By CPIML (not verified) |

ಬಂಧನದಲ್ಲಿದ್ದ ಜೆಸ್ಯೂಟ್ ಸಮಾಜ ಸೇವಕರಾದ 84 ವರ್ಷ ವಯಸ್ಸಿನ ಫಾದರ್ ಸ್ಟಾನ್ ಸ್ವಾಮಿಯವರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮತ್ತು ದುಃಖದಲ್ಲಿರುವ ಜಾಖರ್ಂಡ್ ಮತ್ತು ಇಡೀ ಭಾರತದ ಬಡ ಮತ್ತು ತುಳಿತಕ್ಕೊಳಗಾದ ಜನರೊಂದಿಗೆ ಸಿಪಿಐಎಂಎಲ್ ಜೊತೆಗಿರುತ್ತದೆ. ಮೋದಿ ಆಡಳಿತದ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ), “ಭೀಮಾ ಕೋರೆಗಾಂವ್ ಪ್ರಕರಣ"ಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಪರ ಹೋರಾಟ ಮಾಡುವ ಪ್ರಮುಖ ಹೋರಾಟಗಾರನ್ನು ನಿರಂತರವಾಗಿ ಬಂಧಿಸುತ್ತಿದೆ. ಮತ್ತು ಅವರಿಗೆ ಜಾಮೀನು ನಿರಾಕರಿಸುವ ಸಲುವಾಗಿ ಕಠಿಣ ಯುಎಪಿಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ದೀರ್ಘಕಾಲದ ವರೆಗೆ ವಿಚಾರಣಾಧೀನ ಖೈದಿಯನ್ನಾಗಿ ಬಂಧನದಲ್ಲಿರಿಸಲಾಗುತ್ತಿದೆ. ಫಾದರ್ ಸ್ಟಾನ್‍ಸ್ವಾಮಿಯವರನ್ನು ಈ ಪ್ರಕರಣದಲ್ಲೇ ಬಂಧಿಸಲಾಗಿತ್ತು.

ಭೀಮಾ ಕೋರೆಗಾಂವ್ ಆರೋಪಿಗಳ ವಿರುದ್ಧ ವಿರುವ ಪ್ರಕರಣ ಹಾಸ್ಯಾಸ್ಪದವಾಗಿದೆ ಮತ್ತು ಅಂತಿಮವಾಗಿ ವಿಚಾರಣೆಯು ಪ್ರತಿಯೊಬ್ಬ ಆರೋಪಿಗಳನ್ನು ಮುಕ್ತಗೊಳಿಸುತ್ತದೆ ಎಂಬ ಸತ್ಯ ಎನ್‍ಐಎ ಮತ್ತು ಮೋದಿ ಆಡಳಿತಕ್ಕೆ ಸಂಪೂರ್ಣವಾಗಿ ತಿಳಿದಿದೆ. ಆದರೂ, ಈ ಪ್ರಕರಣದ ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ವ್ಯವಸ್ಥೆಯೇ ಇವರನ್ನು ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡುವಂತೆ ಮತ್ತು ಮರಣದಂಡನೆಯನ್ನು ಸಹ ವಿಧಿಸುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ.

ಫಾದರ್ ಸ್ಟಾನ್‍ಸ್ವಾಮಿಯವರ ಜಾಮೀನು ವಿಚಾರಣೆಯು ಭಾರತದ ನ್ಯಾಯಾಂಗ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿರುವುದು ಇತಿಹಾಸವಾಗಲಿದೆ. ಸುಪ್ರೀಂ ಕೋರ್ಟ್ ತುರ್ತು ಪರಿಸ್ಥಿತಿಯಿಂದ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ವಿಫಲವಾದ ಕಳಂಕಿತ ಎಡಿಎಂ ಜಬಲ್ಪುರ್ ಪ್ರಕರಣಕ್ಕಿಂತಲೂ ಇದು ಕೆಟ್ಟದಾಗಿದೆ. ಗೌರವದಿಂದ ನೀರು ಕುಡಿಯುವ ಸಿಪ್ಪರ್ಗಾಗಿ ಅವರ ಮಾಡಿದ್ದ ವಿನಂತಿಯನ್ನು ಪುರಸ್ಕರಿಸಲು ನ್ಯಾಯಾಧೀಶರು ಎರಡು ತಿಂಗಳುಗಳನ್ನು ತೆಗೆದುಕೊಂಡರು. ತನಗೆ ನಡೆಯಲು ಸಾಧ್ಯವಾಗುತ್ತಿಲ್ಲ, ಮತ್ತು ತನ್ನ ಸಹ ಖೈದಿಗಳಿಂದ ಊಟ ತಿನ್ನಿಸಿಕೊಳ್ಳಬೇಕಾಗಿದೆ ಎಂದು ಮಾಡಿದರೂ, ನ್ಯಾಯಾಲಯವು ಇದನ್ನು ಕೇವಲ "ವೃದ್ಧಾಪ್ಯ" ದ ಚಿಹ್ನೆಗಳು ಮತ್ತು ಒಂದು ಜಾಮೀನು ನೀಡಲು ಸಾಕಷ್ಟು ಆಧಾರಗಳಿಲ್ಲ ಎಂದು ತಳ್ಳಿಹಾಕಿತು. ಫಾದರ್ ಸ್ಟಾನ್‍ಸ್ವಾಮಿಯವರಿಗೆ ಜಾಮೀನು ನಿರಾಕರಿಸಿದ ಪ್ರತಿಯೊಬ್ಬ ನ್ಯಾಯಾಧೀಶರ ಕೈಯಲ್ಲೂ ಸ್ಟಾನ್‍ರವರ ರಕ್ತದ ಕಲೆಗಳು ಇದ್ದಾವೆ.

ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿ, ನಂತರ ಜೈಲಿನಲ್ಲೇ ಅವರು ಕೊಳೆಯುವಂತೆ ಮಾಡಿ, ಕೊನೆಗೆ ಚಿತ್ರಹಿಂಸೆ ಮತ್ತು ಸಾವಿಗೆ ಗುರಿಯಾಗುವಂತೆ ಮಾಡುವ ತನಿಖಾ ಸಂಸ್ಥೆಗಳ ಅಧ್ಯಕ್ಷತೆಯನ್ನು ಭಾರತದ ಗೃಹ ಸಚಿವ ಅಮಿತ್ ಶಾ ವಹಿಸುತ್ತಾರೆ. 21 ತಿಂಗಳ ತುರ್ತು ಪರಿಸ್ಥಿತಿಯನ್ನು ಪ್ರಜಾಪ್ರಭುತ್ವವು ಆಕ್ರಮಣಕ್ಕೊಳಗಾದ ಸಮಯವೆಂದು ಖಂಡಿಸಿ ಅದೇ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಆಪ್-ಎಡ್ ಬರೆಯುವುದು ಕ್ರೂರ ವಿಪರ್ಯಾಸ.

ಫಾದರ್ ಸ್ಟಾನ್‍ಸ್ವಾಮಿಯವರ ಸಾವಿಗೆ ದುಃಖಿಸುವುದು ಮತ್ತು ಮರುಗುವುದು ಸಾಕಾಗುವುದಿಲ್ಲ - ಅವರ ಬಂಧನದಲ್ಲುಂಟಾದ ಸಾವು ನಮ್ಮ ಆಕ್ರೋಶಕ್ಕೆ ಕಾರಣವಾಗಿದೆ. ಭಾರತವನ್ನು ಆಳುವ ಫ್ಯಾಸಿಸ್ಟರ ದಾಳಿಯ ವಿರುದ್ಧ ಧೈರ್ಯದಿಂದ ನಿಂತು, ಭಾರತದ ಅತ್ಯಂತ ತುಳಿತಕ್ಕೊಳಗಾದ ಜನರಿಗೆ ನ್ಯಾಯ ಮತ್ತು ಘನತೆಯನ್ನು ದೊರಕಿಸುವ ನಿಟ್ಟಿನಲ್ಲಿ ಫಾದರ್ ಸ್ಟಾನ್‍ಸ್ವಾಮಿಯವರ ಹೋರಾಟವನ್ನು ಮುಂದುವರಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸೋಣ.

 

ಸಿಪಿಐಎಂಎಲ್ ಕೇಂದ್ರ ಸಮಿತಿ