ಜುಲೈ 28, 2021ರ ಪ್ರತಿಜ್ಞೆ

By CPIML (not verified) |

ಫ್ಯಾಸಿಸ್ಟ್ ಮೋದಿ ಆಡಳಿತದ ವಿರುದ್ಧ ಜನರ ನಿರ್ಣಾಯಕ ಹಂತದ ಚಳುವಳಿಗಾಗಿ ಸಿದ್ಧರಾಗಿ!

ಜುಲೈ 28, 2021, ಕಾಮ್ರೇಡ್ ಚಾರು ಮಜುಂದಾರ್ ಅವರ 49 ನೇ ವರ್ಷದ ಸ್ಮರಣಾ ದಿನಾಚರಣೆಯ ಮತ್ತು ಸಿಪಿಐ (ಎಂಎಲ್) ಪುನರ್‍ಸ್ಥಾಪನೆಯಾದ 47 ನೇ ವಾರ್ಷಿಕೋತ್ಸವದ ದಿನವಾಗಿರುತ್ತದೆ. 1970ರ ದಶಕದ ಪ್ರಾರಂಭಿಕ ವರ್ಷಗಳಲ್ಲಿ ನಡೆದ ಕುಖ್ಯಾತ 1975 ರ ತುರ್ತು ಪರಿಸ್ಥಿತಿ ಘಟನೆ ನಡೆದು ಈಗ ಐದು ದಶಕಗಳು ಕಳೆದಿದ್ದೂ, ಮತ್ತೊಮ್ಮೆ ಭಾರತ ದೇಶವು ತುರ್ತುಪರಿಸ್ಥಿತಿ ದಮನಕಾರಿ ಆಡಳಿತಕ್ಕೆ ಮರಳಿದೆ, ಈ ರೀತಿಯಲ್ಲಿ ಆಗಾಗ್ಗೆ ವಸಾಹತುಶಾಯಿ ಅವಧಿಯ ಕ್ರೌರ್ಯ ಮತ್ತು ದಬ್ಬಾಳಿಕೆ ನಡೆಸುತ್ತಿರುವುದು ಅವಮಾನಕರವಾದ ಸಂಗತಿಯಾಗಿದೆ.