ದೀಪಂಕರ್ ಭಟ್ಟಾಚಾರ್ಯ


ಮಹಿಳಾ ಮೀಸಲಾತಿ ಮಸೂದೆಯನ್ನು ದೀರ್ಘಕಾಲದಿಂದ ಅಂಗೀಕರಿಸದೆ ಮುಂದೂಡಲಾಗುತ್ತಿತ್ತು, ಇದನ್ನು ಅಂಗೀಕರಿಸುವುದಕ್ಕೆ ಪ್ರಧಾನಿ ಮೋದಿಯವರ ಇಚ್ಛಾಸಕ್ತಿಯೇ ಕಾರಣವೆಂದು ರಾಜಕೀಯ ದುಷ್ಪ್ರೇರಿತ ಪ್ರಚಾರವನ್ನು ಬಿಜೆಪಿ ಇಂದು ಮಾಡುತ್ತಿದೆ. ರಾಜಕೀಯ ದುಷ್ಪ್ರೇರಿತ ಪ್ರಚಾರದಲ್ಲಿ ಈ ದೇಶದ ಪ್ರಜೆಗಳಿಗೆ ಹೇಳದೇ ಇರುವುದೇನೆಂದರೆ, ೨೦೧೦ರಲ್ಲಿಯೇ ಈ ಮಸೂದೆ ರಾಜ್ಯಸಭೆಯಲ್ಲಿ  ಅಂಗೀಕಾರಗೊಂಡಿತ್ತು ಎಂಬುದನ್ನು, 2014ರಿಂದ ಇಲ್ಲಿಯ ವರೆಗೆ ಅಂದರೆ ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ನರೇಂದ್ರಮೋದಿಯವರಿಗೆ ಈ ಮಸೂದೆ ಅಂಗೀಕರಿಸಲು ಇಚ್ಛಾಸಕ್ತಿ ಇರಲಿಲ್ಲ ಎಂಬುದನ್ನು, ಈ ಮಸೂದೆ ಇಷ್ಟು ದೀರ್ಘಕಾಲ ಅಂಗೀಕರವಾಗದೇ ಇರುವುದಕ್ಕೆ ಮೋದಿ ಆಡಳಿತವೂ ಹೊಣೆ ಎಂಬುದನ್ನು ಮತ್ತು ಮಸೂದೆಯನ್ನು ಅಂಗೀಕರಿಸಿದ ನಂತರವೂ, ಅದರ ಅನುಷ್ಠಾನದಲ್ಲಿ ವಿಳಂಬವಾಗುವ ರೀತಿಯಲ್ಲಿ ಕಾಯ್ದೆಯನ್ನು ರಚಿಸಲಾಗಿದೆ ಎಂಬ ಸತ್ಯ ಸಂಗಾತಿಗಳನ್ನು ಪ್ರಜೆಗಳಿಂದ ಬಚ್ಚಿಡಲಾಗುತ್ತಿದೆ.

1980ರ ದಶಕದ ಆರಂಭದಲ್ಲಿ ಪ್ರಮೀಳಾ ದಂಡವತೆಯವರು ಮೊಟ್ಟ ಮೊದಲ ಬಾರಿಗೆ ಈ ಮಸೂದೆಯನ್ನು ಖಾಸಗಿ ಮಸೂದೆಯಾಗಿ ಮಂಡಿಸಿದ್ದು, ಈ ಮಸೂದೆಯು ನಾಲ್ಕು ದಶಕಗಳ ಶಾಸಕಾಂಗ ಇತಿಹಾಸವನ್ನು ಹೊಂದಿದೆ. ಇಷ್ಟೆಲ್ಲಾ ವಿವಾದ ಮತ್ತು ಚರ್ಚೆಯ ಇತಿಹಾಸವನ್ನು ಹೊಂದಿರುವ ಈ ಮಸೂದೆಯು ನಮಗೆ ಅತ್ಯಂತ ಸಂಪೂರ್ಣ ಮತ್ತು ಸುಧಾರಿತ ಆವೃತ್ತಿಯನ್ನು ನೀಡಬೇಕಾಗಿತ್ತು, ಆದರೂ ಇದು ಅತ್ಯಂತ ಅವಸರದಲ್ಲಿ ತಯಾರು ಮಾಡಿರುವಂತೆಯೂ ಮತ್ತು ಅನುಷ್ಠಾನದ ಬಗ್ಗೆ ಸುಳಿವು ಇಲ್ಲದಿರುವುದು ಕಂಡುಬರುತ್ತದೆ.

ಲೋಕಸಭೆಯಲ್ಲಿ ನಿನ್ನೆ ಅಂಗೀಕರಿಸಲ್ಪಟ್ಟ ಮಸೂದೆಯು ಈ ಕೆಳಗಿನ ಮೂರು ಅಸ್ಪಷ್ಟವಾದ ಅಂಶಗಳನ್ನು ಹೊಂದಿದೆ: 
1. ಜನಗಣತಿ ಮತ್ತು ಕ್ಷೇತ್ರಪುನರ್‌ವಿಂಗಡನೆ ಎಂಬ ಎರಡು ಬೃಹತ್ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವಂತಹ ಈ ಕಾರ್ಯಗಳನ್ನು ಸಂಪೂರ್ಣಗೊಳಿಸಿದ ನಂತರ ಈ ಮಸೂದೆಯನ್ನು ಜಾರಿಗೊಳಿಸುವುದಾಗಿ ಹೇಳಿರುವುದು, ಈ ಕಾಯ್ದೆ ಜಾರಿಗೊಳ್ಳುವ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡಿದೆ. 
2. ಈ ಮಸೂದೆಯಲ್ಲಿ ಮಹಿಳೆಯರ ಎಲ್ಲಾ ವಿಭಾಗಗಳಿಗೆ, ವಿಶೇಷವಾಗಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಹಿಂದುಳಿದ ಸಮುದಾಯ ಮತ್ತು ಇತರ ವಂಚಿತ ವರ್ಗಗಳಿಗೆ ಸಾಕಷ್ಟು ಪ್ರಾತಿನಿಧ್ಯಕ್ಕೆ ಅವಕಾಶವಿಲ್ಲ. 
3. ರಾಜ್ಯ ಸಭೆ ಮತ್ತು ವಿಧಾನ ಪರಿಷತ್ತುಗಳನ್ನು ಮಹಿಳಾ ಮೀಸಲಾತಿ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 
ಹಾಗಯೇ, ಏಕೆ ಭಾರತದ ಈ ಶಾಸನವನ್ನು ಈಗ ಜಟಿಲಗೊಳಿಸಲಾಗುತ್ತಿದೆ? ಮಹಿಳಾ ಮೀಸಲಾತಿಯನ್ನು ‘ನಾರಿಶಕ್ತಿ ವಂದನೆ’ ಎಂದು ಕರೆಯುವುದೇಕೆ? ಅದರಲ್ಲೂ ನಾರಿಶಕ್ತಿ ವಂಚನೆಯನ್ನೆ ಈ ಸರ್ಕಾರ ಮಾಡುತ್ತಿರುವುದು. ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಎಂದು ಸಾರುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಮಹಿಳಾ ಸಂಸದರು ಪ್ರಧಾನ ಮಂತ್ರಿಗಳಿಂದಲೇ ಸಬಲೀಕರಣಗೊಂಡಿದ್ದಾರೆ ಮತ್ತು ರಾಷ್ಟ್ರಪತಿ ಮುರ್ಮುರವರು ಅಧಿಕಾರದಲ್ಲಿರುವುದಲ್ಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಹೊಸ ಸಂಸತ್ ಭವನದ ಉದ್ಘಟನೆಯ ಐತಿಹಾಸಿಕ ಸಂದರ್ಭದಲ್ಲಿ ದೂರವಿಟ್ಟಿದ್ದರು ಎಂಬುದನ್ನು ಮರೆತು ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಎಂದು ಮಾತನಾಡಿರುವುದು ಮಾತ್ರ ಕ್ಷೋಬೆಯಲ್ಲ.