ಸ್ವಾತಂತ್ರ್ಯ ಸಂಗ್ರಾಮ ಮತ್ತು ವಿಭಜನೆ: ಈ ಅನುಭವಗಳಿಂದ ಭಾರತ ಕಲಿಯುವುದೇನಿದೆ?

By Lekha |

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಎಲ್ಲ ಹಿಂದೂ ಪರಮಾಧಿಕಾರವನ್ನು ಪ್ರತಿಪಾದಿಸುವ ಎಲ್ಲ ಬಣಗಳೂ ಸಹ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರ ಉಳಿದಿದ್ದವು. ಬದಲಾಗಿ ಬ್ರಿಟೀಷರ ವಸಾಹತು ಆಳ್ವಿಕೆಯ ಒಡೆದು ಆಳುವ ನೀತಿಗೆ ಒತ್ತಾಸೆಯಾಗಿ, ಜನತೆಯ ಐಕ್ಯತೆಯನ್ನು ಭಂಗಗೊಳಿಸುವ ಹಿಂದೂ-ಮುಸ್ಲಿಂ ವಿಭಜನೆಯ ಪರವಾಗಿ ನಿಂತ್ತಿದ್ದವು. ಈ ಒಡೆದು ಆಳುವ ನೀತಿಯೇ ದೇಶದ ರಕ್ತಸಿಕ್ತ ವಿಭಜನೆಗೂ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ಸ್ಥಾಪನೆಯೂ ಕಾರಣವಾಗಿತ್ತು. ನಂತರದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರೆಯಾಗಿತ್ತು.

ನಮ್ಮ ಸ್ವಾತಂತ್ರ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರ

By ಸಿಪಿಐ-ಎಂಎಲ್ ಲಿಬರೇಶನ್ |

ಅರಿಂದಾಮ್ ಸೇನ್

(ಲಿಬರೇಷನ್ ಜುಲೈ 1997)

ಡಿ ಡಿ ಕೊಸಂಬಿರವರ 1946ರ ಲೇಖನ, ' ಭಾರತ ದಲ್ಲಿ ಬೂರ್ಜ್ವಾಗಳು ಒಂದು ಪ್ರಬುದ್ಧತೆಗೆ ಬಂದರು ' ಎಂಬುದರ ವಿಸ್ತ್ರಿತ ಭಾಗ. ಮುಂಬೈ ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಸೇರಿದ್ದಾಗ ಅವರೆಲ್ಲರೂ ತಮ್ಮ ಬಂಧನ ನಿಶ್ಚಿತ ಎಂದು ತಿಳಿದಿದ್ದರು. ಅವರುಗಳು ಅದಕ್ಕೆ ತಯ್ಯಾರಿ ಯಾಗಿ, ತಮ್ಮ ಎಲ್ಲಾ ಕುಟುಂಬದ ವ್ಯವಹಾರ ಮತ್ತು ವೈಯಕ್ತಿಕ ಹಣ ಕಾಸಿನ ಸ್ಥಿತಿ ಯನ್ನು ಮುಂದಿನ ಒಂದು ಎರಡು ವರ್ಷಗಳಿಗೆ  ಎಲ್ಲಾ ರೀತಿಯ ಸಂದರ್ಭ ಗಳಿಗೆ ಸಿದ್ಧ ಪಡಿಸಿದ್ದರು.