ಆತ್ಮೀಯರೇ

 ವರ್ಷ ನಮ್ಮ ಗಣರಾಜ್ಯವು ತನ್ನ ಸ್ಥಾಪನೆಯ 75ನೇ ವರ್ಷಕ್ಕೆ ಕಾಲಿಡುತ್ತಿದೆ. ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, 2024ರ ನಿರ್ಣಯಕ ಲೋಕಸಭಾ ಚುನಾವಣೆಯು ಕೆಲವೇ ವಾರಗಳ ಅಂತರದಲ್ಲಿದೆ ಎಂಬುವುದೂ ಸಹ ನಮ್ಮ ಗಮನದಲ್ಲಿದೆ. ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಅಚ್ಛೇ ದಿನ್ ತರುವಎಲ್ಲಾ ಕಪ್ಪು ಹಣವನ್ನು ಮರಳಿ ತರುವ ಮತ್ತು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. 2022 ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮತ್ತು ಪ್ರತಿ ಕುಟುಂಬಕ್ಕೆ ಪಕ್ಕಾ ಮನೆಯನ್ನು ಖಾತ್ರಿಪಡಿಸುವುದಾಗಿ ಮೋದಿ ನೀಡಿದ ಭರವಸೆಯನ್ನು ನಂಬಿ ಅನೇಕ ಭಾರತೀಯರು 2019ರಲ್ಲಿ ಅವರಿಗೆ ಎರಡನೇ ಅವಕಾಶವನ್ನು ನೀಡಿದರು. ಈಗ 2024ರ ಚುನಾವಣೆಯನ್ನು ಎದುರು ನೋಡುತ್ತಿರುವ ಸಮಯದಲ್ಲಿಮೋದಿ ಈ ಹಿಂದೆ ನೀಡಿದ್ದ ಭರವಸೆಗಳು ನಮ್ಮನ್ನು ಅಣಕ ಮಾಡುತ್ತಿವೆ. ನೀಡಿದ್ದ ಭರವಸೆಗಳನ್ನು ಈಡೇರಿಸುವ ಬದಲಿಗೆ  ಬಿಜೆಪಿ ಮತ್ತು ಆರೆಸ್ಸೆಸ್ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ತಮ್ಮ ದೊಡ್ಡ ಸಾಧನೆ ಎಂದು ಬಿಂಬಿಸುವುದರಲ್ಲಿ ನಿರತವಾಗಿವೆ ಮತ್ತು ರಾಮನ ಹೆಸರಿನಲ್ಲಿ ಮತ್ತೊಮ್ಮೆ ನಿಮ್ಮ ಮತಗಳನ್ನು ಕೇಳುತ್ತಾ ನಿಮ್ಮನ್ನು ಅಪಮಾನಕ್ಕಿಡುಮಾಡುತ್ತಿವೆ ಎಂಬುವುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. 

ತಲೆತಲಾಂತರಗಳಿಂದ ರಾಮಾಯಣವು ಲಕ್ಷಾಂತರ ಭಾರತೀಯರ ಹೃದಯಕ್ಕೆ ಹತ್ತಿರವಾಗಿದೆ. ಸತ್ಯನ್ಯಾಯ ಮತ್ತು ಸಾರ್ವತ್ರಿಕ ಯೋಗಕ್ಷೇಮದ ಆಳ್ವಿಕೆಗಾಗಿ ರಾಮರಾಜ್ಯವನ್ನು ಜನಪ್ರಿಯ ಭಾರತೀಯ ರೂಪಕವಾಗಿ ಆಗಾಗ್ಗೆ ಬಳಸಲಾಗಿದೆ. ಕೋಮು ಧೃವೀಕರಣದ್ವೇಷಹಿಂಸೆಯ ಅಡಿಪಾಯದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವು 21ನೇ ಶತಮಾನದ ಆಧುನಿಕ ರಾಮರಾಜ್ಯದ ಹೆಬ್ಬಾಗಿಲು ಆಗಿದೆಯೇರಾಮಮಂದಿರ ಉದ್ಘಾಟನೆಯ ಮೂಲಕ ನಮ್ಮನ್ನು ಬೆರಗುಗೊಳಿಸುತ್ತಿರುವ ಮೋದಿ ಚಮತ್ಕಾರವು ಆತನ ಹತ್ತು ವರ್ಷಗಳ ಆಡಳಿತದಲ್ಲುಂಟಾದ ಬಿಕ್ಕಟ್ಟನ್ನು ಮರೆಮಾಚಲು ನಮ್ಮನ್ನು ಕುರುಡಾಗಿಸದಿರಲಿ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶ ಆಧುನಿಕ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿನ ಸಾಂವಿಧಾನಿಕ ಭರವಸೆಗಳು ದಿನನಿತ್ಯ ಅಪಹಾಸ್ಯಕ್ಕೊಳಗಾಗುತ್ತಿರುವುದನ್ನು ನಾವು ನಿರ್ಲಕ್ಷಿಸಬಾರದು.

2019ರ ಸರ್ವೋಚ್ಛ ನ್ಯಾಯಾಲಯದ ತೀರ್ಪು ಡಿಸೆಂಬರ್ 6, 1992 ರಂದು ನಡೆದ ಬಾಬರಿ ಮಸೀದಿ ಧ್ವಂಸವನ್ನು ಸಂವಿಧಾನದ ಘೋರ ಉಲ್ಲಂಘನೆ ಎಂದು ಹೇಳಿದೆ. ಆದರೂ ಸರ್ವೋಚ್ಚ ನ್ಯಾಯಾಲಯವು ರಾಮ ಮಂದಿರ ಟ್ರಸ್ಟ್ಗೆ ದಾವ ಸ್ವತ್ತಿನ ಹಕ್ಕನ್ನು ನೀಡಿದರೆಪೂಜಾ ಸ್ಥಳಗಳ ಮೇಲಿನ ಎಲ್ಲಾ ವಿವಾದಗಳನ್ನು ಕೊನೆಗೊಳಿಸಿ ಶಾಂತಿ ಮತ್ತು ಸೌಹಾರ್ದತೆಯ ಕಾಲ ತರುತ್ತದೆ ಎಂದು ಆಶಿಸಿತ್ತು. ಆದರೆ ಸಂಘ ಬ್ರಿಗೇಡ್ ಈಗ ದೇಶಾದ್ಯಂತ ಇಂತಹ ಘರ್ಷಣೆಗಳನ್ನು ವಿಸ್ತರಿಸಲು ಮತ್ತು 1947ರ ಆಗಸ್ಟ್ 15ರಲ್ಲಿ ಇದ್ದಂತಹ  ಎಲ್ಲಾ ಪೂಜಾ ಸ್ಥಳಗಳ ಯಥಸ್ಥಿತಿಯನ್ನು ಖಾತರಿಪಡಿಸುವ 1991ರ ಪೂಜಾ ಸ್ಥಳಗಳ ಕಾಯಿದೆಯನ್ನು ರದ್ದುಗೊಳಿಸಲು ಬಯಸಿದೆ. ಸವೋಚ್ಛ ನ್ಯಾಯಾಲಯವು ಖಂಡಿತವಾಗಿಯೂ ಮೋದಿ ಸರ್ಕಾರವನ್ನು  ಅಯೋಧ್ಯೆ ದೇವಸ್ಥಾನವನ್ನು ಪ್ರಭುತ್ವದ ಆದ್ಯತೆಯ ಕಾರ್ಯಸೂಚಿಯನ್ನಾಗಿ ಮಾಡುವಂತೆ ಕೇಳಿಲ್ಲ.

ಮೂಲಭೂತವಾಗಿ ಸಾರ್ವಜನಿಕವಾಗಿರಬೇಕಾದ ಸಾರ್ವಜನಿಕ ಸಾರಿಗೆಸಾರ್ವಜನಿಕ ವಲಯದ ಕೈಗಾರಿಕೆಗಳುಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಸಾರ್ವಜನಿಕ ಸೇವೆಗಳು ಸೇರಿದಂತೆ ಎಲ್ಲವನ್ನೂ ಮೋದಿ ಸರ್ಕಾರವು ಸಂಪೂರ್ಣವಾಗಿ ಅಥವಾ ಸ್ವಲ್ಪ ಸ್ವಲ್ಪ ಮಟ್ಟಿಗೆ ಖಾಸಗೀಕರಣ ಮಾಡುತ್ತಿದೆ ಮತ್ತು  ಸಂಪೂರ್ಣವಾಗಿ ನಾಗರಿಕರ ಖಾಸಗಿ ವಿಷಯವಾಗಿರುವ ಧರ್ಮಧಾರ್ಮಿಕ ನಂಬಿಕೆ ಅಥವಾ ಭಾವನೆಯನ್ನು ಸಂಪೂರ್ಣವಾಗಿ ಸರ್ಕಾರದ ವಿಷಯಗಳನ್ನಾಗಿ ಸ್ವಾಧೀನಪಡಿಸಿಕೊಂಡಿದೆ. ಚುನಾಯಿತ ಸರ್ಕಾರದ ಪ್ರಧಾನಮಂತ್ರಿಯಾಗಿರುವ ಮೋದಿ ಈಗ ತಾವು ಒಬ್ಬ ಪುರೋಹಿತರಂತೆ ವರ್ತಿಸುತ್ತಿದ್ದಾರೆ ಮತ್ತು ಜನರು ಹಾಗೂ ಸಂಸತ್ತಿಗೆ ಉತ್ತರದಾಯಿತ್ವವನ್ನು ಹೊಂದಿರದ ದೈವಿಕವಾಗಿ ಆಯ್ಕೆಯಾದ ಪ್ರತಿನಿಧಿಯಾಗಿ ತಮ್ಮನ್ನು ತಾವು ತೋರಿಸಿಕೊಳ್ಳುತ್ತಾರೆ. ಇದು 26 ಜನವರಿ 1950 ರಂದು ಸ್ವತಂತ್ರ ಭಾರತವು ತನ್ನನ್ನು ತಾನು ಘೋಷಿಸಿಕೊಂಡ ಆಧುನಿಕ ಗಣರಾಜ್ಯದ ಕಲ್ಪನೆಯನ್ನೆ ಸಂಪೂರ್ಣವಾಗಿ ನಿರಾಕರಣೆ ಮಾಡಿದಂತಾಗಿದೆ. 

ವಿಶ್ವವಿದ್ಯಾನಿಲಯಗಳಿಂದ ಹಿಡಿದು ರೈಲು ನಿಲ್ದಾಣಗಳವರೆಗೆಎಲ್ಲೆಡೆ ನಾವು ಈಗ ಸಾರ್ವಜನಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೋದಿ ಸೆಲ್ಫಿ ಪಾಯಿಂಟ್‌ಗಳನ್ನು ನೋಡುತ್ತೇವೆ. ಸರ್ಕಾರದ ಪ್ರಚಾರ ಕಾರ್ಯ ಮಾತ್ರ ಶಾಶ್ವತ ಸ್ವರೂಪದ್ದಾಗಿದ್ದುಉಳಿದೆಲ್ಲ ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ನಡೆಸಲಾಗುತ್ತಿದೆ ಮತ್ತು  ಖಾಯಂ ಉದ್ಯೋಗದ ಕಲ್ಪನೆಯನ್ನು ಭಾರತದ ಯುವ ಜನರಿಂದ ದೂರ ಮಾಡಲಾಗಿದೆ - ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು ಸೇನೆಯ ಅರಿವಿಲ್ಲದೆ ಅಗ್ನಿವೀರ್ ಯೋಜನೆಯನ್ನು ಹೇಗೆ ಹೇರಲಾಯಿತು ಎಂದು ಈಗ ನಮಗೆ ಹೇಳುತ್ತಿದ್ದಾರೆ. ಇದು ಹೇಗಿದೆ ಅಂದರೆ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿತದನಂತರ ತಂದ 2000 ರೂಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸುವಾಗ ಭಾರತದ ಬ್ಯಾಂಕರ್‌ಗಳು ಮತ್ತು ಅರ್ಥಶಾಸ್ತ್ರಜ್ಞರೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ಮಾಡಿದ ರೂಪದಲ್ಲೇ ಇದೆ. 

ಇಷ್ಟು ವರ್ಷ ವಿದೇಶಿಗರು ಅಕ್ರಮವಾಗಿ ಭಾರತಕ್ಕೆ ವಲಸೆ ಬರುತ್ತಿರುವ ಬಗ್ಗೆ ಸರ್ಕಾರ ಹೇಳುತ್ತಿತ್ತು. ಆದರೆ ಈಗ ಭಾರತೀಯರನ್ನು ಅಕ್ರಮ ವಲಸಿಗರು ಎಂದು ಗುರುತಿಸಿ ಹೊರ ದೇಶಗಳಿಂದ ವಾಪಸ್ ಕಳುಹಿಸುತ್ತಿರುವ ಬಗ್ಗೆ ಕೇಳುತ್ತಿದ್ದೇವೆ. ಇತ್ತೀಚಿಗೆ ಅಕ್ರಮವಾಗಿ ಭಾರತೀಯರು ಪ್ರಯಾಣಿಸುತ್ತಿದ್ದ ವಿಮಾನವೊಂದನ್ನು ಫ್ರಾನ್ಸ್ನಲ್ಲಿ ತಡೆದುಎಲ್ಲಾರನ್ನು ಭಾರತಕ್ಕೆ ವಾಪಸ್ಸು ಕಳುಹಿಸಲಾಗಿತ್ತು. ಶ್ರೀಮಂತ ಭಾರತೀಯರು ಅಮೇರಿಕಾಇಂಗ್ಲೆಂಡ್ಆಸ್ಟ್ರೇಲಿಯಾ ಮತ್ತು ಅನೇಕ ಪಾಶ್ಚಿಮಾತ್ಯ ದೇಶಗಳ ನಾಗರಿಕರಾಗಲು ಭಾರತೀಯ ಪೌರತ್ವವನ್ನು ತ್ಯಜಿಸುತ್ತಿದ್ದಾರೆ. ಹಲವಾರು ಭಾರತೀಯ ಬಂಡವಾಳಶಾಹಿಗಳು ಭಾರತೀಯ ಬ್ಯಾಂಕ್‌ಗಳಿಂದ ಭಾರಿ ಸಾಲವನ್ನು ಪಡೆದು ದೇಶವನ್ನು ತೊರೆದಿದ್ದಾರೆ. ಏತನ್ಮಧ್ಯೆಸರ್ಕಾರವು ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತದೆ ಮತ್ತು ಭಾರತೀಯ ಕಾರ್ಮಿಕರನ್ನು ವಿದೇಶಕ್ಕೆ ಹೆಚ್ಚು ರಫ್ತು ಮಾಡುತ್ತದೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇಸ್ರೇಲ್‌ಗೆ ಹೋಗಿ ಕೆಲಸ ಮಾಡಲು ಭಾರತೀಯ ಕಾರ್ಮಿಕರನ್ನು ಕಳುಹಿಸಲು ಬಿಜೆಪಿ ಸರ್ಕಾರ ಉತ್ಸುಕವಾಗಿದೆ.

ಭಾರತದ ಬಹುಪಾಲು ನಾಗರಿಕರ ಜೀವನವು ಹೆಚ್ಚು ಹೆಚ್ಚು ಅಸುರಕ್ಷಿತವಾಗುತ್ತಿದೆ. ಮುಸ್ಲಿಮ ಮೇಲಿನ ಗುಂಪುದಾಳಿಗಳು ಮತ್ತು ಅವರ ಮನೆಗಳ ಮೇಲೆ ಬುಲ್ಡೋಜರ್‌ಗಳನ್ನು ನುಗ್ಗಿಸುವುದು ವಾಡಿಕೆಯಾಗಿ ಮಾರ್ಪಟ್ಟಿದೆ. ನಗರದ ಕೇಂದ್ರ ಸ್ಥಾನದಿಂದ ಬಡವರನ್ನು ದೊಡ್ಡ ಪ್ರಮಾಣದಲ್ಲಿ ಹೊರಹಾಕಲಾಗುತ್ತಿದೆ. ದಲಿತರು ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಎಂದಿಗೂ ಶಿಕ್ಷೆಯಾಗುವುದಿಲ್ಲಅಂತಹ ಪ್ರಕರಣಗಳ ಘಟನೆಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ಮಹಿಳೆಯರಿಗೆ ಹಿಂಸಾಚಾರ ಮಾಡಿದ ಅಪರಾಧಿಗಳನ್ನು ಬಿಜೆಪಿಯು ಐಟಿ ಸೆಲ್‌ಗಳಿಂದ ಪ್ರಾರಂಭಗೊಂಡು ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನವರೆಗೆ ಎಲ್ಲಾ ಹಂತಗಳಲ್ಲೂ ರಕ್ಷಿಸಲಾಗುತ್ತದೆ ಮತ್ತು ಉತ್ತೇಜಿಸಲಾಗುತ್ತಿದೆ. 

ಸಂವಿಧಾನವು ನಮಗೆ ಸಾಮಾಜಿಕಆರ್ಥಿಕ ಮತ್ತು ರಾಜಕೀಯ ನ್ಯಾಯದ ಭರವಸೆ ನೀಡಿದೆ. ಆದರೂ ನ್ಯಾಯ ಕೇಳುವ ಜನರನ್ನು ಇಂದು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ತಳ್ಳಲಾಗುತ್ತಿದೆ. ರೈತರು ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಕೃಷಿ ಕಾನೂನುಗಳು ಮತ್ತು ಕಾರ್ಮಿಕ ಸಂಹಿತೆಗಳನ್ನು ಬಳಸಿದ ನಂತರಮೋದಿ ಸರ್ಕಾರವು ಈಗ ಭಾರತವನ್ನು ನಿಜವಾದ ಪೊಲೀಸ್ ರಾಜ್ಯವನ್ನಾಗಿ ಮಾಡಲು ಸಂಪೂರ್ಣ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುತ್ತಿದೆ. ಸರ್ಕಾರದ ವಿರುದ್ಧದ ಪ್ರತಿ ಭಿನ್ನಾಭಿಪ್ರಾಯ ಮತ್ತು ಆಂದೋಲನವನ್ನು ಈಗ ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲಾಗುವುದು ಮತ್ತು ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನುಗಳ ಅಡಿಯಲ್ಲಿ ಕ್ರೂರ ದಮನಕ್ಕೆ ಒಳಪಡಿಸಲಾಗುತ್ತದೆ.

ಭಾರತದಲ್ಲಿನ ಈ ಬೆಳವಣಿಗೆಗಳಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಮತ್ತು ದೃಢವಾದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ.  ಇವು ಫ್ಯಾಸಿಸಂನ ಚಿಹ್ನೆಗಳುಭಯೋತ್ಪಾದನೆ ಮತ್ತು ದಮನದ ಶಾಶ್ವತ ಮತ್ತು ಸಾಂಸ್ಥಿಕ ಆಳ್ವಿಕೆಯನ್ನು ತೋರಿಸುತ್ತವೆ. ನಾವು ನಮ್ಮ ಸಂವಿಧಾನದ ಪೀಠಿಕೆಯನ್ನು ಓದಿದಾಗನಾವು ವೈಯಕ್ತಿಕವಾಗಿ ಮತ್ತು ಗಣರಾಜ್ಯವಾಗಿ ನಮ್ಮ ಸ್ವಂತ ಜೀವನ ಪರಿಸ್ಥಿತಿಗಳನ್ನು ನೋಡಿದಾಗದೇಶವು ಹೇಗೆ ಸಾಂವಿಧಾನಿಕ ಗುರಿಗಳು ಮತ್ತು ಬದ್ಧತೆಗಳ ವಿರುದ್ಧ ದಿಕ್ಕಿನಲ್ಲಿ ಪ್ರತಿದಿನ ತಳ್ಳಲ್ಪಟ್ಟಿದೆ ಎಂಬುದನ್ನು ನಾವು ನೋಡಬಹುದು.

ಹತ್ತು ವರ್ಷಗಳ ಮೋದಿ ಸರ್ಕಾರವು ಈಗಾಗಲೇ ಸಂಸತ್ತಿನ ಸದಸ್ಯರನ್ನು ಸರ್ಕಾರದ ಇಚ್ಛೆಯಂತೆ ಹೊರಹಾಕುವ ಮತ್ತು ಅಮಾನತುಗೊಳಿಸುವ ಮೂಲಕ ವಿರೋಧ ಮುಕ್ತ ಸಂಸತ್ ಅನ್ನು ನೋಡುವಂತೆ ಮಾಡಿದೆ. ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿರುವ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡಲೊರಟಿರುವ ಬಿಜೆಪಿ ದೆಹಲಿಯನ್ನು ಭಾರತದ ರಾಜ ದರ್ಬಾರ್‌ನಂತೆ ಕಾಣುತ್ತಿದೆ. ಚುನಾಯಿತ ರಾಜ್ಯ ಸರ್ಕಾರಗಳ ಮೇಲೆ ರಾಜ್ಯಪಾಲರು ಹಿಡಿತ ಸಾಧಿಸುತ್ತಿದ್ದಾರೆಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತುಮಣಿಪುರವು ತಿಂಗಳುಗಟ್ಟಲೆಯಿಂದ ಅತ್ತಿಉರಿಯುತ್ತಲೇ ಇದೆಆದರೂ  ಒಂದು ದಿನ ಆ ರಾಜ್ಯಕ್ಕೆ ಪ್ರಧಾನಿಯವರು ಭೇಟಿ ಮಾಡಲೇ ಇಲ್ಲ ಮತ್ತು ಇದರ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪವನ್ನು ಸಹ ಮಾಡಲಿಲ್ಲ.

ಇಸ್ರೇಲ್ ಗಾಜಾದಲ್ಲಿ ಪ್ರತಿನಿತ್ಯ ನಡೆಸುತ್ತಿರುವ ಫೆಲೆಸ್ತೀನ್ ಮಕ್ಕಳ ಹತ್ಯಾಕಾಂಡದ ಬಗ್ಗೆ ಇಡೀ ಜಗತ್ತು ಇಂದು ಕಳವಳಗೊಂಡಿದೆ. ಮಾನವೀಯತೆಯ ಮೇಲಿನ ಈ ಯುದ್ಧದಲ್ಲಿಇಸ್ರೇಲ್‌ಗೆ ವಿಶ್ವದ ಅತಿದೊಡ್ಡ ಸಾಮ್ರಾಜ್ಯಶಾಹಿ ಶಕ್ತಿಯಾದ ಅಮೇರಿಕಾ ಮತ್ತು ಭಾರತವನ್ನು ವಸಾಹತುಶಾಹಿ ಆಳ್ವಿಕೆಯಲ್ಲಿ ಹಿಡಿದುಕೊಂಡಿದ್ದ  ಇಂಗ್ಲೆಂಡ್ ಸಂಪೂರ್ಣ ಬೆಂಬಲವನ್ನು ನೀಡಿವೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಜಲಿಯನ್ ವಾಲಾಬಾಗ್ ಮಾದರಿಯಲ್ಲಿ ನಡೆದ ಹಲವಾರು ಹತ್ಯಾಕಾಂಡಗಳ ನೋವನ್ನು ಅನುಭವಿಸಿದ ದೇಶವಾಗಿನಮ್ಮ ಭಾರತವು ಗಾಜಾದಲ್ಲಿ ತಕ್ಷಣದ ಕದನ ವಿರಾಮ ಮಾತ್ರವಲ್ಲದೆ ಇಸ್ರೇಲ್‌ನ ಯುದ್ಧಾಪರಾಧಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರ ಪರವಾಗಿ ನಿಲ್ಲಬೇಕಿತ್ತು. ದಕ್ಷಿಣ ಆಫ್ರೀಕಾದಲ್ಲಿದ್ದ ವರ್ಣಭೇದ ನೀತಿ ಮತ್ತು ವಸಾಹತುಶಾಹಿಯ ವಿರುದ್ಧ ಗಾಂಧಿಯವರು ತಮ್ಮ ಐತಿಹಾಸಿಕ ಚಳುವಳಿಯನ್ನು ಪ್ರಾರಂಭಿಸಿದ್ದರು ಮತ್ತು ಅಂತಿಮವಾಗಿ 20ನೇ ಶತಮಾನದ ಅಂತ್ಯದ ವೇಳೆಗೆ ವರ್ಣಭೇದ ನೀತಿಯ ಕ್ರೂರ ಆಳ್ವಿಕೆಯನ್ನು ಆ ದೇಶ ಸೋಲಿಸಿತುಇಂದು ಈ ದೇಶ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದನ್ನು ನಾವು ನೋಡಬಹುದು. ಆದರೆ ಮೋದಿ ಆಳ್ವಿಕೆಯಲ್ಲಿಭಾರತದಲ್ಲಿನ ನ್ಯಾಯಸ್ವಾತಂತ್ರ‍್ಯ ಮತ್ತು ಜಾಗತಿಕ ಶಾಂತಿ ಧ್ವನಿಯು ಕಣ್ಮರೆಯಾಗುತ್ತಿವೆ. ಯುಎಸ್ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಭಾರತ ಕೈಜೊಡಿಸಿರುವುದು ಇದನ್ನು ಸ್ಪಷ್ಟಪಡಿಸುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಇನ್ನು ಐದು ವರ್ಷಗಳ ವಿನಾಶಕಾರಿ ಮೋದಿ ಆಡಳಿತವನ್ನು ಭಾರತ ಎದುರಿಸಲು  ಸಾಧ್ಯವಿಲ್ಲ. ಸ್ವತಂತ್ರ ಭಾರತದಲ್ಲಿ ಅಧಿಕಾರವನ್ನು ಕಸಿದುಕೊಳ್ಳುವ ಬ್ರಾಹ್ಮಣಶಾಯಿಗಳ  ವಿರುದ್ಧ ಭಗತ್ ಸಿಂಗ್ ನಮಗೆ ಎಚ್ಚರಿಕೆ ನೀಡಿದ್ದರು. ಧರ್ಮ ಮತ್ತು ಆಡಳಿತ ಸಮ್ಮಿಲನಗೊಂಡರೆ ರಾಜಕೀಯದಲ್ಲಿ ಭಕ್ತಿಯು ಸರ್ವಾಧಿಕಾರದ ಹಾದಿಯನ್ನು ಮಾತ್ರ ಸುಗಮಗೊಳಿಸುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ನಮ್ಮ ಗಣರಾಜ್ಯದ 74 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವಾಗಈ ಎಚ್ಚರಿಕೆಗಳು ಎಂದಿಗಿಂತಲೂ ನಮ್ಮನ್ನು ಹೆಚ್ಚು ಎಚ್ಚರಗೊಳಿಸಬೇಕಾಗಿವೆ. 

ಆದ್ದರಿಂದ ನಾವು ಗಣರಾಜ್ಯವನ್ನು ಮರಳಿ ಪಡೆಯಲು ನಿರ್ಧರಿಸುವ ಸಮಯ ಬಂದಿದೆ. ಭಾರತದ ನಿಜವಾದ ನಿರ್ಮಾಣಕಾರರಾದ ಕಾರ್ಮಿಕರು ಮತ್ತು ರೈತರು ಅವರ ಹಕ್ಕುಗಳನ್ನು ವಾಪಸ್ಸು ಪಡೆಯಬೇಕು. ಯುವ ಭಾರತಕ್ಕೆ ಸುಭದ್ರ ಭವಿಷ್ಯವಿರಬೇಕು. ಭಾರತದ ಮಹಿಳೆಯರು ಮತ್ತು ತುಳಿತಕ್ಕೊಳಗಾದ ಮತ್ತು ವಂಚಿತ ಬಹುಜನರಿಗೆ ಸಂಪೂರ್ಣ ಸ್ವಾತಂತ್ರ‍್ಯನ್ಯಾಯ ಮತ್ತು ಘನತೆ ಸಿಗಬೇಕು. ಧಾರ್ಮಿಕ ಅಲ್ಪಸಂಖ್ಯಾತರಾಗಲಿ ಅಥವಾ ಭಾಷಿಕ ಅಲ್ಪಸಂಖ್ಯಾತರಾಗಲಿ ಸಮಾನ ಹಕ್ಕುಗಳನ್ನು ಪಡೆಯಬೇಕು ಮತ್ತು ಅವರ ಏಳಿಗೆಗೆ ಸಮಾನ ಅವಕಾಶಗಳನ್ನು ಪಡೆಯಬೇಕು ಮತ್ತು ಭಾರತದ ಶ್ರೀಮಂತ ವೈವಿಧ್ಯತೆಯನ್ನು ಏಕರೂಪತೆಯ ಹೆಸರಿನಲ್ಲಿ ನಾಶ ಮಾಡಬಾರದು.

ನಮ್ಮ ಸ್ವಾತಂತ್ರ‍್ಯ ಚಳುವಳಿಯಿಂದ ಹೊರಹೊಮ್ಮಿದ ಮತ್ತು ಸಾರ್ವತ್ರಿಕ ವಯಸ್ಕರ ಮತದಾನ ಜೊತೆಗೆ ಭಾರತವನ್ನು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿದ ಸಂವಿಧಾನವನ್ನು ನಾವು ಇನ್ನೂ ಹೊಂದಿದ್ದೇವೆ. ಇಂದು ಮೋದಿ ಆಡಳಿತದಲ್ಲಿ ಅನೇಕರು ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನವನ್ನು ವಸಾಹತುಶಾಹಿ ಸಂವಿಧಾನ ಎಂದು ಬಹಿರಂಗವಾಗಿ ವಿವರಿಸಲು ಪ್ರಾರಂಭಿಸಿದ್ದಾರೆ. ಕಾನೂನುಗಳು ಪುನಃ ಬರೆಯಲ್ಪಟ್ಟಂತೆಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಪರಿವರ್ತಿಸಲು ಹೊಸ ಸಂವಿಧಾನಕ್ಕಾಗಿ ಸಂಘದ ಬ್ರಿಗೇಡ್ ಮತ್ತು ಮೋದಿ ಪಾಳೆಯದಲ್ಲಿ ಕೂಗು ಕೇಳಿಬರುತ್ತಿದೆ. ಭಾರತದ ತುಳಿತಕ್ಕೊಳಗಾದ ಜನರು ಮತ್ತು ಮಹಿಳೆಯರಿಗೆ ಗುಲಾಮಗಿರಿಯ ಸಂಹಿತೆಯಾದ ಆರ್‌ಎಸ್‌ಎಸ್‌ನ ಮನುಸ್ಮೃತಿಯನ್ನು ಆಧುನಿಕ ಭಾರತದ ಸಂವಿಧಾನವನ್ನಾಗಿ ಮಾಡಲು ಹೊರಟಿರುವುದನ್ನು ಸರ್ವನಾಶ ಮಾಡಬೇಕಾಗಿದೆ.

ಆದ್ದರಿಂದ ನಮ್ಮ ಪ್ರತಿಯೊಂದು ಮತವೂ 2024ರ ಲೋಕಸಭೆ ಚುನಾವಣೆಯಲ್ಲಿ ವಿನಾಶಕಾರಿ ಮೋದಿ ಆಡಳಿತದ ಸೋಲನ್ನು ಖಚಿತಪಡಿಸಿಕೊಳ್ಳಲಿ. ಸಿಪಿಐ(ಎಂಎಲ್) ಪಕ್ಷವು ಫ್ಯಾಸಿಸ್ಟ್ ಮೋದಿ ಸರ್ಕಾರದ ವಿರುದ್ಧ ಒಂದು  ವಿಶಾಲವಾದ ವಿರೋಧಿ ಒಕ್ಕೂಟದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸುತ್ತಾ ಬಂದಿದೆ. ಐಎನ್‌ಡಿಐಎ ಮೈತ್ರಿಕೂಟದ ಒಂದು ಪಕ್ಷವಾಗಿ ನಾವು ಬಹುಶಃ ಮುಂಬರುವ ಚುನಾವಣೆಯಲ್ಲಿ ಕೆಲವೇ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದೇವೆಆದರೆ ಐಎನ್‌ಡಿಐಎ ಮೈತ್ರಿಕೂಟದ ಎಲ್ಲಾ ಮಿತ್ರ ಪಕ್ಷಗಳ ಗೆಲುವಿಗಾಗಿ ನಾವು ಎಲ್ಲೆಡೆ ಕೆಲಸ ಮಾಡುತ್ತೇವೆ. ಕಾರ್ಪೊರೇಟ್ ಲೂಟಿಕೋಮು ದ್ವೇಷ ಮತ್ತು ಸಾಮಾಜಿಕ ಗುಲಾಮಗಿರಿಯ ಶಕ್ತಿಗಳ ಮೇಲೆ ಸ್ವಾತಂತ್ರ‍್ಯ ಮತ್ತು ನ್ಯಾಯವು ಮೇಲುಗೈ ಸಾಧಿಸಲಿ ಎಂದು ಬಯಸುತ್ತೇವೆ.

ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಪ್ರಾರಂಭಗೊಂಡು ಜಮೀನ್ದಾರಿ ವ್ಯವಸ್ಥೆ ಮತ್ತು ಬ್ರಾಹ್ಮಣಶಾಹಿ-ಊಳಿಗಮಾನ್ಯ ಪ್ರಾಬಲ್ಯದವರೆಗಿನ ಎಲ್ಲಾ ಅನ್ಯಾಯ ಮತ್ತು ದಬ್ಬಾಳಿಕೆಯ ಶಕ್ತಿಗಳನ್ನು ಐತಿಹಾಸಿಕವಾಗಿ ಸೋಲಿಸಿದ ಭಾರತದ ಜನರು ಫ್ಯಾಸಿಸಂ ವಿರುದ್ಧದ ಪ್ರಜಾಪ್ರಭುತ್ವದ ಹೋರಾಟದಲ್ಲಿ ವಿಜಯಶಾಲಿಯಾಗಬೇಕು. ಇತ್ತೀಚೆಗಷ್ಟೇ ಯಶಸ್ವಿ ರೈತ ಚಳವಳಿಯು ಜನರ ಒಗ್ಗಟ್ಟಿನ ಮತ್ತು ದೃಢನಿಶ್ಚಯದ ಹೋರಾಟದ ಶಕ್ತಿಯನ್ನು ನಮಗೆ ತೋರಿಸಿದೆ. ಸಂಘಟಿತವಾಗಿ ನಾವು ಸಂಘಿ ಫ್ಯಾಸಿಸ್ಟರನ್ನು ಸೋಲಿಸುವುದು ಖಚಿತ. ನಾವು ಹೋರಾಡುತ್ತೇವೆಗೆಲ್ಲುತ್ತೇವೆ!

ಕೇಂದ್ರ ಸಮಿತಿ, ಸಿಪಿಐ(ಎಂಎಲ್) ಲಿಬರೇಶನ್

 

Kannada-Jan Sankalp Abhiyan CPIML 2024.pdf
Jan Sankalp Abhiyan CPIML- ENG_Final-2.pdf