- ರತಿ ಈ ಆರ್

ಇಂದು ಸಂವಿಧಾನದ ಆಶಯ ಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಹಿಜಾಬ್-ಕೇಸರಿ ಶಾಲು ವಿವಾದ, ಇದು ಮಹಿಳೆಯ ವಸ್ತ್ರ ಸಂಹಿತೆ ಸಾಲಿಗೆ, 'ದ್ವೇಷ ರಾಜಕಾರಣದ' ಇತ್ತೀಚಿನ ಸೇರ್ಪಡೆ.

ಮೈಸೂರಿನ ಅತ್ಯಾಚಾರ ಪ್ರಕರಣ ದಂದು, ಯೂನಿವರ್ಸಿಟಿ ನಲ್ಲಿ  ವಿದ್ಯಾರ್ಥಿನಿಯರು ಸಂಜೆ 6 ಗಂಟೆ ಮೇಲೆ ಸಾರ್ವಜನಿಕ ವಾಗಿ ಓಡಾಡಲು ನಿರ್ಭಂದ ಹೇರಿದ್ದು ಇನ್ನೂ ಹಸಿಯಾಗಿದೆ. ಕರ್ನಾಟಕ ದಲ್ಲೀ ಸಂಘಿಗಳು ಕರಾವಳಿಯನ್ನು  ಪ್ರಯೋಗಶಾಲೆ ಸ್ಥಾಪಿಸುತ್ತ  ಕೋಮುವಾದಿ-ಕುಲುಮೆ ಮಾಡಲು ಪ್ರೊಜೆಕ್ಟ್  ಹಾಕಿದಾಗಿಂದ ಪ್ರಗತಿಪರರು ದಲಿತರು, ಎಡಪಂತಿಯರು, ಕೆಳಕಂಡ ಮೂರು ಚಲುವಳಿಗಳ ನ್ನು ವಿವಿಧ ಹಂತದಲ್ಲಿ ಚಾಲನೆ ಗೊಳಿಸಿದರು.

  1. ದ್ವೇಷ ರಾಜಕಾರಣಗಳಾದ ಈದ್ಗಾ ಮೈದಾನ, ಬಾಬಾಬುಡನಗಿರಿ ಧ್ರುವೀಕರಣ ಆವರಿಸಿದಾಗ (2005)ರಲಿ ಪ್ರಗತಿಪರರು ' ದ್ವೇಷ ಬಿಟ್ಟು ದೇಶ ಕಟ್ಟು 'ಚಳವಳಿಗೆ ನಾಂದಿ ಹಾಡಿದರು.  
  2. 2012 ರ ದೆಹಲಿ ಗ್ಯಾಂಗ್ ರೇಪ್ ' ನಿರ್ಭಯ ಪ್ರಕರಣ ' ಇದಕ್ಕೆ ಉತ್ತರವಾಗಿ 2013 ರಲ್ಲಿ 'ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೇ ' ನಾಂದಿ ಹಾಡಿತು. 'ಅರವಿನ ಪಯಣ' ಕೈಪಿಡಿ ಇಂದು ಮಹಿಳಾ ಕಾರ್ಮಿಕರ, ವಿಧ್ಯಾರ್ಥಿಗಳ, ದಲಿತರ ಹಾಗೂ ಅಸಂಘಟಿತ ಜನ ಸಮೂಹದ ಮಧ್ಯ ಪಸರಿಸಲು ಶುರುವಾಗಿದೆ. ಈಗ 2022 ರ ಗುಲ್ಬರ್ಗದಲ್ಲಿ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ.
  3. ಇನ್ನು ಮೋದಿ ಸರ್ಕಾರ ದೇಶ ವನ್ನ ಹಿಂದೂರಾಷ್ಟ್ರ ಮಾಡಲು ಹೊರಟ ಪರಿಣಾಮ 'ಸಂವಿಧಾನ ಓದು' ಅಭಿಯಾನವು ಇಡೀ ಕರ್ನಾಟಕದಕ್ಕೆ ಪಸರಿಸಿ, ಪ್ರಗತಿ ಪರರು ಸಂಘಟಿತ ರಾದರು.
        

ಇಂದು ಮಹಿಳಾ ಶಿಕ್ಷಣದ ಮೇಲೆ ಹಿಜಾಬ್ ಹೆಸರಿನಲ್ಲಿ ಧಾಳಿ ನಡೆಯುತ್ತಿದೆ. ಪರಸ್ಪರ ಗೌರವಿಸುವ, ಸಹ ಬಾಳ್ವೆಯ ಪಾಠ ಕಲಿಯಬೇಕಾದ ಶೈಕ್ಷಣಿಕ ಸಂಸ್ಥೆ ಗಳಲ್ಲಿ ಮತಾ0ಧತೆ ವಿಷ ಬೀಜ ಬಿತ್ತಿ ಒಡಕು0ಟು ಮಾಡಲಾಗುತ್ತಿದೆ. ಸಂವಿಧಾನದ ಆಶಯ ವಾದ ಸಾರ್ವಜನಿಕ ಶಿಕ್ಷಣದ ಮೇಲೆ ಧಾಳಿ ನಡೆಯು ತ್ತಿದೆ. ಮುಸ್ಲಿಂ ಮಹಿಳೆಯರನ್ನು ಮೂಲೆಗೆ ತಳ್ಳುವ ಪ್ರಯತ್ನ ನಡಿತಿದೆ. ಭಯದ ವಾತಾವರಣ ನಿರ್ಮಿಸುತ್ತದೆ ಧ್ರುವೀಕರಣಕ್ಕೆ ಒತ್ತು ನೀಡುತ್ತಿದ್ದಾರೆ.

ಇನ್ನು ಆಧುನಿಕ ತಂತ್ರ ಜ್ಞಾನದ ದುರುಪಯೋಗ ಮಾಡಿ ಅನ್ ಲೈನ್ ನಲ್ಲಿ ' ಸುಲ್ಲಿ ಡೀಲ್, ಬುಲ್ಲೀ ಬಾಯ್ ' ಹೆಸರಿನಲ್ಲಿ ಮುಸ್ಲಿಂ ಮಹಿಳಯರನು ಹರಾಜಿಗೆ ಇಟ್ಟ ಘಟನೆಗಳು ಭಯಾನಕವಾಗಿವೆ.

ಈ ಪಿತೃ ಪ್ರಧಾನ ವ್ಯವಸ್ಥೆಯ ಸ್ತ್ರಿದ್ವೇಶಿ ವಾದಗಳನ್ನು ಎತ್ತಿ ಹಿಡಿಯುವುದು ಅಲ್ಲದೆ ಮಹಿಳೆಯರ ದೇಹ ವನ್ನ ಯುದ್ಧ ಭೂಮಿಯಂತೆ ಉಪಯೋಗಿಸಿ ಕೊಳ್ಳಲು ಹಿಂದುತ್ವ ಶಕ್ತಿಗಳು ಪ್ರಯತ್ನಿಸುತ್ತಿದೆ.

ಇದರ ವಿರುದ್ಧ ವಾಗಿ ಇತ್ತೀಚಿಗೆ ' ಬಹುತ್ವ ಕರ್ನಾಟಕ' ವೇದಿಕೆ ಉದ್ಘಾಟಿಸಲಾಯಿತು. ಬಹುಸಂಸ್ಕೃತಿ ಸಮಾಜದ ಆಶಯ ವೇ ಸಂವಿಧಾನದ ಆಶಯ ವಾಗಿದೆ. ಪ್ರಗತಿಪರ ಸಂಘಟನೆ ಗಳು ಈ ನೆಲೆಯಲ್ಲಿ ಹೋರಾಡಬೇಕಿದೆ.

ಇಂದು ಮೌಲ್ಯ ಗಳ ಸಂಘರ್ಷ ತೀವ್ರ ವಾಗಿದೆ. ಧರ್ಮ, ಜಾತಿ, ವರ್ಗ, ಲಿಂಗಾಧರಿತ ತಾರತಮ್ಯ ಗಳನ್ನ ಕೊನೆಗೊಳಿಸಲು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಬೇಕು. ನಮ್ಮ ಎಲ್ಲಾ ಪ್ರಯತ್ನಗಳು ಮುಂದುವರೆಯಲೆ ಬೇಕಿದೆ. ಮಹಿಳೆಯ  ಸ್ವಾತಂತ್ರ  ಸಮಾನತೆ ಘನತೆ ಗಾಗು ಹೊರಟ ಅನಿವಾರ್ಯ ವಾಗಿದೆ.