Lekha

ಕನ್ನಡ ನಾಡಿನ ಬಹು ಸಂಸ್ಕೃತಿಯಲ್ಲಿ ಸಮೃದ್ಧವಾಗಿ ಬೆಳೆಯುವ ಚಿನ್ನಾರಿ ಮುತ್ತುಗಳಿಗೆ ಬ್ರಾಹ್ಮಣ್ಯದ ಮೌಢ್ಯಗಳನ್ನು ಬಿತ್ತುವ ಕಾರ್ಯಕ್ಕೆ ಬಿಜೆಪಿ ಸರ್ಕಾರ ನೇಮಿಸಿದ್ದ ವಿಕೃತ ಮನಸ್ಸಿನ ಚಕ್ರತೀರ್ಥನ ವಕ್ರಬುದ್ಧಿಯನ್ನು ನೋಡಿದ ನಮ್ಮ ನಾಡಿನ ಮಾನವೀಯ ಮೌಲ್ಯಗಳುಳ್ಳ ಎಲ್ಲಾ ಸಂಗಾತಿಗಗಳು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಮಕ್ಕಳಿಗೆ ಪಠ್ಯ ರಚನೆಯಾಗಬೇಕೆಂದು ನಡೆಸಿದ ಹೋರಾಟಕ್ಕೆ ಮನಿದಂತೆ ಮೇಲ್ನೋಟಕ್ಕೆ ಕಂಡುಬರುವ ಮುಖ್ಯ ಮಂತ್ರಿಗಳು ಹೊರಡಿಸಿರುವ ಪತ್ರಿಕೆ ಪ್ರಕಟಣೆಯು ಕಣ್ಣೋರೆಸುವ ತಂತ್ರಗಾರಿಕೆಯೇ ವಿನಃ ಚಕ್ರತೀರ್ಥನ   ಕುಚೇಷ್ಟಗಳಿಗೆ ಪೂರ್ಣ ವಿರಾಮ ವಿಟ್ಟಿಲ್ಲ. ಬ್ರಾಹ್ಮಣತ್ವದ ಮೌಢ್ಯಗಳನ್ನು ಹೇರುವ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಉಲ್ಲೇಖಿಸದೆ  ಚಕ್ರತೀರ್ಥನ ಅಧ್ಯಕ್ಷತೆಯಲ್ಲಿದ್ದ ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಹೇಳುವ ಮೂಲಕ ಆರ್ ಎಸ್ ಎಸ್ ನ ಕಾರ್ಯಸೂಚಿಯನ್ನು ಜೀವಂತವಾಗಿಸುವ ಹುನ್ನಾರ ಮಾಡಿರುವ ಮುಖ್ಯಮಂತ್ರಿಗಳಿಗೆ ನಮ್ಮ ಧಿಕ್ಕಾರ.

ಎಷ್ಟೇ ಸ್ಪಷ್ಟೀಕರಣ ನೀಡಿದ್ದರೂ, ಮುಖ್ಯ ಮಂತ್ರಿಗಳು ಪ್ರಕಟಿಸಿರುವ ಹೇಳಿಕೆಯಲ್ಲಿ ನಮಗೆ ಕಂಡುಬರುವುದು ತಮ್ಮ ಹಿಂದುತ್ವ ತತ್ವಗಳ ಪರಚಾರ. ಪಠ್ಯಪುಸ್ತಕಗಳು ಈಗಾಗಲೇ ಶೇಖಡಾ 80ರಷ್ಟು ಪ್ರಕಟಿಸಲಾಗಿದ್ದು, ಶೇಖಡಾ 67 ಶಾಲೆಗಳಿಗೆ ವಿಸ್ತರಣೆ ಮಾಡಲಾಗಿದೆ. ಹಾಗಾಗಿ, ಚಕ್ರತೀರ್ಥರು ಮಾಡಿರುವ ಬದಲಾವಣೆಗಳು ಈಗಾಗಲೇ ಮಕ್ಕಳಿಗೆ ತಲುಪಿದೆ. ಇಂತಹ ಪ್ರತ್ಯಕ್ಷ ಕೋಮುವಾದೀಕರಣವನ್ನು ನಾವು ಖಂಡಿಸಲೇ ಬೇಕಾಗಿದೆ.

ಬದಲಾವಣೆಯಾದ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಮತ್ತು ಈಗಾಗಲೇ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ನಿರುಪಯುಕ್ತಗೊಳಿಸಿ, ಹಳೆಯ ಪಠ್ಯಕ್ರಮವನ್ನು ಮುಂದುವರೆಸಬೇಕು.