ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಲಾದ ಯೋಜಿತವಲ್ಲದ ಲಾಕ್‍ಡೌನ್‍ಗಳು ಮತ್ತು ನೀತಿಗಳಿಂದ ಭಾರತವು ಹಿಂದೆಂದೂ ಕಂಡರೀಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಒಟ್ಟಾರೆ ಪರಿಣಾಮದಿಂದಾಗಿ ಕೋಟಿಗಟ್ಟಲೆ ಜನರು ಕಡುಬಡತನಕ್ಕೆ ಜಾರಿದ್ದಾರೆ ಮತ್ತು ಬದುಕಲು ಹೆಣಗಾಡುತ್ತಿದ್ದಾರೆ - 84% ಕುಟುಂಬಗಳ ಆದಾಯವು 2021 ರಲ್ಲಿ ಕುಸಿದಿದೆ. ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಸೃಷ್ಠಿಯಾಗಿರುವ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು ಜನರು ಭಾರತದಲ್ಲಿದ್ದಾರೆ, ಇದೇ ಭಾರತದ ಸಾಧನೆ. ಅದೇ ಸಮಯದಲ್ಲಿ, ಶ್ರೀಮಂತರ ಮೇಲಿನ ತೆರಿಗೆಯನ್ನು ಮೋದಿ ಸರ್ಕಾರ ಕಡಿಮೆ ಮಾಡಿದ್ದರಿಂದ ಶ್ರೀಮಂತರು ಶ್ರೀಮಂತರಾಗಿದ್ದಾರೆ; ಸಂಪತ್ತು ತೆರಿಗೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕಾಪೆರ್Çರೇಟ್ ತೆರಿಗೆಗಳನ್ನು 39% ರಿಂದ 22% ಕ್ಕೆ ಇಳಿಸಲಾಗಿದೆ. ಭಾರತದಲ್ಲಿ ಬಿಲಿಯನೇರ್‍ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿದೆ. ಚೀನಾ ಮತ್ತು ಯುಎಸ್‍ಎ ದೇಶಗಳ ನಂತರ ಭಾರತವು ಈಗ ಮೂರನೇ ಅತಿ ಹೆಚ್ಚು ಬಿಲಿಯನೇರ್‍ಗಳನ್ನು ಹೊಂದಿರುವ ರಾಷ್ಟ್ರವಾಗಿದೆ.
ಕಾರ್ಪೋರೇಟ್ ಪರವಾದ ಮತ್ತು ಕೋಮುವಾದದ ಪ್ರಮುಖ ಕಾರ್ಯಸೂಚಿಗಳನ್ನು ಹೊಂದಿರುವ ಬಿಜೆಪಿಯ ಫ್ಯಾಸಿಸ್ಟ್ ಆಳ್ವಿಕೆಯು ಈ ದುಸ್ಥಿತಿಗೆ ನೇರ ಪರಿಣಾಮವಾಗಿದೆ. ಸರ್ಕಾರವು ಕೃಷಿ ಕಾನೂನುಗಳು, ಕಾರ್ಮಿಕ ಸಂಹಿತೆಗಳು, ಕಾರ್ಮಿಕ ವರ್ಗದ ಮೇಲಿನ ತೆರಿಗೆಗಳನ್ನು ಹೆಚ್ಚಿಸುವುದು ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಜನವಿರೋಧಿ ಕಾನೂನುಗಳು ಮತ್ತು ನೀತಿಗಳನ್ನು ಜಾರಿ ಮಾಡುವುದಕ್ಕಾಗಿ ಸಾಂಕ್ರಾಮಿಕ ರೋಗ ಇದ್ದಂತಹ ಸಮಯವನ್ನು ದುರ್ಬಳಕೆ ಮಾಡಿಕೊಂಡಿದೆ. ಇದರ ವಿರುದ್ಧ ಧ್ವನಿಯಾಗಬಲ್ಲ ಸಾಮೂಹಿಕ ಪ್ರತಿರೋಧವನ್ನು ಕಡಿಮೆಗೊಳಿಸುವುದಕ್ಕಾಗಿ, ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸುವುದಕ್ಕಾಗಿಯೇ ತಾನು ರೂಪಿಸಿರುವ ಹಿಂದುತ್ವ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿತ್ತು.
ಕರ್ನಾಟಕವು ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು ಎಂದು ಸಂಘಪರಿವಾರ ಪದೇ ಪದೇ ಹೇಳುತ್ತಿದೆ. ಸಂಘ ಪರಿವಾರ ಹಲವು ದಶಕಗಳಿಂದ ಮಾಡಿಕೊಂಡು ಬರುತ್ತೀರುವ ಸಮಾಜ ಹೊಡೆಯುವ ಕೆಲಸಗಳು ಇಂದು ಕರ್ನಾಟಕದ ಹಲವಾರು ಭಾಗಗಳನ್ನು ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶವನ್ನು ಕೋಮು ಧ್ರುವೀಕರಣಗೊಳಿಸಿವೆ. ಮುಸ್ಲಿಂರನ್ನು ಹತ್ಯೆ ಮಾಡುವುದಕ್ಕಾಗಿ, ಪ್ರತ್ಯೇಕಿಸುವುದಕ್ಕಾಗಿ ಮತ್ತು ಬಹಿಷ್ಕರಿಸುವುದಕ್ಕಾಗಿ ಗೋಮಾಂಸ, ಅವರ ಸಾಮೂಹಿಕ ಪ್ರಾರ್ಥನೆ, ಆಜಾನ್, ತಲೆಗೆ ಹಾಕುವ ಟೋಪಿ, ಉರ್ದು ಭಾಷೆ ಮತ್ತು ಪ್ರಸ್ತುತದಲ್ಲಿ ಹಿಜಾಬ್ ವಿಚಾರಗಳನ್ನು ಹಿಂದೂ ಮೂಲಭೂತವಾದಿಗಳು ನೆಪಮಾಡಿಕೊಂಡಿದ್ದಾರೆ.
1960 ರ ದಶಕದಿಂದ ಕರ್ನಾಟಕವು ತನ್ನ ಆಡಳಿತ ವರ್ಗದ ಸ್ವರೂಪವನ್ನು ಬದಲಿಸಿದ ಕನಿಷ್ಠ ಮೂರು ಪ್ರಮುಖ ರಾಜಕೀಯ ಪಲ್ಲಟಗಳನ್ನು ಕಂಡಿದೆ ಎಂದು ರಾಜಕೀಯ ವಿಮರ್ಶಕರಾದ ಎ. ನಾರಾಯಣರವರು ವಾದಿಸುತ್ತಾರೆ. ಉನ್ಮಾದಿತ ಕೋಮುವಾದ ಮತ್ತು ಅಸಭ್ಯ ಕಾರ್ಪೊರೇಟ್ ತುಷ್ಟೀಕರಣದಿಂದ ನಿರೂಪಿಸಲ್ಪಟ್ಟಿರುವ ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯು 4 ನೇ ಪ್ರಮುಖ ರಾಜಕೀಯ ಬದಲಾವಣೆಯನ್ನು ಪ್ರತಿನಿಧಿಸುತ್ತದೆ ಎಂಬ ಮತ್ತೊಂದು ಅಂಶವನ್ನು ಸೇರಿಸಬಹುದು.
ಸ್ವಾತಂತ್ರ್ಯದ ನಂತರದ ಮೂರು ದಶಕಗಳ ರಾಜಕೀಯ ಕಾಲವು ಕಾಂಗ್ರೆಸ್ ಏಕಸ್ವಾಮ್ಯದಿಂದ ಗುರುತಿಸಲ್ಪಟ್ಟಿದೆ, ಇದನ್ನು ಎರಡು ಪ್ರಬಲ ಜಾತಿಗಳಾದ ಒಕ್ಕಲಿಗರು ಮತ್ತು ಲಿಂಗಾಯತರು ನಿಯಂತ್ರಿಸಿದ್ದಾರೆ. ಕರ್ನಾಟಕದ ಮೊದಲ ಪ್ರಮುಖ ರಾಜಕೀಯ ಬದಲಾವಣೆಯು ದೇವರಾಜ್ ಅರಸ್ ಮತ್ತು ಅವರ ಅಹಿಂದ ಸೂತ್ರವು ಈ ಜಾತಿ ಪ್ರಾಬಲ್ಯಕ್ಕೆ ಸವಾಲಾಗಿತ್ತು, ಸಾಂಪ್ರದಾಯಿಕವಾಗಿ ಹಿಂದುಳಿದ ಸಾಮಾಜಿಕ ಗುಂಪುಗಳ ಸಾಮಾಜಿಕ ಒಕ್ಕೂಟವು ಅವರನ್ನು 1972 ರಲ್ಲಿ ಅಧಿಕಾರಕ್ಕೆ ತಂದಿತು. ಈ ಪ್ರಬಲ ಜಾತಿಗಳು ಮತ್ತು ಇತರ ಹಿಂದುಳಿದ ಸಾಮಾಜಿಕ ಗುಂಪುಗಳ ನಡುವೆ ಇದ್ದಂತಹ ಅಧಿಕಾರದ ಸಮತೋಲನವನ್ನು ಇದು ಬದಲಾಯಿಸಿತೆಂದು ಮತ್ತು "ಒಕ್ಕಲಿಗ ಮತ್ತು ಲಿಂಗಾಯತ ದಬ್ಬಾಳಿಕೆಯಿಂದ ಬಳಲುತ್ತಿರುವ ಗುಂಪುಗಳ ರಾಜಕೀಯ ಪ್ರಾಮುಖ್ಯತೆಯನ್ನು" ಸಾರಿತು ಎಂದು ಬ್ರಿಟಿಷ್ ವಿದ್ವಾಂಸ ಜೇಮ್ಸ್ ಮ್ಯಾನರ್ ವಾದಿಸುತ್ತಾರೆ.
ಎರಡನೇ ಪ್ರಮುಖ ರಾಜಕೀಯ ಪಲ್ಲಟವು 1980ರ ದಶಕದ ಆರಂಭದಲ್ಲಿ ಜರುಗಿತು. ಇದು ಕಾಂಗ್ರೆಸ್‍ನ ಚುನಾವಣಾ ಏಕಸ್ವಾಮ್ಯವನ್ನು ಕೊನೆಗೊಳಿಸಿತು ಮತ್ತು ಈ ಕಾಲಗಟ್ಟದಲ್ಲಿ ಜನತಾ ಪಕ್ಷದ ರೂಪದಲ್ಲಿ (ನಂತರ ಜನತಾ ದಳವಾಯಿತು) ಪ್ರಾದೇಶಿಕ ಕೇಂದ್ರೀಕೃತ ರಾಜಕೀಯ ಪರ್ಯಾಯವು ಹೊರಹೊಮ್ಮಿತು. ಕುತೂಹಲಕಾರಿ ಅಂಶವೆಂದರೇ, ಅರಸ್ ಕಾಲದಲ್ಲಿ ಕಾಂಗ್ರೆಸ್ ತನ್ನ ಸಾಮಾಜಿಕ ತಳಹದಿಯನ್ನು ಬೆಳೆಸಿಕೊಂಡಿತು. ಈಗ ಜನತಾ ಪಕ್ಷವು ಒಕ್ಕಲಿಗರು ಮತ್ತು ಲಿಂಗಾಯತರ ನಡುವಿನ ಪ್ರಾಬಲ್ಯ ಪ್ರದರ್ಶನಕ್ಕಾಗಿ ಹೊಸ ಅಖಾಡವಾಗಿದೆ.
ಮೂರನೇ ಪ್ರಮುಖ ರಾಜಕೀಯ ಪಲ್ಲಟವೆಂದರೆ ಕರ್ನಾಟಕದಲ್ಲಿ ಬಿಜೆಪಿಯು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದನ್ನು ಗುರುತಿಸುವ ಅವಧಿಯಾಗಿದ್ದು, ಜನತಾ ದಳ ಕ್ಷೀಣ ಸುತ್ತಿರುವ ಕಾಲವಾಗಿದೆ. 1990ರ ದಶಕದ ಅಂತ್ಯದ ವೇಳೆಗೆ ಎಚ್.ಡಿ. ದೇವೇಗೌಡರು ಒಕ್ಕಲಿಗರನ್ನು ಒಟ್ಟುಗೂಡಿಸಿ ಜನತಾ ದಳ (ಜಾತ್ಯತೀತ) ರಚಿಸಿದರು, ಆದರೆ ಲಿಂಗಾಯತರು ಜೆ.ಎಚ್. ಪಟೇಲರ ನೇತೃದಲ್ಲಿ ಒಗ್ಗೂಡಿ ಜೆಡಿ(ಯು) ರಚಿಸಿ ಬಿಜೆಪಿಯೊಂದಿಗೆ ಹೊಂದಾಣ ಕೆ ಮಾಡಿಕೊಂಡರು. ಕೆಲವೇ ವರ್ಷಗಳಲ್ಲಿ, ರಾಜ್ಯ ರಾಜಕೀಯದಲ್ಲಿ ಬಲಪಂಥೀಯ ಬದಲಾವಣೆಯು ಹಂತಹಂತವಾಗಿ ಬೇರೂರಿದಂತೆ ಕರ್ನಾಟಕವು ದಕ್ಷಿಣದಲ್ಲಿ ಬಿಜೆಪಿ ಸರ್ಕಾರವನ್ನು ಹೊಂದಿರುವ ಮೊದಲ ರಾಜ್ಯವಾಯಿತು. ಬ್ರಾಹ್ಮಣರು, ಲಿಂಗಾಯತರು, ಕೊಡವರು, ದಲಿತರು ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ವಿವಿಧ ಸಾಮಾಜಿಕ ಗುಂಪುಗಳ ಒಕ್ಕೂಟವನ್ನು ಬಿಜೆಪಿ ಹೊಂದಿರುವಾಗ, ಒಕ್ಕಲಿಗರು ಮತ್ತು ಮುಸ್ಲಿಂ ಸಮುದಾಯದ ಕೆಲ ವರ್ಗ ಇನ್ನೂ ಸಹ ಜೆಡಿ(ಎಸ್)ನೊಂದಿಗೆ ಇದ್ದಾವೆ. ಕಾಂಗ್ರೆಸ್ ಇನ್ನೂ ಸಹ ಅಹಿಂದ ಸೂತ್ರಕ್ಕೆ ಅಂಟಿಕೊಂಡಿದೆ.
ಈ ಮೂರು ರಾಜಕೀಯ ಪಲ್ಲಟಗಳ ಕಾಲದಲ್ಲಿ ವಿವಿಧ ಸಾಮಾಜಿಕ ಗುಂಪುಗಳ ನಡುವೆ ಅಧಿಕಾರದ ಪುನರ್ವಿತರಣೆಯಾಗಿದೆ, ಆದರೆ ಆರ್ಥಿಕ ನೀತಿಗಳ ಮೇಲೆ ಒಮ್ಮತವಾದ ಅಭಿಪ್ರಾಯವಿದ್ದು, ಅದೇ ಇನ್ನೂ ಮುಂದುವರಿಯುತ್ತಿದೆ.
ಜುಲೈ 2019 ರಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿಯು ಉನ್ಮಾದಿತ ಕೋಮು ಧ್ರುವೀಕರಣ ಮತ್ತು ಕಾರ್ಪೊರೇಟ್ ಸ್ನೇಹಿ ಆರ್ಥಿಕ ನೀತಿಗಳಿಗೆ ಕುಖ್ಯಾತಿ ಪಡೆದಿದ್ದು ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ಬದಲಾವಣೆಯನ್ನು ತರುತ್ತದೆ.
ಬಿಜೆಪಿಯು 2014 ರಲ್ಲಿ ಕೇಂದ್ರದಲ್ಲಿ ಅಧಿಕಾರವನ್ನು ಹಿಡಿದ ನಂತರ, ಕಲ್ಯಾಣ ರಾಜ್ಯದ ಮಾರ್ಗಸೂಚಿಗಳನ್ನು ಕಿತ್ತುಹಾಕುವುದರ ಮೂಲಕ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಆರ್ಥಿಕ ಕಾರ್ಯಸೂಚಿಗಳನ್ನು ನಿರ್ದಯವಾಗಿ ಜಾರಿಗೊಳಿಸುತ್ತಿದೆ. ಯುದ್ಧಗಳು, ದಂಗೆಗಳು, ಭಯೋತ್ಪಾದಕ ದಾಳಿಗಳು, ಮಾರುಕಟ್ಟೆ ಕುಸಿತಗಳು ಅಥವಾ ನೈಸರ್ಗಿಕ ವಿಕೋಪಗಳಂತಹ ಸಂಧರ್ಭಗಳಲ್ಲಿ ಸಾರ್ವಜನಿಕರಲ್ಲಿ ಉಂಟಾಗುವ ಸಾಮೂಹಿಕ ದಿಗ್ಭ್ರಮೆಯನ್ನು ದುರುಪಯೋಗ ಪಡಿಸಿಕೊಂಡು ಕ್ರೂರ ತಂತ್ರಗಳನ್ನು ರೂಪಿಸುವುದಕ್ಕೆ ನವೋಮಿ ಕ್ಲೇನ್ ಅವರು "ಆಘಾತ ಸಿದ್ಧಾಂತ" ಎಂದು ಕರೆಯುತ್ತಾರೆ. ಇದೇ ಮಾದರಿಯಲ್ಲಿ ಬಿಜೆಪಿ ಸರ್ಕಾರವು 2014 ರಿಂದಲೂ ಗುರಿಯಾಗಿರಿಸಿಕೊಂಡಿರುವ ಕಾರ್ಪೊರೇಟ್ ಪರವಾದ ನೀತಿಗಳನ್ನು ಜಾರಿಗೊಳಿಸುವುದಕ್ಕೆ ಕೋವಿಡ್ ಸಾಂಕ್ರಾಮಿಕವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ವಿಪತ್ತಿನಿಂದ ರಾಜ್ಯದಲ್ಲಿ ದುಡಿಯುವ ಜನಸಾಮಾನ್ಯರ ಮೇಲೆ ಉಂಟಾಗಿದ್ದ ಪರಿಣಾಮವನ್ನು ಸಹ ಲೆಕ್ಕಿಸದೇ, ಕಾರ್ಮಿಕ, ಕೃಷಿ, ಭೂಮಾಲೀಕತ್ವ, ಕೈಗಾರಿಕೆಗಳಿಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕೇಂದ್ರ ಮತ್ತು ಕರ್ನಾಟಕದಲ್ಲಿ ಆಡಳತದಲ್ಲಿರುವ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದೆ.
ಪ್ರಭಾತ್ ಪಟ್ನಾಯಕ್ ಅವರು ಪ್ರಜಾಪ್ರಭುತ್ವದ ಮೇಲಿನ ಈ ನವಫ್ಯಾಸಿಸ್ಟ್ ಆಕ್ರಮಣವು ಬಿಕ್ಕಟ್ಟಿನಿಂದ ಪಾರಾಗಲು ನವ ಉದಾರವಾದಿ ಬಂಡವಾಳಶಾಹಿಯ ಭಾಗದ ಪ್ರಯತ್ನವಾಗಿದೆ ಎಂದು ವಾದಿಸುತ್ತಾರೆ, ಕಾರ್ಪೊರೇಟ್ ಬಂಡವಾಳದ ಬೆಂಬಲದೊಂದಿಗೆ ಬೃಹತ್ ಹಣಕಾಸಿನ ಸಂಪನ್ಮೂಲಗಳಿಗೆ ಪ್ರವೇಶ ಮತ್ತು ಕಾಪೆರ್Çರೇಟ್-ಮಾಲೀಕತ್ವದ ಮಾಧ್ಯಮ ಮತ್ತು ಇತರ ಅಭಿಪ್ರಾಯಗಳ ಮೇಲೆ ನಿಯಂತ್ರಣವನ್ನು ಒದಗಿಸುತ್ತದೆ- ಮಾಡುವುದು.
ಡಿಸೆಂಬರ್ 2021 ರ “ರಾಜ್ಯಗಳ ರಾಜ್ಯ” ವರದಿಯಲ್ಲಿ, ಕರ್ನಾಟಕವು ದೇಶದ 20 ದೊಡ್ಡ ರಾಜ್ಯಗಳಲ್ಲಿ 10 ನೇ ಸ್ಥಾನದಲ್ಲಿದೆ. ಹಲವಾರು ಸಾಧನೆಗಳೊಂದಿಗೆ ಪ್ರಗತಿಪರ ರಾಜ್ಯವೆಂದು ಖ್ಯಾತಿ ಹೊಂದಿದ ನಮ್ಮ ರಾಜ್ಯಕ್ಕೆ, ಇದು ನಕಾರಾತ್ಮಕ ಚಿತ್ರಣವನ್ನು ನೀಡುತ್ತದೆ. ಅದರಲ್ಲೂ ಕೆಲವು ಕ್ಷೇತ್ರಗಳಲ್ಲಿ ಕರ್ನಾಟಕದ ಸಾಧನೆಯನ್ನು ನೋಡಿದರೆ ಬೇಸರವಾಗುತ್ತದೆ. ಆಡಳಿತದಲ್ಲಿ 15, ಪ್ರವಾಸೋದ್ಯಮದಲ್ಲಿ 16 ಮತ್ತು ಕೃಷಿಯಲ್ಲಿ 18 ಸ್ಥಾನದಲ್ಲಿದೆ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಇದು ಕೊನೆಯ ಸ್ಥಾನ 20ನ್ನು ಪಡೆದಿದ್ದು ತಳಮಟ್ಟಕ್ಕೆ ತಲುಪುವ ಮೂಲಕ ಅತೀ ಕಳಪೆಯಾಗಿದೆ. ಇದು ರಾಜ್ಯದ ಬಹುಪಾಲು ಜನರು ಎದುರಿಸುತ್ತಿರುವ ಗಂಭೀರ ಬದುಕುಳಿಯುವ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತದೆ.
ಈ ಹಂತದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪನವರಿಂದ ಬಸವರಾಜ ಬೊಮ್ಮಾಯಿವರೆಗೆ ಅಧಿಕಾರ ಹಸ್ತಾಂತರವಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊಟ್ಟಮೊದಲ ಸರ್ಕಾರದ ವಾಸ್ತುಶಿಲ್ಪಿಯಾದ ಯಡಿಯೂರಪ್ಪನವರ ಪ್ರಭಾವವನ್ನು ಕಡಿಮೆಗೊಳಿಸಿದ್ದನ್ನು ಊಹಿಸಲು ಸಾಧ್ಯವಿರಲಿಲ್ಲ. ತಬ್ಲೀಘಿ ಜಮಾತ್ ಅನ್ನು ಕೋಮುವಾದಕ್ಕೆ ಬಳಸುವವರ ವಿರುದ್ಧ ದಿನಾಂಕ 06.04.2020 ರಂದು ಯಡಿಯೂರಪ್ಪನವರು ಎಚ್ಚರಿಕೆ ನೀಡಿ ಹೇಳಿಕೆಯನ್ನು ನೀಡುವ ಮೂಲಕ ಹಲವಾರು ಪ್ರಮುಖ ಕೋಮು ವಿಷಯಗಳ ಬಗ್ಗೆ ಮಧ್ಯಮ ನಿಲುವು ಹೊಂದಿದ್ದರು. ಈ ವಿಷಯದ ಗ್ರಹಿಕೆಯಿಂದಾಗಿಯೇ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಮುಖ ನಾಯಕರು ಯಡಿಯೂರಪ್ಪನವರ ಪ್ರಭಾವವನ್ನು ಕಡಿಮೆ ಮಾಡುವುದಕ್ಕೆ ಅವರಿಂದ ಅಧಿಕಾರವನ್ನು ಕಸಿದುಕೊಂಡಿದ್ದಾರೆ. ನೇರ ಕಾರಣವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಗ್ರಹಿಸಬಹುದಾಗಿದೆ. ಈ ಸಮಯದಲ್ಲಿ ಕರ್ನಾಟಕದ ರಾಜಕೀಯದ ಮೇಲೆ ಸಂಘ ಪರಿವಾರದ ಪ್ರಭಾವವನ್ನು ಬೀರುವುದು ಮತ್ತು ಕೋಮು ಧ್ರುವೀಕರಣವನ್ನು ಸಾಮಾನ್ಯ ವಿಷಯವನ್ನಾಗಿ ಮಾಡುವುದು ಆಗಿರುತ್ತದೆ.
ಅವರ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಕೋಮುವಾದಿ ಅಜೆಂಡಾವನ್ನು ಹೇರುವ ವೇಗವನ್ನು ಹೆಚ್ಚಿಸಿದ್ದಾರೆ. 2021 ರ ಅಕ್ಟೋಬರ್ 14 ರಂದು ಅವರು ಹಿಂದುತ್ವದ ದಂಗೆಕೋರರ ಚಟುವಟಿಕೆಗಳನ್ನು ಅನುಮೋದಿಸಿ ನೀಡಿದ ಹೇಳಿಕೆಯು 2023 ರ ವಿಧಾನಸಭಾ ಚುನಾವಣೆಯ ಮೊದಲು ತನ್ನ ಉಳಿದ ಅವಧಿಗೆ ಬಿಜೆಪಿಯು ಅದರ ಮೇಲೆ ತೆಗೆದುಕೊಳ್ಳಲಿರುವ ದಿಕ್ಕಿನ ಬಗ್ಗೆ ಸುಳಿವು ನೀಡಿತು. ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಸೇರಿದಂತೆ ಸಂಘ ಪರಿವಾರದ ವಿವಿಧ ಸಂಘಟನೆಗಳಿಂದ ಹೆಚ್ಚುತ್ತಿರುವ 'ನೈತಿಕ ಪೊಲೀಸಿಂಗ್' ಘಟನೆಗಳ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತಾರಿಸುತ್ತಾ "ಭಾವನೆಗಳಿಗೆ ನೋವುಂಟುಮಾಡಿದಾಗ, ಸಾಮಾನ್ಯವಾಗಿ ಕ್ರೀಯೆ ಮತ್ತು ಪ್ರತಿಕ್ರಿಯೆ ಇರುತ್ತದೆ" ಎಂದು ಬೊಮ್ಮಾಯಿ ಹೇಳಿದರು. ಇದು ಕೇವಲ ಹಿಂದುತ್ವ ಶಕ್ತಿಗಳ ಅಕ್ರಮಕ್ಕೆ ಅಧಿಕೃತ ಅನುಮತಿಯನ್ನು ಸೂಚಿಸಲಿಲ್ಲ, ಜೊತಗೆ ಕರ್ನಾಟಕದ ಆಡಳಿತದಲ್ಲಿ ಹಿಂದುತ್ವದ ಸಾಂಸ್ಥಿಕೀಕರಣವನ್ನು ಪ್ರತಿನಿಧಿಸುತ್ತದೆ.
ಕರ್ನಾಟಕವು ಕಳೆದ ಕೆಲವು ದಶಕಗಳಲ್ಲಿ ಕೋಮು ಧ್ರುವೀಕರಣವನ್ನು ಮತ್ತು ಅದಕ್ಕೆ ಪೂರಕವಾಗಿ ನಡೆದ ಕೋಮುಗಲಭೆಗಳನ್ನು ನೋಡಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ವಿಎಚ್‍ಪಿ, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯಂತಹ ಹಿಂದುತ್ವ ಗುಂಪುಗಳು ತಮ್ಮ ರಾಜಕೀಯದಲ್ಲಿ ಹಾಗೂ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರದಲ್ಲಿ ಲಜ್ಜೆಗೆಟ್ಟಿದ್ದಾವೆ ಮತ್ತು ಆಕ್ರಮಣಕಾರಿಯಾಗಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. “ಕೋಮು ಪೊಲೀಸಿಂಗ್ ನಿಂದ ದ್ವೇಷದ ಅಪರಾಧಗಳವರೆಗೆ: ಅಂಬೇಡ್ಕರ್ ಅವರ ಸಹೋದರತ್ವದ ಕನಸಿನ ಮೇಲಿನ ದಾಳಿ” ಎಂಬ 2021ರ ಸೆಪ್ಟೆಂಬರ್ ವರದಿಯಲ್ಲಿ ದಾಖಲಾಗಿರುವಂತೆ, ಈ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಜರುಗಿದ ಕೋಮು ದ್ವೇಷದ ಅಪರಾಧಗಳು ಕೆಳಗಿನ ಮಾದರಿಗಳಲ್ಲಿ ಕಂಡುಬರುತ್ತವೆ.
ಸಾಮಾಜಿಕ ಪ್ರತ್ಯೇಕತೆಯನ್ನು ಜಾರಿಗೊಳಿಸುವುದು: ಹಿಂದುತ್ವ ಸಂಘಟನೆಗಳು, ರಾಜ್ಯ ಆಡಳಿತದ ಬಹಿರಂಗ ಮತ್ತು ರಹಸ್ಯ ಬೆಂಬಲದೊಂದಿಗೆ, ವಿಶೇಷವಾಗಿ ಮುಸ್ಲಿಮರನ್ನು ಸಮಾಜದ ಇತರೆ ಸಮುದಾಯಗಳಿಂದ ಸಾಮಾಜಿಕವಾಗಿ ಪ್ರತ್ಯೇಕಿಸುತ್ತವೆ. ಎಲ್ಲಾ ಅಂತರ-ಧಾರ್ಮಿಕ ನಂಬಿಕೆಗಳ ಸಾಮಾಜಿಕ ಒಡನಾಟವನ್ನು ಅವರು ನಿಷೇಧಿಸಿದ್ದಾರೆ.
ಅನ್ಯೋನ್ಯತೆಯನ್ನು ನಿರ್ದೇಶಿಸುವುದು: ಯಾವುದೇ ರೀತಿಯ ಅಂತರ-ಧರ್ಮೀಯ ಅನ್ಯೋನ್ಯ ಸಂಬಂಧಗಳನ್ನು ತಡೆಗಟ್ಟುವುದು ಹಿಂದುತ್ವ ಸಂಘಟನೆಗಳ ಕೇಂದ್ರೀಕೃತ ಚಟುವಟಿಕೆಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಿಂದ, ಇದು "ಲವ್ ಜಿಹಾದ್" ನ ಭರಾಟೆಯನ್ನು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ, ಅವರು ಅಂತರ್ ಧರ್ಮೀಯ ದಂಪತಿಗ ಮೇಲೆ ಅಕ್ರಮಣ ಮಾಡುತ್ತಾರೆ, ಅವರಿಗೆ ಬೆದರಿಕೆ ಹಾಕುತ್ತಾರೆ ಮತ್ತು ಹಲ್ಲೆ ಮಾಡುತ್ತಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ತಲೆಯಾಕುವುದಿಲ್ಲ, ಆದರೆ ಆ ದಂಪತಿಗಳನ್ನು ಬಂಧಿಸಿಲು, ಅವರ ಸಂಬಂಧದ ಬಗ್ಗೆ ಅವರ ಪೋಷಕರಿಗೆ ತಿಳಿಸಲು ಮತ್ತು ಕೊನೆಯದಾಗಿ ಅವರಿಗೆ ಹಿಂಧುತ್ವದ ಪ್ರಾಬಲ್ಯದ ಬಗ್ಗೆ ಸಲಹೆ ಮತ್ತು ಸೂಚನೆ ನೀಡ ಬಿಡುಗಡೆಮಾಡುವ ಕೆಲಸವನ್ನು ಮಾಡುತ್ತಾರೆ. ಸೆಪ್ಟೆಂಬರ್ 28, 2021 ರಂದು ಹಿಂದುತ್ವ ಸಂಘಟನೆಯಾದ ಶ್ರೀರಾಮ ಸೇನೆ ಹಿಂದೂಸ್ತಾನ್‍ನ ಸಂಘಟನೆಯ ಸದಸ್ಯರಿಂದ ಅರ್ಬಾಜ್ ಮುಲ್ಲಾ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸೇರಿದಂತೆ ಈ ಗುಂಪುಗಳು ನಡೆಸಿದ ತೀವ್ರ ಹಿಂಸಾಚಾರದ ಸಾಕಷ್ಟು ನಿದರ್ಶನಗಳಿವೆ.
ಆರ್ಥಿಕ ಬಹಿಷ್ಕಾರ: ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲು ಮತ್ತು ಅವರನ್ನು ಅಧೀನಗೊಳಿಸಲು ಬಳಸುವ ಇನ್ನೊಂದು ಸಾಧನವೆಂದರೆ ಆರ್ಥಿಕ ಬಹಿಷ್ಕಾರದ ಕರೆಗಳು. ಮುಸ್ಲಿಂ ಮಾರಾಟಗಾರರಿಂದ ಏನನ್ನು ಖರೀದಿಸದಂತೆ ಕರೆ ನೀಡಲಾಗುತ್ತದೆ, ಅವರೊಂದಿಗೆ ನಡೆಯುವ ವ್ಯಾಪಾರವನ್ನು ನಿಷೇಧಿಸುವಂತೆ ನೋಟಿಸ್ ನೀಡಲಾಗುತ್ತದೆ ಹಾಗೂ ಅವರು ವ್ಯಾಪಾರದಲ್ಲಿ ತೊಡಗುವುದನ್ನು ತಡೆಯಲು ದೈಹಿಕ ಹಲ್ಲೆಗಳನ್ನು ಸಹ ಮಾಡಲಾಗುತ್ತದೆ.
ಕಾನೂನು ಬಾಹಿರ ಜಾಗೃತ ದಳ: ಕನಿಷ್ಠ ಎರಡು ದಶಕಗಳಿಂದ ಹುಟ್ಟಿಕೊಂಡಿರುವ ಕಾನೂನು ಬಾಹಿರ ಧಾರ್ಮಿಕ ಜಾಗೃತದಳಗಳ ಕೇಂದ್ರವಾಗಿರುವ ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ಗುಂಪುಗಳ ಕಾನೂನು ಬಾಹಿರ ಚಟುವಟಿಕೆಗಳು ಉಲ್ಬಣಗೊಂಡಿವೆ. ಇದು ಕರ್ನಾಟಕದ ಇತರ ಭಾಗಗಳಿಗೂ ಹಬ್ಬಿದೆ. ಅಲ್ಪಸಂಖ್ಯಾರತನ್ನು ಸಾಮಾಜಿಕವಾಗಿ ಪ್ರತ್ಯೇಕಿಸಲು, ಅವರ ವಿರುದ್ಧ ದ್ವೇಷ ಹರಡಲು, ಅವರ ಮೇಲೆ ಜಾನುವಾರುಗಳ ಹೆಸರಲ್ಲಿ ದಾಳಿ ನಡೆಸಲು, ಅವರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವುದಕ್ಕಾಗಿ ಮತ್ತು ಅವರನ್ನು ತಾರತಮ್ಯ ಮಾಡಿ ಅಧೀನಗೊಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿದ್ದಾವೆ.
ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ: ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹಿಂದುತ್ವ ಸಂಘಟನೆಗಳು ಕಾರ್ಯಪ್ರವೃತ್ತವಾಗಿವೆ. ಅಲ್ಪಸಂಖ್ಯಾತರು "ಬಲವಂತದ ಧಾರ್ಮಿಕ ಮತಾಂತರಗಳಲ್ಲಿ" ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಆಧಾರರಹಿತ ಆರೋಪವನ್ನು ಮಾಡಿ ಹಲವಾರು ಚರ್ಚ್‍ಗಳನ್ನು ಹಿಂದುತ್ವ ಗುಂಪುಗಳು ಧ್ವಂಸಮಾಡಿವೆ. ರಾಜ್ಯದಲ್ಲಿನ ಗುಪ್ತಚರ ಇಲಾಖೆಗೆ ಕರ್ನಾಟಕದಲ್ಲಿರುವ ಚರ್ಚ್‍ಗಳ ಸಂಖ್ಯೆಯನ್ನು ಸಮೀಕ್ಷೆ ಮಾಡುವ ಮತ್ತು ಪತ್ತೆಹಚ್ಚುವ ವಿಲಕ್ಷಣ ಕೆಲಸವನ್ನು ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‍ನಲ್ಲಿರುವಂತೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರಲು ಒತ್ತಡವನ್ನು ಹೇರುವುದಕ್ಕಾಗಿ ಆರ್‍ಎಸ್‍ಎಸ್ ಈ ಎಲ್ಲಾ ದಾಳಿಗಳನ್ನು ಮಾಡಿಸುತ್ತಿದೆ.
ದ್ವೇಷ ಭಾಷಣ: ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಮೂಲಭೂತ ಹಕ್ಕುಗಳ ಅನುಭವವನ್ನು ನಿರಾಕರಿಸುವುದಕ್ಕಾಗಿ ಬಲಪಂಥೀಯ ಹಿಂದುತ್ವದ ನಾಯಕರುಗಳು ವಿಶೇಷವಾಗಿ ದ್ವೇಷದ ಭಾಷಣವನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ತಮ್ಮ ದ್ವೇಷ ಭಾಷಣಕ್ಕಾಗಿ ಸಾಮಾಜಿಕ ಜಾಲಾತಾಣ, ಸುದ್ದಿ ಮಾಧ್ಯಮ ಮತ್ತು ಮುದ್ರಣ ಮಾಧ್ಯಮ ಒಳಗೊಂಡಂತೆ ಇತರೆ ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ತಮ್ಮ ದ್ವೇಷದ ಭಾಷಣಕ್ಕಾಗಿ ವೇದಿಕೆಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ದ್ವೇಷದ ಭಾಷಣಗಳ ಮೂಲಕ ಅಲ್ಪಸಂಖ್ಯಾತರ ನಂಬಿಕೆಗಳನ್ನು ತುಚ್ಛವಾಗಿ ಕಾಣುವುದು ಮತ್ತು ಭಾರತದ ನಾಗರಿಕರಂತೆ ಕಾಣದೆ ಕಡೆಗಣ ಸಲಾಗುತ್ತದೆ.
ಕಾನೂನು ಮತ್ತು ನೀತಿಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ಸರ್ಕಾರವು ತನ್ನ ಕೋಮುವಾದಿ ಅಜೆಂಡಾವನ್ನು ಜಾರಿಗೆ ತರಲು ಹೊರಟಿದೆ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ಚರ್ಚ್‍ಗಳು ಮತಾಂತರ ಮಾಡುತ್ತವೆ ಎಂಬ ಅಸತ್ಯವನ್ನು ಬಳಸಿಕೊಂಡು ಮತಾಂತರ ನಿಷೇಧ ಕಾನೂನನ್ನು ಬಿಜೆಪಿ ಸರ್ಕಾರವು ಮುಂದಿಡುತ್ತಿದೆ. "ಕರ್ನಾಟಕ ವಧೆ ತಡೆ ಮತ್ತು ಜಾನುವಾರುಗಳ ಸಂರಕ್ಷಣೆ ಕಾಯಿದೆ, 2020" ಅನ್ನು ವಿಧಾನ ಸೌಧದಲ್ಲಿ "ಗೋವಿನ ಪೂಜೆ" ನೆರವೇರಿಸುವ ಮೂಲಕ ಮತ್ತು ಎಂದು ಆಚರಣೆಯಿಲ್ಲರದ ನಡವಳಿಕೆಯ ಮೂಲಕ ಅಂಗೀಕರಿಸಲಾಯಿತು. ಆಹಾರ ನಮ್ಮ ಹಕ್ಕು (ನಮ್ಮ ಆಹಾರ ನಮ್ಮ ಹಕ್ಕು) ಒಕ್ಕೂಟವು ನವೆಂಬರ್ 2021 ರಲ್ಲಿ ಬಿಡುಗಡೆಗೊಳಿಸಿದ ‘ಜೀವನೋಪಾಯವನ್ನು ಅಪರಾಧೀಕರಿಸುವುದು, ಕಾನೂನು ಬಾಹಿರ ಧಾರ್ಮಿಕ ಜಾಗೃತ ಗುಂಪುಗಳನ್ನು ಕಾನೂನುಬದ್ಧಗೊಳಿಸುವುದು’ ಎಂಬ ವರದಿಯಲ್ಲಿ, ಗೋಹತ್ಯೆ ನಿಷೇಧ ಕಾನೂನ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಕಾರಣಕ್ಕಾಗಿ ತಂದರೂ ಸಹ, ರೈತರು, ಜಾನುವಾರು ಮಾರಾಟಗಾರರು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕರ್ನಾಟಕದ ಚರ್ಮ ಉದ್ಯಮ ಮಾಂಸ ಉದ್ಯಮದ ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ. ದಲಿತರು ಪ್ರಧಾನ ಆಹಾರವಾಗಿ ಸೇವಿಸುವ ಗೋಮಾಂಸವನ್ನು ಅವರಿಂದ ಕಸಿದುಕೊಳ್ಳಲಾಗಿದೆ, ಹೆಚ್ಚುವರಿಯಾಗಿ, ಚರ್ಮದ ವ್ಯಾಪಾರ ಸೇರಿದಂತೆ ದನದ ವ್ಯಾಪಾರದಲ್ಲಿ ಉದ್ಯೋಗದಲ್ಲಿರುವ ದಲಿತರೆಲ್ಲರೂ ಕೆಲಸ ಕಳೆದುಕೊಂಡಿದ್ದಾರೆ.
ಇನ್ನು, ರಂಗಾಯಣದ ಪರಿಸ್ಥಿತಿಯನ್ನು ಗಮನಿಸಿದರೆ, ಏನಾದರೂ ಮಾಡಿ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವಲ್ಲಿ ಸಂಘಪರಿವಾರವು ನಿರತವಾಗಿರುವುದು ಕಂಡುಬರುತ್ತದೆ. ಪ್ರಗತಿಪರ ದೃಷ್ಟಿಕೋನಕ್ಕೆ ಹೆಸರಾದ ರಂಗಾಯಣ ಈಗ ಸ್ವಯಂಘೋಷಿತ ಆರೆಸ್ಸೆಸ್ ಕಾರ್ಯಕರ್ತ ಅಡ್ಡಂಡ ಕರಿಯಪ್ಪ ಅವರ ನೇತೃತ್ವದಲ್ಲಿದೆ ಮತ್ತು ಈ ಸ್ವಾಧೀನಕ್ಕೆ ಪ್ರಗತಿಪರ ಕಲಾವಿದರು, ಸಂಘಟನೆಗಳು ಮತ್ತು ನಾಗರಿಕರ ವಿರೋಧವೇ ಅಡ್ಡಿಯಾಗಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ 2 ಕೋಟಿ ರೂಪಾಯಿಯನ್ನು ನೀಡಲು ನಿರಾಕರಿಸಿರುವ ಸಂದರ್ಭದಲ್ಲೇ, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ್ ಸ್ಥಾಪಿಸಲು 100 ಎಕರೆ ಭೂಮಿ ಮತ್ತು 359 ಕೋಟಿ ರೂಪಾಯಿ ಮಂಜೂರು ಮಾಡುವ ಮೂಲಕ ಬಿಜೆಪಿ ಸರ್ಕಾರವು ಕನ್ನಡಕ್ಕಿಂತ ಸಂಸ್ಕೃತಕ್ಕೆ ವಿಶೇಷ ಸ್ಥಾನವನ್ನು ನೀಡುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಪದವಿಪೂರ್ವ ಕೋರ್ಸ್‍ಗಳಲ್ಲಿ ಕನ್ನಡ ಭಾಷೆಯನ್ನು ವಿರೋಧಿಸುವವರಿಗೆ ಸರ್ಕಾರ ಭೂಮಿ ಮತ್ತು ಹಣ ನೀಡುತ್ತಿರುವುದನ್ನು ಪ್ರಶ್ನಿಸಿ ಕನ್ನಡ ಪರ ಸಂಘಟನೆಗಳು ತೀವ್ರವಾದ ಸರಣ ಪ್ರತಿಭಟನೆಗಳನ್ನು ಮಾಡಿದ್ದಾರೆ.
ಈಗ ಸಂಘಪರಿವಾರ ಹಿಜಾಬ್ ಅನ್ನು ನೆಪವಾಗಿಟ್ಟುಕೊಂಡು ಕೋಮು ಬೆಂಕಿಯನ್ನು ಹಚ್ಚುತ್ತಿದೆ. 2021 ರ ಡಿಸೆಂಬರ್‍ನಲ್ಲಿ ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾರಂಭವಾದ ಘಟನೆ ರಾಜ್ಯಾದ್ಯಂತ ವಿವಿಧ ಸಂಸ್ಥೆಗಳಿಗೆ ಹರಡುವ ಮೂಲಕ ದೊಡ್ಡ ವಿವಾದಕ್ಕೆ ಕಾರಣವಾಯಿತು. ಎಬಿವಿಪಿ/ಆರ್‍ಎಸ್‍ಎಸ್, ಕೇಸರಿ ಶಾಲು ಹೊದಿಸುವ ಅಭಿಯಾನದ ಮೂಲಕ, ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುಸಂಖ್ಯಾತ ದಲಿತ ಮತ್ತು ಬಹುಜನ ಸಮುದಾಯಗಳನ್ನು ಮೂಲಭೂತವಾದಿಗಳನ್ನಾಗಿಸಲು ಪ್ರಯತ್ನಿಸುತ್ತಿವೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಮತ್ತು ಈ ಸಮುದಾಯಗಳ ನಡುವೆ ಪರಸ್ಪರರ ವಿರೋಧವನ್ನು ಎತ್ತಿಕಟ್ಟುತ್ತಿವೆ. ದಲಿತರು, ಬಹುಜನರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ನಿಷೇಧಿಸಿದ ಬ್ರಾಹ್ಮಣಶಾಹಿ ವ್ಯವಸ್ಥೆಯ ವಿರುದ್ಧ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ವೀರ ಹೋರಾಟದ ಮೂಲಕ ಶಿಕ್ಷಣದ ಹಕ್ಕನ್ನು ಪಡೆದುಕೊಂಡವರು ಇದೇ ಸಮುದಾಯಗಳು ಎಂಬುವುದನ್ನು ಮರೆಯಲಾಗದು.
ಮುಸ್ಲಿಮರನ್ನು ಎರಡನೇ ದರ್ಜೆಯ ಪೌರತ್ವಕ್ಕೆ ಇಳಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೂ, ಹರ್ಷ ಮಂದರ್ ಸೇರಿದಂತೆ ಹಲವರು ಎತ್ತುತ್ತಿರುವ ಪ್ರಶ್ನೆಯೆಂದರೆ, ನರಮೇಧವು ಹಿಂದುತ್ವ ಯೋಜನೆಯ ಕಠೋರ ಫಲಿತಾಂಶವೇ ಎಂಬುದಾಗಿದೆ. ಈ ಮಧ್ಯೆ, ದಲಿತರು ಮತ್ತು ಆದಿವಾಸಿಗಳ ಎರಡನೇ ದರ್ಜೆಯ ಪೌರತ್ವವನ್ನು ಸಾಮಾನ್ಯಗೊಳಿಸುವುದು ನಡೆಯುತ್ತಾಲೇ ಇದೆ.
ಅಸ್ಪೃಶ್ಯತೆಯ ವಿವಿಧ ಆಚರಣೆಗಳು ಸೇರಿದಂತೆ ಕರ್ನಾಟಕದಾದ್ಯಂತ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. 1ನೇ ಏಪ್ರಿಲ್ 2020 ಮತ್ತು 31ನೇ ಮಾರ್ಚ್ 2021 ರ ನಡುವೆ ಕರ್ನಾಟಕದಲ್ಲಿ 87 ಕೊಲೆಗಳು ಮತ್ತು 216 ಅತ್ಯಾಚಾರಗಳು ಸೇರಿದಂತೆ 2327 ಜಾತಿ ದೌರ್ಜನ್ಯಗಳು ವರದಿಯಾಗಿವೆ. ಕಳೆದ ವರ್ಷ ಒಟ್ಟು 1,504 ಪ್ರಕರಣಗಳು ದಾಖಲಾಗಿದ್ದವು, ಹಿಂದಿನ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಶೇಕಡಾ 54 ರಷ್ಟು ಪ್ರಕರಣಗಳು ಹೆಚ್ಚಾಗಿವೆ,. ಹಿಂದೂ ಹುಡುಗಿಯೊಂದಿಗಿನ ಸಂಬಂಧಕ್ಕಾಗಿ ಅರ್ಬಾಜ್ ಮುಲ್ಲಾನನ್ನು ಶಿರಚ್ಛೇದ ಮಾಡಿ ಮತ್ತು ವಿರೂಪಗೊಳಿಸಿದರೆ, ಪ್ರಬಲ ಜಾತಿಯ ಹುಡುಗಿಯೊಂದಿಗಿನ ಸಂಬಂಧಕ್ಕಾಗಿ ದಲಿತ ಯುವಕ ದಾನಪ್ಪನನ್ನು ಕೊಲೆ ಮಾಡಲಾಯಿತು. ರಾಜ್ಯದ ಕ್ರಮಗಳು ಸಹ ಅವರ ಸಾಂಸ್ಕøತಿಕ ಹಕ್ಕುಗಳ ಮೇಲೆ ಸ್ಪಷ್ಟವಾಗಿ ಆಕ್ರಮಣ ಮಾಡುತ್ತಿರುವುದನ್ನು ನೋಡುತ್ತವೆ, ಇದು ಗೋಹತ್ಯೆ ನಿಷೇಧದ ಮೂಲಕ ಸ್ಪಷ್ಟವಾಗಿ ಕಂಡುಬರುತ್ತದೆ, ಇದು ಮುಸ್ಲಿಮ್ ಮತ್ತು ದಲಿತರ ಆಹಾರ ಪದ್ಧತಿಯ ಮೇಲೆ ಮಾಡಿದ ದಾಳಿಯಾಗಿದೆ. ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ನಿಲ್ಲಿಸುವ ಪ್ರಯತ್ನಗಳು ಮತ್ತು ಬಲವಂತದ ಸಸ್ಯಾಹಾರವು ರಾಜ್ಯದಲ್ಲಿ ಬ್ರಾಹ್ಮಣ ೀಕರಣದ ಪ್ರಯತ್ನಗಳನ್ನು ಸೂಚಿಸುತ್ತದೆ.
ಜಾತಿ ಮತ್ತು ಕೋಮು ಧ್ರುವೀಕರಣವು ಕೇವಲ ಒಂದು ಗೊಂದಲವಲ್ಲ - ಇದು ಒಂದು ಕಾರ್ಯಸೂಚಿಯಾಗಿದೆ; ಇದು ಕೇವಲ ಚುನಾವಣಾ ಲಾಭವನ್ನು ಗಳಿಸುವ ತಂತ್ರವಲ್ಲ - ಇದು ರಾಜಕೀಯ; ಇದು ಪ್ರಧಾನವಾಗಿಲ್ಲದ ಸಂಸ್ಥೆಗಳು ನಡೆಸುವ ಚಟುವಟಿಕೆಗಳಲ್ಲ - ಇದು ರಾಜಕೀಯ ಪೆÇ್ರೀತ್ಸಾಹ ಮತ್ತು ಆಡಳಿತದ ಬೆಂಬಲವನ್ನು ಹೊಂದಿದೆ. ಈ ದೈನಂದಿನ ಭಯೋತ್ಪಾದಕ ಕೃತ್ಯಗಳು ಹಿಂದುತ್ವದ ಪ್ರಭಾವಕ್ಕೊಳಗಾಗಿ ತೀವ್ರಗಾಮಿಗಳಾಗಿರುವ ಪುರುಷರಿಂದ ನಡೆಯುತ್ತವೆ ಮತ್ತು ದೇಶದ ಸಾಮಾನ್ಯ ನಾಗರಿಕರ ಮೇಲೆ ನಡೆಸಲ್ಪಡುತ್ತವೆ, ಈ ಪುರುಷರು ಹೆಚ್ಚಾಗಿ ಮುಸ್ಲಿಮರಲ್ಲದವರು ಮತ್ತು ಬಹುಕಾಲದ ಅವಧಿಯಲ್ಲಿ ಬಹುಸಂಖ್ಯಾತ ರಾಜಕೀಯದಿಂದ ಅಮಾನವೀಯರಾಗಿದ್ದವರು.
ಕರ್ನಾಟಕವು ಈ ನಿರ್ಣಾಯಕ ರಾಜಕೀಯ ಕವಲುದಾರಿಯಲ್ಲಿ ಬಂದು ನಿಂತಿದೆ, ಜಾನಕಿ ನಾಯರ್ ಬರೆದಂತೆ, ಈ ಸಮಯದಲ್ಲಿ ರಾಜ್ಯ ಮತ್ತು ಅದರ ಸಂಸ್ಥೆಗಳು "ಹಿಂದೂ ರಾಷ್ಟ್ರ" ಮಾಡುವ ಗುರಿಯನ್ನು ಹೊಂದಿರುವವರ ಅಧೀನವಾಗಿವೆ ಮತ್ತು ಅದನ್ನು ನವ ಉದಾರವಾದಿ ಜಾಗತಿಕ ಕ್ರಮಕ್ಕೆ ಸೇರಿಸಬೇಕು.