ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ-ಲೆನಿನ್‍ವಾದಿ) ಲಿಬರೇಶನ್ ಪಕ್ಷವು 1967ರಲ್ಲಿ ನಡೆದ ನಕ್ಸಲ್ಬಾರಿ ದಂಗೆಯಿಂದ ಹುಟ್ಟಿಬಂದ ಭಾರತೀಯ ಕಮ್ಯುನಿಸ್ಟ್  ಪಕ್ಷವಾಗಿದೆ. ಭಾರತದಲ್ಲಿ ಅತ್ಯಂತ ಶೋಷಣೆಗೊಳಪಟ್ಟ ವರ್ಗಗಳನ್ನು ಭಾರತೀಯ ರಾಜಕೀಯ ರಂಗದಲ್ಲಿ ಗುರುತಿಸಿಕೊಳ್ಳುವಂತೆ ಮತ್ತು ಅವರನ್ನು ಭಾರತೀಯ ಕ್ರಾಂತಿಯನ್ನು ಮುನ್ನೆಡೆಸುವ ನಾಯಕರನ್ನಾಗಿ ಪಕ್ಷವು ಮಾಡಿತು. ಹಾಗೂ ಈ ಮೂಲಕ ಪುನ್ನಪ್ರಾ-ವಯಲಾರ್ ಮತ್ತು ತೆಲಂಗಾಣದ ಐತಿಹಾಸಿಕ ಕಮ್ಯುನಿಸ್ಟ್ ನೇತೃತ್ವದ ರೈತ ಚಳುವಳಿಗಳೊಂದಿಗೆ ಸ್ಥಿರವಾದ ಅಸ್ತಿತ್ವವನ್ನು ಹೊಂದಲಾಯಿತು. ಲೆನಿನ್ ರವರ ಜನ್ಮದಿನದ ಆಚರಣೆಯ ದಿನವಾಗಿದ್ದ 1969 ರ ಏಪ್ರಿಲ್ 22 ರಂದು ಪಕ್ಷವನ್ನು ಸ್ಥಾಪಿಸಲಾಯಿತು, ಭಾರತದಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಕ್ಸ್ ವಾದಿ-ಲೆನಿನ್‍ವಾದಿ ತತ್ವ ಸಿದ್ಧಾಂತಗಳನ್ನು ಅನ್ವಯಿಸಲು ಪಕ್ಷ ಬದ್ಧವಾಗಿದೆ.
 

ಭಾರತದ ಕಮ್ಯುನಿಸ್ಟ್  ಚಳುವಳಿಯ ಕ್ರಾಂತಿಕಾರಿ ಪರಂಪರೆಯನ್ನು ರಕ್ಷಿಸುವ ಪಕ್ಷವಾಗಿ ಸಿಪಿಐ(ಎಂಎಲ್) ಹೊರಹೊಮ್ಮಿತು, ಭಾರತೀಯ ಕಮ್ಯುನಿಸ್ಟ್  ಚಳುವಳಿಯಲ್ಲಿ ಮಾಡಲಾಗುತ್ತಿದ್ದಂತಹ ಮಾರ್ಪಾಡುಗಳನ್ನು ಮತ್ತು ಅರಾಜಕತಾವಾದಿತನವನ್ನು ವಿರೋಧಿಸಿತು. ಪಕ್ಷವು ಪ್ರಾರಂಭದಿಂದಲೂ, ತನ್ನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಚಾರು ಮಜುಂದಾರ್ ರವರು ಸೇರಿದಂತೆ ಎಲ್ಲಾ ನಾಯಕರುಗಳಿಗೆ ಉಂಟಾದ ಬಂಧನದಲ್ಲಿನ ಕ್ರೂರವಾದ ಚಿತ್ರಹಿಂಸೆಗಳು ಮತ್ತು ಹತ್ಯೆಗಳನ್ನು ಪಕ್ಷವು ಧೈರ್ಯದಿಂದ ಎದುರಿಸಿದೆ. ಸಿಪಿಐ(ಎಂಎಲ್) ಲಿಬರೇಶನ್ ತನ್ನ ಆರಂಭಿಕ ದಿನಗಳಲ್ಲಿ ವರ್ಗ ಹೋರಾಟದ ಮಾದರಿಯನ್ನು ಬೆಳೆಸಿತು ಮತ್ತು ಶೋಷಣೆಗೊಳಪಟ್ಟ ಜಾತಿಗಳು ಹಾಗೂ ಮಹಿಳೆಯರ ಘನತೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿತು.

ಪ್ರಸ್ತುತದಲ್ಲಿ ಸಿಪಿಐ(ಎಂಎಲ್) ಲಿಬರೇಶನ್ ಬಿಹಾರ ಮತ್ತು ಜಾಖರ್ಂಡ್‍ನ ರಾಜ್ಯ ಶಾಸನ ಸಭೆಗಳಲ್ಲಿ  ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ ಮತ್ತು ಭಾರತದಾದ್ಯಂತ ಕಾರ್ಮಿಕರು, ರೈತರು ಮತ್ತು ವಿವಿಧ ವರ್ಗಗಳ ಜನರ ಚಳುವಳಿಗಳನ್ನು ಮುನ್ನಡೆಸುತ್ತದೆ. ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಸಿಪಿಐ(ಎಂಎಲ್) ಪ್ರತಿನಿಧಿಗಳು ಕ್ರಾಂತಿಕಾರಿ ಪ್ರತಿಪಕ್ಷದ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿಪಿಐ(ಎಂಎಲ್) ಭಾರತದ ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುತ್ತದೆ. ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳಿಗೆ ಮತ್ತು ಆಂತರಿಕ ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಉದ್ಭವವಾಗುವ ಯಾವುದೇ ರೀತಿಯ ಕೋಮುವಾದ ಮತ್ತು ಧರ್ಮಧಾರಿತ ರಾಷ್ಟ್ರೀಯತೆಯನ್ನು ಪಕ್ಷವು ತನ್ನ ಸಿದ್ಧಾಂತದ ಮೂಲಕವೇ ವಿರೋಧಿಸುವಲ್ಲಿ ಸ್ಥಿರವಾಗಿದೆ. ಸಿಪಿಐ(ಎಂಎಲ್) ತನ್ನ ಆರಂಭದಿಂದಲೂ ಭಾರತದ ಪ್ರಜಾಪ್ರಭುತ್ವವನ್ನು ವಿಸ್ತರಿಸುವ ಮತ್ತು ಸ್ಥಿರವಾಗಿಸುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ. ಸಿಪಿಐ(ಎಂಎಲ್) ರಾಜ್ಯದ ದಮನವನ್ನು ವಿರೋಧಿಸುತ್ತದೆ, ಕಠೋರ ಕಾನೂನುಗಳ ನಿರ್ಮೂಲನೆಗಾಗಿ ಹೋರಾಡುತ್ತದೆ, ಜಾತಿ ವಿನಾಶಕ್ಕಾಗಿ ಹೋರಾಡುತ್ತದೆ, ಲಿಂಗ ಹಿಂಸೆ, ವರ್ಣಭೇದ ನೀತಿ ಮತ್ತು ಹೋಮೋಫೋಬಿಯಾವನ್ನು ವಿರೋಧಿಸುತ್ತದೆ ಹಾಗೂ ಭೂಮಿ ಮತ್ತು ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿಯ ವಿರುದ್ಧ ಹೋರಾಡುತ್ತದೆ. ಭಾರತದಲ್ಲಿ ಬೆಳೆಯುತ್ತಿರುವ ಕೋಮುವಾದಿ ಫ್ಯಾಸಿಸಂ ಅನ್ನು ತನ್ನ ಎಲ್ಲಾ ಶಕ್ತಿಯಿಂದ ವಿರೋಧಿಸಲು ಅದು ಬದ್ಧವಾಗಿದೆ.

 

ಧನಸಹಾಯ

ನಮ್ಮ ಪಕ್ಷವು ಜನರ ಕೊಡುಗೆಯಿಂದಲೇ ನಡೆಯುತ್ತದೆ. ನಾವು ಯಾವುದೇ ಕಾಪೋರೇಷನ್ ಅಥವಾ ಫಂಡಿಂಗ್ ಏಜೆನ್ಸಿಗಳಿಂದ ಹಣವನ್ನು ಪಡೆಯುವುದಿಲ್ಲ. ಹಾಗಾಗಿ, ನಮ್ಮ ಹೋರಾಟಗಳಿಗೆ ತಮ್ಮ ಧನಸಹಾಯ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ತಮ್ಮ ಎಲ್ಲಾ ರೀತಿಯ ಸಮಯ, ಕೌಶಲ್ಯ, ಅಭಿಪ್ರಾಯ, ಸಲಹೆಗಳು ಮತ್ತು ಭಾಗವಹಿಕೆಯನ್ನು ನೀಡಲು ಕೋರುತ್ತೇವೆ. 

 

ಬ್ಯಾಂಕ್ ವರ್ಗಾವಣೆ (ಭಾರತೀಯರಿಂದ)

ಖಾತೆ ಹೆಸರು: CPI(ML)

ಖಾತೆ ಸಂಖ್ಯೆ: 04502010180207

ಬ್ಯಾಂಕ್ ಹೆಸರು: Canara Bank 

ಬ್ಯಾಂಕ್ ಘಟಕ: ವಿಶ್ವನೀಡಂ, ಬೆಂಗಳೂರು

ಐ.ಎಫ್.ಎಸ್. ಸಿ ಕೋಡ್: CNRB0010450

ಎಂ.ಐ.ಸಿ.ಆರ್ ಸಂಖ್ಯೆ: 560015310   


'CPI(ML)' ಹೆಸರಿನಲ್ಲಿ ಚೆಕ್ಕು, ಡಿಮ್ಯಾಂಡ್ ಡ್ರಾಫ್ಟ್, ಪೇ ಆರ್ಡರ್ ಭರಿಸಬಹುದು


ಇ- ಮೇಲ್ : cpiml.karnataka@gmail.com