ಫ್ಯಾಸಿಸ್ಟ್ ಮೋದಿ ಆಡಳಿತದ ವಿರುದ್ಧ ಜನರ ನಿರ್ಣಾಯಕ ಹಂತದ ಚಳುವಳಿಗಾಗಿ ಸಿದ್ಧರಾಗಿ!
ಜುಲೈ 28, 2021, ಕಾಮ್ರೇಡ್ ಚಾರು ಮಜುಂದಾರ್ ಅವರ 49 ನೇ ವರ್ಷದ ಸ್ಮರಣಾ ದಿನಾಚರಣೆಯ ಮತ್ತು ಸಿಪಿಐ (ಎಂಎಲ್) ಪುನರ್‍ಸ್ಥಾಪನೆಯಾದ 47 ನೇ ವಾರ್ಷಿಕೋತ್ಸವದ ದಿನವಾಗಿರುತ್ತದೆ. 1970ರ ದಶಕದ ಪ್ರಾರಂಭಿಕ ವರ್ಷಗಳಲ್ಲಿ ನಡೆದ ಕುಖ್ಯಾತ 1975 ರ ತುರ್ತು ಪರಿಸ್ಥಿತಿ ಘಟನೆ ನಡೆದು ಈಗ ಐದು ದಶಕಗಳು ಕಳೆದಿದ್ದೂ, ಮತ್ತೊಮ್ಮೆ ಭಾರತ ದೇಶವು ತುರ್ತುಪರಿಸ್ಥಿತಿ ದಮನಕಾರಿ ಆಡಳಿತಕ್ಕೆ ಮರಳಿದೆ, ಈ ರೀತಿಯಲ್ಲಿ ಆಗಾಗ್ಗೆ ವಸಾಹತುಶಾಯಿ ಅವಧಿಯ ಕ್ರೌರ್ಯ ಮತ್ತು ದಬ್ಬಾಳಿಕೆ ನಡೆಸುತ್ತಿರುವುದು ಅವಮಾನಕರವಾದ ಸಂಗತಿಯಾಗಿದೆ.
ನ್ಯಾಯಾಲಯಗಳು ಸಹ ಮೋದಿ ಆಡಳಿತದಲ್ಲಿರುವ ಅವಿವೇಕದ ದಬ್ಬಾಳಿಕೆಯು ಪ್ರಜಾಪ್ರಭುತ್ವದ ಸಾಂವಿಧಾನಿಕ ಚೌಕಟ್ಟಿಗೆ ಸರಿಹೊಂದುವುದಿಲ್ಲ ಎಂಬುವುದನ್ನು ತಿಳಿಸುವಷ್ಟರ ಮಟ್ಟಿಗೆ, ಇಂದು ದಬ್ಬಾಳಿಕೆಯು ಬಲವಾಗಿದೆ. ದೆಹಲಿ ಉಚ್ಛ ನ್ಯಾಯಾಲಯವು, ಭಿನ್ನಮತ ಮತ್ತು ವಿರೋಧಿಸುವ ಹಕ್ಕನ್ನು ಪ್ರಜಾಪ್ರಭುತ್ವದ ಕೇಂದ್ರಬಿಂದು ಎಂದು ಒತ್ತಿಹೇಳಿದೆ. ಸ್ವಾತಂತ್ರ್ಯ ದೊರೆತ ಏಳು ದಶಕಗಳ ನಂತರ ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನು ಏಕೆ ಬೇಕು ಎಂದು ಸವೋಚ್ಛ ನ್ಯಾಯಾಲಯವು ಸರ್ಕಾರವನ್ನು ಕೇಳಿದೆ.
ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಬೇಡಿಕೆ ಮತ್ತು ವಸಾಹತುಶಾಹಿ ಯುಗದ ದೇಶದ್ರೋಹ ಕಾಯ್ದೆ ಅಥವಾ ವಸಾಹತಶಾಹಿ ನಂತರದ ಯುಎಪಿಎಯಂತಹ ಕಠಿಣ ಕಾನೂನುಗಳನ್ನು ರದ್ದುಪಡಿಸುವುದಕ್ಕೆ ಸಂಬಂಧ ಪಟ್ಟಂತೆ ಸಾರ್ವಜನಿಕರಲ್ಲಿ ದೊಡ್ಡಮಟ್ಟದ ಚರ್ಚೆ ಮತ್ತೊಮ್ಮೆ ಪ್ರಾರಂಭವಾಗಿದೆ. ಇದರ ಜೊತೆಗೆ ಚಳುವಳಿಯ ಇತರೆ ಪ್ರಮುಖ ಪ್ರಶ್ನೆಗಳಾದ ತಾರತಮ್ಯದಿಂದ ಕೂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ವಿನಾಶಕಾರಿ ಕೃಷಿ ಕಾನೂನುಗಳನ್ನು ರದ್ದುಪಡಿಸುವುದು, ಹೊಸ ಕಾರ್ಮಿಕ ಸಂಹಿತೆಗಳ ಬದಲು ಹಳೆ ಕಾರ್ಮಿಕ ಕಾನೂನುಗಳ ಜಾರಿ ಮತ್ತು ಕಾರ್ಮಿಕ ಹಕ್ಕುಗಳ ಪುನಃಸ್ಥಾಪನೆ, ಖಾಸಗೀಕರಣ ಮತ್ತು ಬೆಲೆ ಏರಿಕೆಯನ್ನು ನಿಲ್ಲಿಸುವುದು, ಉದ್ಯೋಗಗಳ ಸೃಷ್ಟಿ ಮತ್ತು ವೇತನ ಹೆಚ್ಚಳ, ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ಹಾಗೂ ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣದ ಖಾತರಿಯಂತಹ ಪ್ರಮುಖ ಒತ್ತಾಯಗಳು, ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಪ್ರಮುಕ ಕಾರ್ಯಸೂಚಿಯಾಗಿದೆ.
ಬದಲಾವಣೆಗಳಾಗಿರುವ ದೊಡ್ಡ ಸಚಿವ ಸಂಪುಟದ ಮೋದಿ ಸರ್ಕಾರವು, ಹೊಸ ಮಸೂದೆಗಳ ಕಾರ್ಯಸೂಚಿಯೊಂದಿಗೆ ಮುಂಗಾರು ಅಧಿವೇಶನಕ್ಕೆ ಸಿದ್ಧವಾಗುತ್ತಿರುವುದರಿಂದ, ಬೀದಿಗಿಳಿದು ಹೋರಾಟದಲ್ಲಿ ತೊಡಗಿರುವ ಚಳುವಳಿಗಳು ಮತ್ತು ಸಂಸದೀಯ ವ್ಯವಸ್ಥೆಯಲ್ಲಿರುವÀ ವಿರೋಧ ಪಕ್ಷಗಳು, ವಿಶೇಷವಾಗಿ ಎಡಪಕ್ಷಗಳು ಹೆಚ್ಚಿನ ಮಟ್ಟದಲ್ಲಿ ನಿರ್ಣಾಯತ್ಮಕವಾದ ಪ್ರತಿರೋಧವನ್ನ ತೋರಿಸಬೇಕಾಗಿದೆ.
ಇಂತಹ ಹೊಸ ಪರಿಸ್ಥಿತಿಯಲ್ಲಿ ಪಕ್ಷದ ಸಮಿತಿಗಳು ಮತ್ತು ಸದಸ್ಯರು ಸಂಪೂರ್ಣವಾಗಿ ತಮ್ಮನ್ನ ತಾವು ಅರ್ಪಿಸಿಕೊಂಡು ಹೊರಾಟ ನಡೆಸಬೇಕು. ಸತತ ಎರಡು ವರ್ಷಗಳಿಂದ, ನಾವು ಕೋವಿಡ್ 19 ಸಾಂಕ್ರಾಮಿಕ ಮತ್ತು ಅದರಿಂದಾದ ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ, ವಿಶೇಷವಾಗಿ ಲಾಕ್‍ಡೌನ್ ಮತ್ತು ಅದರ ನಿಬರ್ಂಧಗಳು. ಈ ಅವಧಿಯಲ್ಲಿ ನಾವು ಹಲವಾರು ಕಾಮ್ರೇಡ್‍ಗಳನ್ನು ಕಳೆದುಕೊಂಡಿದ್ದೇವೆ ಮತ್ತು ಅನೇಕರು ಇನ್ನೂ ಸಹ ಕೋವಿಡ್ ನಂತರ ಬರುವ ತೊಂದರೆಗಳಿಂದ ಬಳಲುತ್ತಿದ್ದಾರೆ. ಈ ಪರಿಸ್ಥಿತಿಯು, ನಮ್ಮ ಹಲವಾರು ಸಮ್ಮೇಳನದ ಚಟುವಟಿಕೆಗಳು ಮತ್ತು ಭೌತಿಕವಾಗಿ ಒಟ್ಟಾಗಿ ಸೇರಿ ಮಾಡುವ ಹೋರಾಟದ ಕಾರ್ಯತಂತ್ರಗಳ ವಿಧಾನಗಳಿಗೆ ತಡೆಯೊಡ್ಡಿದೆ. ಆದರೂ ನಾವು ಡಿಜಿಟಲ್ ಮತ್ತು ಭೌತಿಕ ರೂಪರೇಷಗಳನ್ನು ಒಟ್ಟುಗೂಡಿಸುವ ಮೂಲಕ ಅನೇಕ ಪರಿಣಾಮಕಾರಿ ಅಭಿಯಾನಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಸಾಂಕ್ರಾಮಿಕ ಅವಧಿಯು ಹೆಚ್ಚಾಗುತ್ತಿರುವುದರಿಂದ ಮತ್ತು ‘ಸಹಜ ಜೀವನಕ್ಕೆ ಮರುಳುವ’ ಬಗ್ಗೆ ಅನಿಶ್ಚಿತತೆಯು ಮೇಲುಗೈ ಸಾಧಿಸುತ್ತಿರುವುದರಿಂದ, ನಮ್ಮ ಸಕ್ರಿಯ ಪಾತ್ರವನ್ನು ಹೆಚ್ಚಿಸಲು ಮತ್ತು ನಮ್ಮ ಚಳುವಳಿಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು.
ಕಾಮ್ರೇಡ್ ಚಾರು ಮಜುಂದಾರ್ ಅವರ ಕೊನೆಯ ಮಾತಾದ - ಜನರ ಹಿತಾಸಕ್ತಿಗಳನ್ನು ಎತ್ತಿಹಿಡಿಯುವುದು ಮತ್ತು ಪಕ್ಷವನ್ನು ಎಲ್ಲ ರೀತಿಯಿಂದಲೂ ಜೀವಂತವಾಗಿರಿಸುವುದು, ಎನ್ನುವುದು- 1970ರ ದಶಕದಲ್ಲಾದ ಹಿನ್ನಡೆಯಲ್ಲಿ ನಮಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿತು. ಇದೇ ಸ್ಪೂರ್ತಿ, ಮೋದಿ 2.0 ಮತ್ತು ಕೋವಿಡ್ 2.0 ರ ಮಾರಕ ಸಂಯೋಜನೆಯ ಇಂದಿನ ಸವಾಲಿನ ಪರಿಸ್ಥಿತಿಯನ್ನು ಎದುರಿಸಲು, ನಮ್ಮನ್ನು ಮುಂದೆ ಕೊಂಡೊಯ್ಯಬೇಕು. ಮುಂಬರುವ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉಂಟಾಗುವ ಸಮರಗಳನ್ನು ಎದುರಿಸಲು ಸಿದ್ಧರಾಗುತ್ತಿರುವುದರಿಂದ ಮತ್ತು ಚಳುವಳಿ ಹಾಗೂ ಪಕ್ಷವನ್ನು ಪರಿಸ್ಥಿತಿಯ ಬೇಡಿಕೆಗಳಿಗೆ ಅನುಗುಣವಾಗಿ ಮುಂದೆ ಕೊಂಡೊಯ್ಯಬೇಕಾಗಿರುವುದರಿಂದ ಅಶಕ್ತತೆ ಮತ್ತು ನಿಷ್ಕ್ರೀಯತೆಗೆ ಅವಕಾಶವಿಲ್ಲ.
ಕೇಂದ್ರೀಯ ಸಮಿತಿ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ ವಾದಿ-ಲೆನಿನ್‍ವಾದಿ)