ್ಯವಸ್ಥೆಯ ಸ್ಫೂರ್ತಿಯನ್ನು ಪ್ರದರ್ಶಿಸಿದ್ದೇ ಅಲ್ಲದೆ, ಸಾರ್ವಭೌಮ ಪ್ರಜೆಗಳ ಪ್ರತಿರೋಧದ ದನಿ ಹಾಗೂ ಐಕ್ಯತೆಯನ್ನು ಪ್ರದರ್ಶಿಸಿದ್ದರು.

ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಕೊಡುಗೆಯನ್ನು ನಿರ್ನಾಮಗೊಳಿಸುತ್ತಿರುವ ಆರ್‍ಎಸ್‍ಎಸ್

By Lekha |

ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಪ್ರಯೋಗ ಶಾಲೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಅವರೇ ಸೃಷ್ಠಿಸಿರುವ ಹಿಜಾಬ್ ವಿವಾದವನ್ನು ಕುರಿತು ಬರೆಯುವ ಮೊದಲು, ಮಹಿಳೆಯರು ಶಿಕ್ಷಣ ಪಡೆದುಕೊಳ್ಳುವಲ್ಲಿ ಕ್ರಾಂತಿಕಾರಿ ಹೋರಾಟ ನಡೆದ ಬಗ್ಗೆ ಚುಟುಕು ಇತಿಹಾಸವನ್ನು ಮೆಲಕು ಹಾಕಲು ಬಯಸುತ್ತೇನೆ. ದಲಿತರು, ಶೂದ್ರರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವೆಂದು ಪರಿಗಣಿಸಿದ್ದ ಇತಿಹಾಸವಿರುವ ಈ ಸಮಾಜದಲ್ಲಿ, ಮೊದಲಿಗೆ, ಅವರೆಲ್ಲರಿಗೂ ಶಿಕ್ಷಣ ದೊರಕಬೇಕೆಂದು ಫುಲೆ ದಂಪತಿಗಳು ಮತ್ತು ಫಾತಿಮಾ ಶೇಖ್ ರವರು ಮಾಡಿದ ಕ್ರಾಂತಿಕಾರಿ ಹೋರಾಟದ ಫಲ ಅವರು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು: ಸಂವಿಧಾನದ ಆಶಯಗಳು ಮತ್ತು ಜನಪರ ಚಳುವಳಿಗಳು

By vksgautam |

- ರತಿ ಈ ಆರ್

ಇಂದು ಸಂವಿಧಾನದ ಆಶಯ ಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಹಿಜಾಬ್-ಕೇಸರಿ ಶಾಲು ವಿವಾದ, ಇದು ಮಹಿಳೆಯ ವಸ್ತ್ರ ಸಂಹಿತೆ ಸಾಲಿಗೆ, 'ದ್ವೇಷ ರಾಜಕಾರಣದ' ಇತ್ತೀಚಿನ ಸೇರ್ಪಡೆ.

ಮೈಸೂರಿನ ಅತ್ಯಾಚಾರ ಪ್ರಕರಣ ದಂದು, ಯೂನಿವರ್ಸಿಟಿ ನಲ್ಲಿ  ವಿದ್ಯಾರ್ಥಿನಿಯರು ಸಂಜೆ 6 ಗಂಟೆ ಮೇಲೆ ಸಾರ್ವಜನಿಕ ವಾಗಿ ಓಡಾಡಲು ನಿರ್ಭಂದ ಹೇರಿದ್ದು ಇನ್ನೂ ಹಸಿಯಾಗಿದೆ. ಕರ್ನಾಟಕ ದಲ್ಲೀ ಸಂಘಿಗಳು ಕರಾವಳಿಯನ್ನು  ಪ್ರಯೋಗಶಾಲೆ ಸ್ಥಾಪಿಸುತ್ತ  ಕೋಮುವಾದಿ-ಕುಲುಮೆ ಮಾಡಲು ಪ್ರೊಜೆಕ್ಟ್  ಹಾಕಿದಾಗಿಂದ ಪ್ರಗತಿಪರರು ದಲಿತರು, ಎಡಪಂತಿಯರು, ಕೆಳಕಂಡ ಮೂರು ಚಲುವಳಿಗಳ ನ್ನು ವಿವಿಧ ಹಂತದಲ್ಲಿ ಚಾಲನೆ ಗೊಳಿಸಿದರು.