ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಕೊಡುಗೆಯನ್ನು ನಿರ್ನಾಮಗೊಳಿಸುತ್ತಿರುವ ಆರ್‍ಎಸ್‍ಎಸ್

By Lekha |

ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಪ್ರಯೋಗ ಶಾಲೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಅವರೇ ಸೃಷ್ಠಿಸಿರುವ ಹಿಜಾಬ್ ವಿವಾದವನ್ನು ಕುರಿತು ಬರೆಯುವ ಮೊದಲು, ಮಹಿಳೆಯರು ಶಿಕ್ಷಣ ಪಡೆದುಕೊಳ್ಳುವಲ್ಲಿ ಕ್ರಾಂತಿಕಾರಿ ಹೋರಾಟ ನಡೆದ ಬಗ್ಗೆ ಚುಟುಕು ಇತಿಹಾಸವನ್ನು ಮೆಲಕು ಹಾಕಲು ಬಯಸುತ್ತೇನೆ. ದಲಿತರು, ಶೂದ್ರರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವೆಂದು ಪರಿಗಣಿಸಿದ್ದ ಇತಿಹಾಸವಿರುವ ಈ ಸಮಾಜದಲ್ಲಿ, ಮೊದಲಿಗೆ, ಅವರೆಲ್ಲರಿಗೂ ಶಿಕ್ಷಣ ದೊರಕಬೇಕೆಂದು ಫುಲೆ ದಂಪತಿಗಳು ಮತ್ತು ಫಾತಿಮಾ ಶೇಖ್ ರವರು ಮಾಡಿದ ಕ್ರಾಂತಿಕಾರಿ ಹೋರಾಟದ ಫಲ ಅವರು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.