ಮುಸಲ್ಮಾನ್‌ರ ವಿರುದ್ಧ ರಾಜ್ಯ ಪ್ರಯೋಜಿತ ದಾಳಿ

By ಸಿಪಿಐ-ಎಂಎಲ್ ಲಿಬರೇಶನ್ |

- ಮೈತ್ರೇಯಿ ಕೃಷ್ಣನ್ ಮತ್ತು ರಘುಪತಿ ಸಿದ್ದಯ್ಯ

 

ಕಳೆದ ಕೆಲವು ವರ್ಷಗಳಲ್ಲಿ ಮುಸ್ಲಿಮರ ಮೇಲೆ ಸಂಘಟಿತ ಮತ್ತು ಆಗಾಗ್ಗೆ ರಾಜ್ಯ ಪ್ರಾಯೋಜಿತ ದಾಳಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೆ ಕಾರ್ಮಿಕ ವರ್ಗಕ್ಕೆ ಸೇರಿದ ಮುಸ್ಲಿಮರ ಜೀವನೋಪಾಯದ ಮೇಲಿನ ದಾಳಿಗಳು ಕಳೆದ ಎರಡು ವರ್ಷಗಳಿಂದ ತೀವ್ರಗೊಂಡಿದ್ದಾವೆ.

ಗೋಲ್ವಾಲ್‍ಕರ್ ಚಿಂತನೆಯ ಭಾರತ

By ಸಿಪಿಐ-ಎಂಎಲ್ ಲಿಬರೇಶನ್ |

2021ರ ಫೆಬ್ರವರಿ 19ರಂದು ಕೇಂದ್ರ ಸಂಸ್ಕøತಿ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿಯ  ಸಂದೇಶವನ್ನು ನೀಡಿತ್ತು : “ ಮಹಾನ್ ಚಿಂತಕ, ವಿದ್ವಾಂಸ ಮತ್ತು ಮಹಾನ್ ನಾಯಕ ಎಮ್ ಎಸ್ ಗೋಲ್ವಾಲ್‍ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳು ಹಲವು ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರೆಯಲಿದೆ ”. ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆರೆಸ್ಸೆಸ್‍ನ ಸಂಸ್ಥಾಪಕ ಗೋಲ್ವಾಲ್‍ಕರ್ ಅವರ ಚಿಂತನೆ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆಯುವುದು ಹೊಸ ವಿಚಾರವೇನಲ್ಲ. ಆದರೆ ಈ ಚಿಂತನೆಗಳಲ್ಲಿ ಯಾವುದೇ ವಿದ್ವತ್ ಆಗಲೀ, ಸ್ಫೂರ್ತಿಯ ಸೆಲೆಯಾಗಲೀ ಇಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.

ಬುಲ್ಡೋಜ್ ಮಾಡಲಾದ ನ್ಯಾಯ

By vksgautam |

ಪ್ರಕ್ಷುಬ್ಧಗೊಳಿಸುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಭಾರತದಾದ್ಯಂತ ಹಿಂದೂ ಧಾರ್ಮಿಕ ಹಬ್ಬಗಳನ್ನು ನೆಪವಾಗಿಟ್ಟುಕೊಂಡು, ಆರ್‌ಎಸ್‌ಎಸ್ ಅಂಗಸಂಸ್ಥೆಗಳು ಮುಸ್ಲಿಂ ಪ್ರದೇಶಗಳ ಮೂಲಕ ಬೆದರಿಕೆಯ ಸಶಸ್ತ್ರ ಮೆರವಣಿಗೆಗಳನ್ನು ಆಯೋಜಿಸಿ, ಹಿಂದೂ ಪರಮಾಧಿಕಾರವನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಭಾರತದಲ್ಲಿ ಉಳಿಯಲು ಅವಕಾಶವಿದೆ ಎಂದು ಘೋಷಿಸುವ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮೊದಲು ರಾಮ ನವಮಿಯಂದು, ಮತ್ತು ನಂತರ ಹನುಮ ಜಯಂತಿಯಂದು, RSS-ಸಂಯೋಜಿತ ಸಂಘಟನೆಗಳು ಮುಸ್ಲಿಮರನ್ನು ಅವಮಾನಿಸುವ, ಬೆದರಿಸುವ ಮತ್ತು ದಾಳಿ ಮಾಡುವ ಉದ್ದೇಶದಿಂದ ಮೆರವಣಿಗೆಗಳನ್ನು ನಡೆಸಿ, ಮಸೀದಿಗಳನ್ನು ಧ್ವಂಸಗೊಳಿಸಿದವು.