ಜನತೆಯ ಪ್ರಜಾಪ್ರಭುತ್ವಕ್ಕಾಗಿ ಅವಿಶ್ರಾಂತ ಹೋರಾಡಿದ ಕಾಮ್ರೇಡ್ ವಿನೋದ್‌ ಮಿಶ್ರಾ

By CPIML (not verified) |

ಈ ವರ್ಷ ನಾವು ಕಾಮ್ರೇಡ್ ವಿನೋದ್ ಮಿಶ್ರಾ ಅವರ ಇಪ್ಪತ್ತೈದನೇ ಸ್ಮರಣ ದಿನವನ್ನು ಆಚರಿಸುತ್ತಿದ್ದೇವೆ. ನಕ್ಸಲ್‌ಬಾರಿ ನಂತರದ ಹಂತದಲ್ಲಿ ಸಿಪಿಐ (ಎಂಎಲ್)ನ ಮರುಸಂಘಟನೆ, ವಿಸ್ತರಣೆ ಮತ್ತು ಬಲವರ್ಧನೆಗೆ ಅವರ ಐತಿಹಾಸಿಕ ಕೊಡುಗೆಯನ್ನು ನಾವು ನೆನಪಿಸಿಕೊಳ್ಳುವಾಗ ಮತ್ತು ಅವರ ಸದಾ ಸ್ಪೂರ್ತಿದಾಯಕ ಕ್ರಾಂತಿಕಾರಿ ಪರಂಪರೆಗೆ ಗೌರವ ಸಲ್ಲಿಸುವಾಗ, ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲಿನ ಫ್ಯಾಸಿಸ್ಟ್ ದಾಳಿಯನ್ನು ವಿಫಲಗೊಳಿಸುವ ಇಂದಿನ ಕೇಂದ್ರ ಸವಾಲಿನ ಹಿನ್ನೆಲೆಯಲ್ಲಿ ಅವರ ಪ್ರಮುಖ ಆಲೋಚನೆಗಳು ಮತ್ತು ಕೊಡುಗೆಗಳನ್ನು ಮರುಪರಿಶೀಲಿಸುವುದು ಹೆಚ್ಚು ಸೂಕ್ತವಾಗಿದೆ.

ಕಾಮ್ರೇಡ್ ವಿನೋದ್ ಮಿಶ್ರಾ ಅವರ 25ನೇ ಸಂಸ್ಮರಣಾ ದಿನ

By Lekha |

ಡಿಸೆಂಬರ್ 18, 2023ರ ಸಂಕಲ್ಪ

 

ಕಾಮ್ರೇಡ್ ವಿನೋದ್ ಮಿಶ್ರಾ ಅವರ 25ನೇ ಸಂಸ್ಮರಣಾ ದಿನದಂದು ಸಿಪಿಐ(ಎಂಎಲ್) ಪಕ್ಷವು ಮಹಾನ್ ಹುತಾತ್ಮರ ಮತ್ತು ಅಗಲಿದ ಮುಖಂಡರ ಕ್ರಾಂತಿಕಾರಿ ಧ್ಯೇಯಕ್ಕಾಗಿ ಪುನರಾರ್ಪಣೆ ಮಾಡಿಕೊಳ್ಳುತ್ತದೆ ಮತ್ತು ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಕಾಮ್ರೇಡ್ ವಿಎಂ ಅವರ ಕ್ರಾಂತಿಕಾರಿ ಪರಂಪರೆಯನ್ನು ಮುಂದುವರೆಸಲು ಸಂಕಲ್ಪ ಮಾಡುತ್ತದೆ.

ಚರಿತ್ರೆಯ ಪುನರಾವಲೋಕನ

By vksgautam |

- ವಿನೋದ್‌ ಮಿಶ್ರ

ಇತ್ತೀಚಿನ ದಿನಗಳಲ್ಲಿ ಅತಿ ಗಂಭೀರವಾಗಿ ಚರ್ಚೆಗೊಳಗಾಗುತ್ತಿರುವ ವಿಚಾರ ಎಂದರೆ ಕಾಮ್ರೇಡ್‌ ಚಾರು ಮಜೂಂದಾರ್‌ ಪ್ರತಿಪಾದಿಸಿದ “ ನಿರ್ಮೂಲನ ”ದ ಪ್ರಶ್ನೆ. ಇದರಲ್ಲಿ ಮಾರ್ಕ್ಸ್‌ವಾದದ ಅಂಶ ಇಲ್ಲ ಎಂತಲೂ, ಇದು ಕೇವಲ ವ್ಯಕ್ತಿಗತ ಭಯೋತ್ಪಾದನೆಯೆಂದೂ, ಇದರಿಂದ ಕೇವಲ ನಷ್ಟವೇ ಹೆಚ್ಚಾಗಿದೆ ಎಂದೂ ಹೇಳಲಾಗುತ್ತಿದೆ. ಇದೇ ವೇಳೆ ಸಾಮೂಹಿಕ ಹೋರಾಟ ಮತ್ತು ಸಶಸ್ತ್ರ ಹೋರಾಟವನ್ನು ಒಂದಾಗಿಸುವ ಪ್ರಸ್ತಾವನೆಗಳೂ ಬರುತ್ತಿದ್ದು, ಈ ಕಾರಣಕ್ಕಾಗಿಯೇ ʼನಿರ್ಮೂಲʼದ ಹಾದಿಯನ್ನು ಖಂಡಿಸಬೇಕು ಎಂದು ಹೇಳಲಾಗುತ್ತಿದೆ.