ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಲಾದ ಯೋಜಿತವಲ್ಲದ ಲಾಕ್ಡೌನ್ಗಳು ಮತ್ತು ನೀತಿಗಳಿಂದ ಭಾರತವು ಹಿಂದೆಂದೂ ಕಂಡರೀಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಒಟ್ಟಾರೆ ಪರಿಣಾಮದಿಂದಾಗಿ ಕೋಟಿಗಟ್ಟಲೆ ಜನರು ಕಡುಬಡತನಕ್ಕೆ ಜಾರಿದ್ದಾರೆ ಮತ್ತು ಬದುಕಲು ಹೆಣಗಾಡುತ್ತಿದ್ದಾರೆ - 84% ಕುಟುಂಬಗಳ ಆದಾಯವು 2021 ರಲ್ಲಿ ಕುಸಿದಿದೆ. ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಸೃಷ್ಠಿಯಾಗಿರುವ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು ಜನರು ಭಾರತದಲ್ಲಿದ್ದಾರೆ, ಇದೇ ಭಾರತದ ಸಾಧನೆ. ಅದೇ ಸಮಯದಲ್ಲಿ, ಶ್ರೀಮಂತರ ಮೇಲಿನ ತೆರಿಗೆಯನ್ನು ಮೋದಿ ಸರ್ಕಾರ ಕಡಿಮೆ ಮಾಡಿದ್ದರಿಂದ ಶ್ರೀಮಂತರು ಶ್ರೀಮಂತರಾಗಿದ್ದಾರೆ; ಸಂಪತ್ತು ತೆರಿಗೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕಾಪೆರ್Çರೇಟ್ ತೆರಿಗೆಗಳನ್ನು 39% ರಿಂದ 22% ಕ್ಕೆ ಇಳಿಸಲಾಗಿದೆ.