2021ರ ಫೆಬ್ರವರಿ 19ರಂದು ಕೇಂದ್ರ ಸಂಸ್ಕøತಿ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿಯ ಸಂದೇಶವನ್ನು ನೀಡಿತ್ತು : “ ಮಹಾನ್ ಚಿಂತಕ, ವಿದ್ವಾಂಸ ಮತ್ತು ಮಹಾನ್ ನಾಯಕ ಎಮ್ ಎಸ್ ಗೋಲ್ವಾಲ್‍ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳು ಹಲವು ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರೆಯಲಿದೆ ”. ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆರೆಸ್ಸೆಸ್‍ನ ಸಂಸ್ಥಾಪಕ ಗೋಲ್ವಾಲ್‍ಕರ್ ಅವರ ಚಿಂತನೆ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆಯುವುದು ಹೊಸ ವಿಚಾರವೇನಲ್ಲ. ಆದರೆ ಈ ಚಿಂತನೆಗಳಲ್ಲಿ ಯಾವುದೇ ವಿದ್ವತ್ ಆಗಲೀ, ಸ್ಫೂರ್ತಿಯ ಸೆಲೆಯಾಗಲೀ ಇಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.