ಜನವರಿ 22 ಮತ್ತು ಜನವರಿ 26: ಭಾರತದ ಗಣರಾಜ್ಯದ ಭವಿಷ್ಯಕ್ಕಾಗಿ ಹೋರಾಟ

By CPIML (not verified) |

ಭಾರತದಾದ್ಯಂತ ಬಿಜೆಪಿ ಸರ್ಕಾರಗಳು ಮತ್ತು ಪ್ರಬಲ ಮಾಧ್ಯಮಗಳು, ವಿಶೇಷವಾಗಿ ಹಿಂದಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಅಥವಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ನಿಜವಾದ ಪ್ರಚಾರವನ್ನು ಬಿಚ್ಚಿಟ್ಟಿವೆ. ಸಂಘ ಪರಿವಾರವೂ ಸಹ ದೇಶಾದ್ಯಂತ ಉನ್ಮಾದವನ್ನು ಸೃಷ್ಟಿಸಲು ಪ್ರಮುಖ ಜನಾಂದೋಲನ ಕಾರ್ಯಕ್ರಮವನ್ನು ಘೋಷಿಸಿದೆ. ದೈವಪ್ರಭುತ್ವವಲ್ಲದ ದೇಶದಲ್ಲಿ, ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳ ಇಂತಹ ಯೋಜಿತ ಮತ್ತು ವ್ಯವಸ್ಥಿತ ರಾಜಕೀಯ ಬಳಕೆಗೆ ಜಗತ್ತು ಸಾಕ್ಷಿಯಾಗಿಲ್ಲ, ಅದೂ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಇದು ಸಾಧ್ಯವಾಗಿಲ್ಲ.

ಜನತೆಯ ಪ್ರಜಾಪ್ರಭುತ್ವಕ್ಕಾಗಿ ಅವಿಶ್ರಾಂತ ಹೋರಾಡಿದ ಕಾಮ್ರೇಡ್ ವಿನೋದ್‌ ಮಿಶ್ರಾ

By CPIML (not verified) |

ಈ ವರ್ಷ ನಾವು ಕಾಮ್ರೇಡ್ ವಿನೋದ್ ಮಿಶ್ರಾ ಅವರ ಇಪ್ಪತ್ತೈದನೇ ಸ್ಮರಣ ದಿನವನ್ನು ಆಚರಿಸುತ್ತಿದ್ದೇವೆ. ನಕ್ಸಲ್‌ಬಾರಿ ನಂತರದ ಹಂತದಲ್ಲಿ ಸಿಪಿಐ (ಎಂಎಲ್)ನ ಮರುಸಂಘಟನೆ, ವಿಸ್ತರಣೆ ಮತ್ತು ಬಲವರ್ಧನೆಗೆ ಅವರ ಐತಿಹಾಸಿಕ ಕೊಡುಗೆಯನ್ನು ನಾವು ನೆನಪಿಸಿಕೊಳ್ಳುವಾಗ ಮತ್ತು ಅವರ ಸದಾ ಸ್ಪೂರ್ತಿದಾಯಕ ಕ್ರಾಂತಿಕಾರಿ ಪರಂಪರೆಗೆ ಗೌರವ ಸಲ್ಲಿಸುವಾಗ, ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲಿನ ಫ್ಯಾಸಿಸ್ಟ್ ದಾಳಿಯನ್ನು ವಿಫಲಗೊಳಿಸುವ ಇಂದಿನ ಕೇಂದ್ರ ಸವಾಲಿನ ಹಿನ್ನೆಲೆಯಲ್ಲಿ ಅವರ ಪ್ರಮುಖ ಆಲೋಚನೆಗಳು ಮತ್ತು ಕೊಡುಗೆಗಳನ್ನು ಮರುಪರಿಶೀಲಿಸುವುದು ಹೆಚ್ಚು ಸೂಕ್ತವಾಗಿದೆ.

ಕಾಮ್ರೇಡ್ ವಿನೋದ್ ಮಿಶ್ರಾ ಅವರ 25ನೇ ಸಂಸ್ಮರಣಾ ದಿನ

By Lekha |

ಡಿಸೆಂಬರ್ 18, 2023ರ ಸಂಕಲ್ಪ

 

ಕಾಮ್ರೇಡ್ ವಿನೋದ್ ಮಿಶ್ರಾ ಅವರ 25ನೇ ಸಂಸ್ಮರಣಾ ದಿನದಂದು ಸಿಪಿಐ(ಎಂಎಲ್) ಪಕ್ಷವು ಮಹಾನ್ ಹುತಾತ್ಮರ ಮತ್ತು ಅಗಲಿದ ಮುಖಂಡರ ಕ್ರಾಂತಿಕಾರಿ ಧ್ಯೇಯಕ್ಕಾಗಿ ಪುನರಾರ್ಪಣೆ ಮಾಡಿಕೊಳ್ಳುತ್ತದೆ ಮತ್ತು ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಕಾಮ್ರೇಡ್ ವಿಎಂ ಅವರ ಕ್ರಾಂತಿಕಾರಿ ಪರಂಪರೆಯನ್ನು ಮುಂದುವರೆಸಲು ಸಂಕಲ್ಪ ಮಾಡುತ್ತದೆ.

ಕೋವಿದ್‍ನಿಂದ ಕಲಿತ ಪಾಠಗಳು

By CPIML (not verified) |

ಉದ್ಯೋಗ, ಕೂಲಿ, ವಸತಿ, ಆಹಾರ ಭದ್ರತೆ ಇವೆಲ್ಲವೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು

(ಸಿಪಿಐಎಂಎಲ್ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮತ್ತು ಎಐಸಿಸಿಟಿಯು ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ’ ರೊಜೇರಿಯೋ ಅವರೊಡನೆ, ಜೂನ್ 18ರಂದು 'ಥರ್ಡ್ ಐ' ಮಾಧ್ಯಮದ ವತಿಯಿಂದ ನಡೆಸಲಾದ ಒಂದು ಸಂದರ್ಶನ.)
 

ಬಂಧನದಲ್ಲಿದ್ದ ಸ್ಟಾನ್ ಸ್ವಾಮಿಯವರ ಸಾವಿಗೆ ಆಕ್ರೋಶ ಮತ್ತು ಶೋಕ

By CPIML (not verified) |

ಬಂಧನದಲ್ಲಿದ್ದ ಜೆಸ್ಯೂಟ್ ಸಮಾಜ ಸೇವಕರಾದ 84 ವರ್ಷ ವಯಸ್ಸಿನ ಫಾದರ್ ಸ್ಟಾನ್ ಸ್ವಾಮಿಯವರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮತ್ತು ದುಃಖದಲ್ಲಿರುವ ಜಾಖರ್ಂಡ್ ಮತ್ತು ಇಡೀ ಭಾರತದ ಬಡ ಮತ್ತು ತುಳಿತಕ್ಕೊಳಗಾದ ಜನರೊಂದಿಗೆ ಸಿಪಿಐಎಂಎಲ್ ಜೊತೆಗಿರುತ್ತದೆ. ಮೋದಿ ಆಡಳಿತದ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ), “ಭೀಮಾ ಕೋರೆಗಾಂವ್ ಪ್ರಕರಣ"ಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಪರ ಹೋರಾಟ ಮಾಡುವ ಪ್ರಮುಖ ಹೋರಾಟಗಾರನ್ನು ನಿರಂತರವಾಗಿ ಬಂಧಿಸುತ್ತಿದೆ. ಮತ್ತು ಅವರಿಗೆ ಜಾಮೀನು ನಿರಾಕರಿಸುವ ಸಲುವಾಗಿ ಕಠಿಣ ಯುಎಪಿಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ದೀರ್ಘಕಾಲದ ವರೆಗೆ ವಿಚಾರಣಾಧೀನ ಖೈದಿಯನ್ನಾಗಿ ಬಂಧನದಲ್ಲಿರಿಸಲಾಗುತ್ತಿದೆ.

ಜುಲೈ 28, 2021ರ ಪ್ರತಿಜ್ಞೆ

By CPIML (not verified) |

ಫ್ಯಾಸಿಸ್ಟ್ ಮೋದಿ ಆಡಳಿತದ ವಿರುದ್ಧ ಜನರ ನಿರ್ಣಾಯಕ ಹಂತದ ಚಳುವಳಿಗಾಗಿ ಸಿದ್ಧರಾಗಿ!

ಜುಲೈ 28, 2021, ಕಾಮ್ರೇಡ್ ಚಾರು ಮಜುಂದಾರ್ ಅವರ 49 ನೇ ವರ್ಷದ ಸ್ಮರಣಾ ದಿನಾಚರಣೆಯ ಮತ್ತು ಸಿಪಿಐ (ಎಂಎಲ್) ಪುನರ್‍ಸ್ಥಾಪನೆಯಾದ 47 ನೇ ವಾರ್ಷಿಕೋತ್ಸವದ ದಿನವಾಗಿರುತ್ತದೆ. 1970ರ ದಶಕದ ಪ್ರಾರಂಭಿಕ ವರ್ಷಗಳಲ್ಲಿ ನಡೆದ ಕುಖ್ಯಾತ 1975 ರ ತುರ್ತು ಪರಿಸ್ಥಿತಿ ಘಟನೆ ನಡೆದು ಈಗ ಐದು ದಶಕಗಳು ಕಳೆದಿದ್ದೂ, ಮತ್ತೊಮ್ಮೆ ಭಾರತ ದೇಶವು ತುರ್ತುಪರಿಸ್ಥಿತಿ ದಮನಕಾರಿ ಆಡಳಿತಕ್ಕೆ ಮರಳಿದೆ, ಈ ರೀತಿಯಲ್ಲಿ ಆಗಾಗ್ಗೆ ವಸಾಹತುಶಾಯಿ ಅವಧಿಯ ಕ್ರೌರ್ಯ ಮತ್ತು ದಬ್ಬಾಳಿಕೆ ನಡೆಸುತ್ತಿರುವುದು ಅವಮಾನಕರವಾದ ಸಂಗತಿಯಾಗಿದೆ.