ಅಕ್ಟೋಬರ್ 3 ರಂದು ಸ್ವತಂತ್ರ ಮಾಧ್ಯಮ ಪೋರ್ಟಲ್ ನ್ಯೂಸ್ ಕ್ಲಿಕ್ ಸಂಪಾದಕರು, ಪತ್ರಕರ್ತರು ಮತ್ತು ಸಿಬ್ಬಂದಿಯ ವಿರುದ್ಧ ವ್ಯಾಪಕ ಪೊಲೀಸ್ ದಾಳಿಯು ದೇಶ ಎದುರಿಸುತ್ತಿರುವ ಅನಿಯಂತ್ರಿತ ತುರ್ತು ಪರಿಸ್ಥಿತಿಯ ಬಹಿರಂಗ ಪ್ರತಿಬಿಂಬವಾಗಿದೆ. ಮೋದಿ-ಬಿಜೆಪಿ ಆಡಳಿತವು ತನ್ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಮತ್ತು ಅಧಿಕಾರಕ್ಕೆ ಸತ್ಯವನ್ನು ಹೇಳುವ ಪ್ರತಿಯೊಂದು ಧ್ವನಿಯನ್ನು ನಿಗ್ರಹಿಸಲು ಬದ್ಧವಾಗಿದೆ. ವರದಿಗಳ ಪ್ರಕಾರ, ಭಾಷಾ ಸಿಂಗ್, ಅಭಿಸರ್ ಶರ್ಮಾ, ಹಿರಿಯ ಪತ್ರಕರ್ತ ಊರ್ಮಿಲೇಶ್, ಸಂಪಾದಕ ಪ್ರಬೀರ್ ಪುರ್ಕಾಯಸ್ಥ, ಲೇಖಕಿ ಗೀತಾ ಹರಿಹರನ್, ರಾಜಕೀಯ ವಿಶ್ಲೇಷಕ ಆನಿಂದ್ಯೋ ಚಕ್ರವರ್ತಿ, ಇತಿಹಾಸಕಾರ ಸೊಹೈಲ್ ಹಶ್ಮಿ
ಕನ್ನಡ ನಾಡಿನ ಬಹು ಸಂಸ್ಕೃತಿಯಲ್ಲಿ ಸಮೃದ್ಧವಾಗಿ ಬೆಳೆಯುವ ಚಿನ್ನಾರಿ ಮುತ್ತುಗಳಿಗೆ ಬ್ರಾಹ್ಮಣ್ಯದ ಮೌಢ್ಯಗಳನ್ನು ಬಿತ್ತುವ ಕಾರ್ಯಕ್ಕೆ ಬಿಜೆಪಿ ಸರ್ಕಾರ ನೇಮಿಸಿದ್ದ ವಿಕೃತ ಮನಸ್ಸಿನ ಚಕ್ರತೀರ್ಥನ ವಕ್ರಬುದ್ಧಿಯನ್ನು ನೋಡಿದ ನಮ್ಮ ನಾಡಿನ ಮಾನವೀಯ ಮೌಲ್ಯಗಳುಳ್ಳ ಎಲ್ಲಾ ಸಂಗಾತಿಗಗಳು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಮಕ್ಕಳಿಗೆ ಪಠ್ಯ ರಚನೆಯಾಗಬೇಕೆಂದು ನಡೆಸಿದ ಹೋರಾಟಕ್ಕೆ ಮನಿದಂತೆ ಮೇಲ್ನೋಟಕ್ಕೆ ಕಂಡುಬರುವ ಮುಖ್ಯ ಮಂತ್ರಿಗಳು ಹೊರಡಿಸಿರುವ ಪತ್ರಿಕೆ ಪ್ರಕಟಣೆಯು ಕಣ್ಣೋರೆಸುವ ತಂತ್ರಗಾರಿಕೆಯೇ ವಿನಃ ಚಕ್ರತೀರ್ಥನ ಕುಚೇಷ್ಟಗಳಿಗೆ ಪೂರ್ಣ ವಿರಾಮ ವಿಟ್ಟಿಲ್ಲ. ಬ್ರಾಹ್ಮಣತ್ವದ ಮೌಢ್ಯಗಳನ್ನು ಹೇರುವ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಉಲ್ಲೇಖಿಸದೆ ಚಕ್ರತೀರ್ಥನ ಅಧ್ಯಕ್ಷತೆಯಲ್ಲಿದ್ದ ಪಠ್ಯ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಹೊರಬಂದಿದ್ದು, ಕೋವಿದ್ 19 ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಸೃಷ್ಟಿಸಿರುವ ಭೀಕರ ನೋವು ಸಂಕಟಗಳ ನಡುವೆಯೇ ಫಲಿತಾಂಶಗಳೂ ಪ್ರಕಟವಾಗಿವೆ. ಪಶ್ಚಿಮ ಬಂಗಾಲದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಮುಖಭಂಗವಾಗಿದ್ದು ಚಾರಿತ್ರಿಕ ಫ್ಯಾಸಿಸ್ಟ್ ವಿರೋಧಿ ತೀರ್ಪಿನ ಮೂಲಕ ಜನತೆ ಬಿಜೆಪಿಯ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. 2021ರ ಕರೆ (ಎಕುಶೇರ್ ದಾಕ್) ಮತ್ತು ಬಿಜೆಪಿಗೆ ಮತ ನೀಡುವುದಿಲ್ಲ ಎನ್ನುವ ಪ್ರಜೆಗಳ ಪ್ರಚಾರಾಂದೋಲನಗಳು ಫಲಕಾರಿಯಾಗಿದ್ದು ರೈತರ ಮುಷ್ಕರವೂ ಸಹ ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಿದೆ. ಈ ಜಾಗೃತಿಯ ಮೂಲಕವೇ ಬಿಜೆಪಿ ಮತ್ತು ಮೋದಿ
ಒಡಿಸಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಹತ್ತಿರ ತ್ರಿವಳಿ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ 280ಕ್ಕೂ ಹೆಚ್ಚು ಜನರು ಸಾವಿಗೀಡಾಗಿ, 1000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ದುರಂತದ ನೈತಿಕ ಹೊಣೆ ಹೊತ್ತು ಕೇಂದ್ರ ಸರ್ಕಾರದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಆಗ್ರಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಘೋರ ಮತ್ತು ಅತಿದೊಡ್ಡ ರೈಲ್ವೆ ದುರಂತ ಇದಾಗಿದ್ದು, ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಶಾಲಿಮಾರ್- ಚೆನ್ನೈ ಸೆಂಟ್ರಲ್
ಹಿಂದಿನ ಬಿಜೆಪಿ ಸರ್ಕಾರದ ಕೋಮುವಾದಿ-ಕಾರ್ಪೊರೇಟ್ ನೀತಿಗಳನ್ನು ತಿರಸ್ಕರಿಸಿದ ಜನರು ಬಹುಮತದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು ವಿಜಯಗೊಳಿಸಿದರು. ಕೇವಲ ಐದು ಭರವಸೆಗಳಿಗೆ ಪ್ರಾಮುಖ್ಯತೆ ನೀಡದೆ ಕರ್ನಾಟಕದ ಜನತೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನೆರವೇರಿಸಲು ಮತ್ತು ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಎತ್ತಿಹಿಡಿಯಲು, ಸಿಪಿಐ(ಎಂಎಲ್) ಲಿಬರೇಶನ್ ಪಕ್ಷವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆವು. ಬಜೆಟ್ 2023-24ರಲ್ಲಿ ಹಲವಾರು ಪ್ರಶಂಸನೀಯ ಅಂಶಗಳು ಕಂಡುಬಂದಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಬಜೆಟಿನಲ್ಲಿ ಮತ್ತು ಹಲವು ಅಂಶಗಳ ಕುರಿತು ಗಮನ ನೀಡಬೇಕು ಎಂದು ಹೇಳಲು ಇಚ್ಛಿಸುತ್ತೇವೆ. ಕರ್ನಾಟಕ
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಕುಡಿವ ನೀರಿನ ಟ್ಯಾಂಕ್‌ನ ನಲ್ಲಿಯಿಂದ ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂಬ ಕಾರಣಕ್ಕೆ, ಸವರ್ಣೀಯನೆಂದು ಕರೆಸಿಕೊಳ್ಳುವ ಕೊಳಕು ಮನಸ್ಸಿನ ಮುಖಂಡನೊಬ್ಬ ಮಹಿಳೆಯನ್ನು ಅವಮಾನಿಸಿ, ನಂತರ ಟ್ಯಾಂಕ್ ನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದ ಅಮಾನವೀಯ ಘಟನೆಯನ್ನು ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ದಲಿತ ಮಹಿಳೆ ಟ್ಯಾಂಕ್‌ನಿಂದ ನೀರು ಕುಡಿದರೆಂದು ಟ್ಯಾಂಕ್ ನ ನೀರನೆಲ್ಲಾ ಸಂಪೂರ್ಣವಾಗಿ ಖಾಲಿಮಾಡಿಸಿ ಅದನ್ನು ಗೋಮೂತ್ರದಿಂದ ಶುದ್ಧೀಕರಿಸಿರುವುದು ಇಡೀ ಮಾನವ ಕುಲವೇ ತಲೆತಗ್ಗಿಸುವ ಘಟನೆಯಾಗಿದೆ. ಕರ್ನಾಟಕದಲ್ಲಿ ಇನ್ನೂ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಈ
ಕೊಪ್ಪಳ ಜಿಲ್ಲೆಯಾದ್ಯಂತ ದಲಿತರ ಮೇಲಿನ ಈ ರೀತಿಯ ದೌರ್ಜನ್ಯ ಮತ್ತು ಹತ್ಯೆಗಳು ಪದೇಪದೇ ನಡೆಯುತ್ತಿವೆ. ಒಂದೆಡೆ ಜಾತಿಯೆಂಬುದಿಲ್ಲ, ಮೀಸಲಾತಿ ತೆಗೆಯಬೇಕು ಇತ್ಯಾದಿ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಜಾತಿ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಸಾಂಕ್ರಾಮಿಕ ಕಾಲದಲ್ಲಿಯೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಪದೇ ಪದೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದ್ದು, ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೂನ್ 22 ರಾತ್ರಿ ಜರುಗಿದೆ. ಬರಗೂರು ಗ್ರಾಮದ ಕುರುಬ ಸಮುದಾಯದ
ಖ್ಯಾತ ಬುದ್ಧಿಜೀವಿ ಮತ್ತು ಹೋರಾಟಗಾರ ಆನಂದ್ ತೇಲ್ತುಂಬ್ಡೆಗೆ ಜಾಮೀನು ಮಂಜೂರು ಮಾಡಿದ ಮುಂಬೈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ನ ಆದೇಶವನ್ನು ಸಿಪಿಐ(ಎಂಎಲ್) ಲಿಬರೇಷನ್ ಸ್ವಾಗತಿಸುತ್ತದೆ. ಸುಮಾರು ಎರಡೂವರೆ ವರ್ಷಗಳ ಜೈಲಿನಲ್ಲಿರುವ ಅವರ ಬಿಡುಗಡೆಯನ್ನು ನಾವು ಸ್ವಾಗತಿಸುವಾಗ, ಭೀಮಾ ಕೋರೆಗೋವ್ ಪ್ರಕರಣದಲ್ಲಿ ಸುಳ್ಳು ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಇತರರೆಲ್ಲರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಬಿಜೆಪಿ/ಆರ್‌ಎಸ್‌ಎಸ್‌ನ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಇರುವ ಒಂದು ಕಾರಣದಿಂದ ಮಾತ್ರ ಜೈಲಿನಲ್ಲಿರುವ ಎಲ್ಲಾ ರಾಜಕೀಯ ಕೈದಿಗಳ ಬಿಡುಗಡೆಯನ್ನು ನಾವು ಆಗ್ರಹಿಸುತಿವಿ ಮತ್ತು
ದಿನಾಂಕ 13/10/2021 ರಂದು ಮಂಗಳೂರಿನ ಏರ್‍ಪೋರ್ಟನಲ್ಲಿ, ಪತ್ರಕರ್ತರು ಧರ್ಮದ ರಕ್ಷಣೆಯ ಹೆಸರಲ್ಲಿ ಹೆಚ್ಚಾಗುತ್ತಿರುವ ಗೂಂಡಾಗಿರಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರನ್ನು ಪ್ರಶ್ನೆ ಮಾಡಿದಾಗ, ಕಾನೂನು ಪಾಲನೆ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಮೊರಾಲಿಟಿ ಅನ್ನೋದು ಸಮಾಜದಲ್ಲಿ ಬೇಕಲ್ವಾ, ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕೋಕೆ ಆಗುತ್ತಾ?, ಇವತ್ತು ನಾವು ನೈತಿಕತೆ ಇಲ್ಲದೆ ಬದುಕೋಕೆ ಆಗಲ್ಲ. ನಮ್ಮೆಲ್ಲಾರ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ನಿಂತಿರೋದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್, ರಿಯಾಕ್ಷನ್
ಕರಾವಳಿ ಕರ್ನಾಟಕದಾದ್ಯಂತ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ಆವರಣ ಮತ್ತು ತರಗತಿಗಳಿಗೆ ಬರಬಾರದೆಂಬ ನಿಷೇಧವನ್ನು ಹೇರುವ ಮೂಲಕ ಗೊಂದಲದ ವಾತಾವರಣವನ್ನು ಸೃಷ್ಠಿಸಲಾಗಿದೆ. ಹಿಜಾಬ್ ಧರಿಸುವುದು ಕಾಲೇಜುಗಳ ಸಮವಸ್ತ್ರ ನೀತಿಯನ್ನು ಉಲ್ಲಂಘಿಸುತ್ತದೆ ಎಂಬ ವಾದವು ಸತ್ಯಕ್ಕೆ ದೂರವಾದ್ದಾಗಿದೆ. ಏಕೆಂದರೆ ಹಿಂದೂ ವಿದ್ಯಾರ್ಥಿನಿಯರು ತಮ್ಮ ಸಮವಸ್ತ್ರದೊಂದಿಗೆ ತಮ್ಮ ಧಾರ್ಮಿಕ ನಂಬಿಕೆಗಳಾದ ಬಿಂದಿಗಳು, ಸಿಂಧೂರ ಮತ್ತು ತಾಳಿಗಳನ್ನು (ಮದುವೆಯಾಗಿದ್ದರೆ) ಧರಿಸುತ್ತಾರೆ; ಹಿಂದೂ ಬ್ರಾಹ್ಮಣ ಹುಡುಗರು ತಮ್ಮ ಸಮವಸ್ತ್ರದ ಜೊತೆಗೆ "ಜನಿವಾರ"ವನ್ನು ಧರಿಸುತ್ತಾರೆ; ಸಿಖ್ ಹುಡುಗರು ತಮ್ಮ ಸಮವಸ್ತ್ರದ ಜೊತೆಗೆ ಪೇಟವನ್ನು ಧರಿಸುತ್ತಾರೆ. ಇದಲ್ಲದೆ, ಕಾಲೇಜುಗಳಿಗೆ ಸಕಾರಣಯುಕ್ತವಲ್ಲದ ಸಮವಸ್ತ್ರ