By CPIML (not verified) |

ಸುಪ್ರಸಿದ್ದ ಬಂಡಾಯ ಸಾಹಿತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರು ಇತ್ತೀಚೆಗೆ ನಿಧನರಾಧರು. ಅವರು ಸಾವಿರದ ಓಂಬೈನೂರು ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಂಡು ಬಂದ ಎಡಪಂಥೀ ಯ ಮತ್ತು ದಲಿತ ಚಳುವಳಿಯ ಮುಖ್ಯ ಪ್ರತಿನಿದಿಯಾಗಿದ್ದವರು. ನಮ್ಮ ದೇಶದ ಕ್ರಾಂತಿಕಾರಿ ಮತ್ತು ಜನಪರ ಚಳುವಳಿಯ ಅತ್ಯಂತ ಉತ್ಕ ರ್ಷದ ಪರ್ವ 70 ರ ದಶಕ ಕಾಲ. 67 ರ ನಕ್ಸಲಬಾರಿ, ವಿಯತ್ನಾಮ್ ಯುದ್ಧ, ಪ್ರಪಂಚಾದ್ಯಂತ ಅಮೆರಿಕನ್.ಸಾಮ್ರಾಜ್ಯ ಶಾಯಿಯ ವಿರುದ್ಧ ಪ್ರತಿರೋಧ. ಎಲ್ಲಾ ದೇಶಗಲ್ಲಿ ವರ್ಗ ಹೋರಾಟ ಗಳಿಂದಾಗಿ ಎಲ್ಲೆಡೆಯಲ್ಲಿಯೂ ಕ್ರಾಂತಿಕಾರಿ ಸನ್ನಿವೇಶ. ಅದೇ ಸಮಯದಲ್ಲಿ ಅಮೆರಿಕದ ಕಪ್ಪು ಜನರ ಬ್ಲ್ಯಾಕ್ ಪ್ಯಾಂಥರ್ ಚಳುವಳಿ ಎಲ್ಲರ ಗಮನ ಸೆಳೆದಿತ್ತು. ಮಹಾರಾಷ್ಟ್ರದಲ್ಲಿ ಜಡ್ಡು ಹಿಡಿಡಿದ್ದ ರಿಪಬ್ಲಿಕನ್ ಪಕ್ಷದ ನಾಯಕತ್ವ ದ ವಿರುದ್ಧ ಅಲ್ಲಿನ ಸಾಹಿತಿ ಗಳು ಮತ್ತು ಯುವ ಜನರು ದಲಿತ್ ಪ್ಯಾಂಥರ್ಸ್ ಸ್ಥಾಪಿಸಿದರು. ಅದೇ ವೇಳೆಗೆ ಕರ್ನಾಟಕದ ದಲಿತ ಬುದ್ದಿ ಜೀವಗಳು ಮತ್ತು ಸಾಹಿತಿಗಳ ಆಕ್ರೋಶ ಬೇಯುತ್ತಿತ್ತು.

ಅದಕ್ಕೆ ಕಿಚ್ಚು ಹಚ್ಚಿದ್ದು, ಬಸವಲಿಂಗಪ್ಪ ನವರ ಬೂಸಾ ಚಳುವಳಿ. ಬೂಸಾ ಚಳುವಳಿ ಬಸವಲಿಂ ಗಪ್ಪ ಅವರ ಕ್ರಾಂತಿಕಾರಿ ಅಭಿಪ್ರಾಯಗಳ ವಿರುದ್ಧ ಅಷ್ಟೇ ಅಲ್ಲ, ದಲಿತರ ವಿರುದ್ದವೂ ಆಗಿತ್ತು. ಅದೇ ಸಮಯದಲ್ಲಿ ಬೂಸಾ ಚಳುವಳಿ ದಲಿತ ವಿದ್ಯಾರ್ಥಿಗಳ ವಿರುದ್ಧ ತಿರುಗಿತ್ತು. ಈ ಹಿನ್ನಲೆಯಲ್ಲಿಯೇ ದಲಿತ ಸಾಹಿತ್ಯ ಕರ್ನಾಟಕದಲ್ಲಿ ಹೊರ ಹೊಮ್ಮಿತು. ಸಿದ್ಧಲಿಂಗಯ್ಯ 70 ರ ದಶಕದಲ್ಲಿ ಹೊರಹೊಮ್ಮಿದ.ಕ್ರಾಂತಿಕಾರಿ ಅಲೆಯ ಭಾಗವಾಗಿದ್ದರು. ಅವರ "ಪಂಚಮ" ನಾಟಕ ದಲಿತರ ಅರಿವಿನ ಆಸ್ಫೋಟದ ಪ್ರತಿನಿದಿಯಾಗಿತ್ತು. ಆ ನಾಟಕದಲ್ಲಿ ದಲಿತ ಯುವಕ ಎಲ್ಲ ದಲಿತ ನಾಯಕರು ಮತ್ತು ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಕಥಾವಸ್ತು ಇದೆ. ಅವರ "ಹೊಲೆ ಮಾದಿಗರ ಹಾಡುಗಳು " ಮತ್ತು ಇನ್ನೂ ಇತರ ಅವರ ಕಾವ್ಯ ಕರ್ನಾಟಕದ ಉದ್ದಗಲಕ್ಕೂ ಪ್ರಸರಿಸಿ ದಲಿತರ ಆಕ್ರೋಶ ದ ದನಿಯಾಯಿತು ಮತ್ತು 1975 ಮತ್ತು 77 ರಲ್ಲಿ ಸ್ಥಬ್ದವಾಗಿದ್ದ ತುರ್ತು ಪರಿಸ್ಥಿಯ ದ ರಾಜಕೀಯ ಸ್ಥಿತಿಯಲ್ಲಿ ಅದು ಹೆಚ್ಚು ಪ್ರಸರಿತವಾಯಿತು. ಇಷ್ಟಾದರೂ ಸಿದ್ದಲಿಂಗಯ್ಯ ದಲಿತ ಚಳುವಲ್ಲಿ ಸಂಘಟನಾತ್ಮವಾಗಿ ಸಕ್ರಿಯವಾಗಿರಲ್ಲಿಲ್ಲ.

ಅವರು ಸಿಪಿಎಂ ಪಕ್ಷಕ್ಕೆ ಹೆಚ್ಚು ಹತ್ತಿರವಾಗಿದ್ದರೆಂಬ ಗುಮಾನಿ ಬಹಳ ಪ್ರಬಲವಾಗಿತ್ತು. ಅವರಲ್ಲದೇ ಕೆಲವರುವರು ನಕ್ಸ ಲ್ ಬೆಂಬಲಿಗರೆಂದು ಹೇಳಲಾಗುತ್ತಿತ್ತು. ಆದರೆ ಇವೆಲ್ಲಾ ಎಂದೂ ದಲಿತ ಚಳುವಳಿಯ ಗಂಭೀರವಾದ ಸೈದ್ಧಾಂತಿಕ ಬಿನ್ನಾಭಿಪ್ರಾಯವಾಗಿರಲಿಲ್ಲ. ಬರೀ ಗುಸುಗುಸು. ಮಾರ್ಕ್ಸ್ವಾದದ ಬಗ್ಗೆ ಒಂದು ಹಸಿಹಸಿ ಒಳಒಳಗಿನ ಬೇಗುದಿ ಇತ್ತು. ಎಡ ಪಂಥೀಯರು ದಲಿತ ಸಂಘಟನೆಗಳಿಂದ ಹೊರ ಬಂದರೂ ಚಳುವಳಿಯ ಸಂಗಾತಿಗಳಾಗಿ ಇದ್ದರು. ಅಂತೂ ಕರ್ನಾಟಕದ ದಲಿತ ಚಳುವಳಿಯ ಆರಂಭಿಕ ವರ್ಷಗಳಲ್ಲಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ದಲಿತ ಚಳುವಳಿಯ ಸಂಘಟನೆಯಲ್ಲಿ ಸಿದ್ದಲಿ0 ಗಯ್ಯ ಅವರ ಕಾವ್ಯ ನೀಡಿದ ಕೊಡುಗೆ ಅಪಾರ.

1977 ರಲ್ಲಿ ತುರ್ತು ಪರಿಸ್ಥಿತಿ ಯನ್ನು ತೆರೆಯಲಾಯಿತು ಮತ್ತು ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು. ನಂತರದಲ್ಲಿ ಕರ್ನಾಟಕದಲ್ಲಿಯೂ ರಾಜಕೀಯ ಬದಲಾವಣೆ ಕಾಣತೊಡಗಿತು. ರಾಮಕೃಷ್ಣ ಹೆಗ್ಗಡೆ ಸರ್ಕಾರದ ಅಸ್ತಿತ್ವತ್ವಕ್ಕೆ ಬಂದ ಮೇಲೆ, ಈ ಸರ್ಕಾರ ತಮ್ಮದೇ ಎಂಬ ಮನೋಭಾವ ಉಂಟಾಗಿ, ದಲಿತ ನಾಯಕತ್ವದಿಂದ ಸರ್ಕಾರದೊಂದಿಗೆ ವಶೀಲಿ ಬಾಜಿ ಶುರುವಾಯಿತು. ರಾಜಕೀಯ ಅಧಿಕಾರದ ರುಚಿ, ಸವಲತ್ತುಗಳನ್ನು ನೋಡಿದ ದಲಿತ ಸಂಘಟನೆಗಳ ನಾಯಕತ್ವ ನಿಧಾನವಾಗಿ ಎಡ ಬಲ ಉಪ ಜಾತಿಯ ಒಳ ಸುಳಿಯಲ್ಲಿ ಸಿಲುಕಿತು. ಅದರಿಂದ ಇಂದಿಗೂ ಬಿಡಿಸಿಕೊಳ್ಳಲಾಗಿಲ್ಲ.

ನಂತರದಲ್ಲಿ ಸಿದ್ದಲಿಂಗಯ್ಯ ದಲಿತ ಜನ ಸಾಮಾನ್ಯರ ಸಂಘಟನೆಯ ಬದಲು ಆಳುವ ವರ್ಗದ ಹಿಂಬಾಲಕರಾದರು. ಎರಡು ಬಾರಿ ಶಾಸಕರಾದರು, ಕಾಂಗ್ರೆಸ್, ಜನತಾದಳ ಪಕ್ಷಗಳ ಸರ್ಕಾರ ಇದ್ದರೂ ಅವರಿಗೆ ಏನೂ ತೊಂದರೆಯಾಗಲಿಲ್ಲ. ಬಿಜೆಪಿ ಗೂ ಹೊಂದಿಕೊಂಡರು. ಅವರು ಏನೇ ಅಧಿಕಾರ ಪಡೆದುಕೊಂಡರೂ ಜನ ವಿರೋಧಿ ನಿಲುವನ್ನು ಎಂದೂ ತೆಗೆದುಕೊಳ್ಳಲಿಲ್ಲ.

ಸಿದ್ದಲಿಂಗಯ್ಯ ತಮ್ಮ ಸಾಹಿತ್ಯದಲ್ಲಿ ಕೇವಲ ಅಸ್ಪೃಶ್ಯರ ದುಃಖ ದುಮ್ಮಾನ ಆಕ್ರೋಶಗಳಲ್ಲೂ ಪ್ರತಿಸುವ ಜತೆಗೆ ದಲಿತರ ವಿಮೋಚನೆಯನ್ನೂ ಮತ್ತು ಅಂಬೇಡ್ಕರ್ ಅವರ ಮಿತಿಯನ್ನೂ ಗಮನಿಸಿ ದ್ದಾರೆ ಮತ್ತು ಕೆಂಪು ಬಾವುಟದ ನಾಯಕತ್ವವನ್ನೂ ಎತ್ತಿ ಹಿಡಿದಿದ್ದಾರೆ. ಹೀಗಾಗಿ ಕರ್ನಾಟಕದ ಜನಪರ ಚಳುವಳಿಲ್ಲಿ ಅವರ ಕೊಡುಗೆಯನ್ನು ನೆನೆಯ ಬೇಕು.