ಅರಿಂದಾಮ್ ಸೇನ್
(ಲಿಬರೇಷನ್ ಜುಲೈ 1997)
ಡಿ ಡಿ ಕೊಸಂಬಿರವರ 1946ರ ಲೇಖನ, ' ಭಾರತ ದಲ್ಲಿ ಬೂರ್ಜ್ವಾಗಳು ಒಂದು ಪ್ರಬುದ್ಧತೆಗೆ ಬಂದರು ' ಎಂಬುದರ ವಿಸ್ತ್ರಿತ ಭಾಗ. ಮುಂಬೈ ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಸೇರಿದ್ದಾಗ ಅವರೆಲ್ಲರೂ ತಮ್ಮ ಬಂಧನ ನಿಶ್ಚಿತ ಎಂದು ತಿಳಿದಿದ್ದರು. ಅವರುಗಳು ಅದಕ್ಕೆ ತಯ್ಯಾರಿ ಯಾಗಿ, ತಮ್ಮ ಎಲ್ಲಾ ಕುಟುಂಬದ ವ್ಯವಹಾರ ಮತ್ತು ವೈಯಕ್ತಿಕ ಹಣ ಕಾಸಿನ ಸ್ಥಿತಿ ಯನ್ನು ಮುಂದಿನ ಒಂದು ಎರಡು ವರ್ಷಗಳಿಗೆ ಎಲ್ಲಾ ರೀತಿಯ ಸಂದರ್ಭ ಗಳಿಗೆ ಸಿದ್ಧ ಪಡಿಸಿದ್ದರು.
ಈ ಲೇಖಕನಿಗೆ ಸೋಜಿಗ ಏನೆಂದರೆ:,…ಈ ಎಲ್ಲಾ ತೂಕದ ಮತ್ತು ಯೋಗ್ಯ ಪ್ರತಿನಿಧಿಗಳು ಬ್ರಿಟಿಷ್ ಪ್ರಭುತ್ವದ ದಾಳಿಯ ಬಗ್ಗೆ ತಿಳಿದಿದ್ದರು. ಆದರೂ ಸಹ ಕಾಂಗ್ರೆಸ್ ಮತ್ತು ಇಡೀ ದೇಶ, ಈ ಧಾಳಿ ವಿರುದ್ಧ ಏನು ಮಾಡಬೇಕು ಎಂದು ಯೋಚಿಸಿರಲ್ಲಿಲ್ಲ. ಸಾಮಾನ್ಯ ವಾದಂತಹ ಅಭಿಪ್ರಾಯ ವೇನೆಂದರೆ ' ಮಹಾತ್ಮರು ತಮಗೊಂದು ಕಾರ್ಯ ಯೋಜನೆ ನೀಡುತ್ತಾರೆ '. ಮತ್ತು ಈ ಬಂಧನ ಗಳ ಮುಂಚೆ ಮಹಾತ್ಮರ ಭಾಷಣ ದಲ್ಲಿ ಸಹ ಯಾವುದೇ ವಿಶೇಷತೆ ಗಳಿರಲಿಲ್ಲ. ಅಲ್ಲಿ ನೆರೆದಿದ್ದ ಪ್ರತಿದೊಡ್ಡ ಸ್ಫೋಟದ ಕ್ರಾಂತಿಕಾರಿ ಗುಣಗಳನ್ನು ಸಹ ಹೊಂದಿರಲಿಲ್ಲ. ಅಥವಾ ಯಾವುದೇ ನಿರ್ದಿಷ್ಠ ಕಾರ್ಯಕ್ರಮ ನೀಡಲಾಗಿರ ಲ್ಲಿಲ್ಲ. ಅಂದರೆ, ಮಹಾತ್ಮರ ಭಾಷಣ ಒಂದು ರೀತಿಯ ' ಮೇಜವಾಣಿ ', ನಂತರ ನೀಡುವ ಸಂದೇಶ ದಂತಿತ್ತು. ಪ್ರಶ್ನೆ ಅದೇನೆಂದರೆ, ಜನರ ತೀವ್ರ ಅಸಮಾಧಾನದ ನಡುವೆ ಸಹ, ಆ ಭಾಷಣ ದಲ್ಲಿ ಯಾಕೆ ಒಂದು ಕ್ರಾಂತಿಕಾರಿ ಗುಣಲಕ್ಷಣ ಮತ್ತು ಕಾರ್ಯ ಯೋಜನೆಗಳು ಇರಲಿಲ್ಲ’?
ಈ ಸುಸಂಭದ್ದ ಪ್ರಶ್ನೆಗೆ ಕೋಸಾಂಬಿಯವರು ಮೂರು ಸ್ತರಗಳಲ್ಲಿ ಉತ್ತರ ನೀಡುತ್ತಾರೆ. ಒಂದು, "ವರ್ಗದ ಆಧಾರದ ಮೇಲೆ ನೋಡಿದರೆ ಕಾಂಗ್ರೆಸ್ಸಿಗರ ಪ್ರತಿಕ್ರಿಯೆ ಅದ್ಭುತ. ಆದರೆ ರಾಷ್ಟ್ರೀಯ ಕ್ರಾಂತಿಯ ಮಾಪಕ ದೃಷ್ಟಿ ಯಿಂದ ನೋಡಿದರೆ ಇದು ಅಪ್ರಯೋಜಕವೇ ಸರಿ. ಬ್ರಿಟೀಷ್ ಸರ್ಕಾರದ ಗಾಭರಿ, ಮತ್ತು ಅವರ ಎಲ್ಲಾ ನಾಯಕರುಗಳ ಬಂಧನಗಳ ಕಷ್ಟಗಳು, ಕಾಂಗ್ರೆಸ್ ನಾಯಕರ ಮೇಲೆ ಮುಂದಿನ ದಿನಗಳ ಬಗ್ಗೆ ಹೆಚ್ಚಿನ ಜವಾಬ್ದಾರಿಯ ನಡಾವಳಿ ಅನುಸರಿಸುವ ಪರಿಣಾಮ ಆಗಲ್ಲಿಲ್ಲ. ಹಾಗೇನೆ ಬಂಧನ,ಜೈಲು, ಕಾನ್ಸಂಟ್ರೇಷನ್ ಶಿಬಿರಗಳು, ಅವರ ಪ್ರತಿಷ್ಠೆಯನ್ನು ಜನರ ಮಧ್ಯೆ ಹೆಚ್ಚಿಸಿತ್ತು. ಆದ್ದರಿಂದ ಕಾಂಗ್ರೆಸ್ ಮಂತ್ರಿಗಳಿಗೆ ಜನತೆ ಮಧ್ಯೆ ತಮ್ಮನ್ನು ತಾವು ಜನಪ್ರಿಯ ಗಳಿಸುವ ಹೊಸ ಅವಶ್ಯಕತೆ ಬರಲೇ ಇಲ್ಲ."
ಎರಡನೆಯದಾಗಿ, " ಕಾಂಗ್ರೆಸ್ ನ ಲೆಕ್ಕಾಚಾರದ ಯೋಜನೆಗಳು, ಯುದ್ಧದ ನಂತರದಲ್ಲಿನ ಸಂದರ್ಭಕ್ಕೆ, ಎರಡು ತರದ ಪ್ರತಿಫಲಕ್ಕೆ ಹೊಂದಿಕೊಳ್ಳುವಂಹದ್ದು ಆಗಿತ್ತು. ಅದೇನೆಂದರೆ, ಯುದ್ಧದಲ್ಲಿ ಬ್ರಿಟಿಷರ ವಿಜಯ ಅಥವಾ ಭಾರತ ವನ್ನು ಜಪಾನಿಯರು ಆಕ್ರಮಿಸಿಕೊಳ್ಳು ವುದು. ಕೊಸಂಬಿಯವರು,ಇದನ್ನು ಈ ರೀತಿ ವಿವರಿಸುತ್ತಾರೆ "ಆಕಸ್ಮಾತ್ ಬ್ರಿಟೀನ್ ವಿಜಯೀ ಆದರೆ ಕಾಂಗ್ರೆಸ್ ಜಪಾನ್ ನ ಪರ ಇಲ್ಲ ಎoದು ಆಗುತ್ತೆ . ಇನ್ನೊಂದೆದೆ ಜಪಾನೀಯರು ಭಾರತ ವನ್ನ ಆಕ್ರಮಿಸಿ ಕೊಂಡರೆ, ಅವರು ಕಾಂಗ್ರೆಸ್ ಬ್ರಿಟಿಷರನ್ನು ಬೆಂಬಲಿಸಲಿಲ್ಲ ಎoದು ತಿಳಿಯಲಾಗುತ್ತದೆ".
ಮೂರನೆಯದು, " ಕಾಂಗ್ರೆಸ್ ನಲ್ಲಿನ ಬೂಜ್ವಾ ಪ್ರತಿನಿಧಿಗಳು ಎನ್ನನ್ನೂ ಕಳೆದು ಕೊಳ್ಳುವುದಿಲ್ಲ ಎoದು ತಿಳಿದಿದ್ದರು". ಕೊನೆಯದಾಗಿ, " ಜನತೆಯ ಮೇಲಿನ ದೌರ್ಜನ್ಯ ವಿರುದ್ಧದ ಆಕ್ರೋಶವು ಅಧಿಕಾರಿ ಶಾಹಿಯ ತಲೆ ಮೇಲೆಯೇ ಬೀಳುತ್ತಿತ್ತು. ಹಾಗೂ ಜನತೆಯ ಅಸಮಾಧಾನದ ಆಸ್ಫೋಟ ದಿoದ ಭಾರತದ ಬೂಜ್ವಾ ಗಳನ್ನ ಯಾವುದೇ ರೀತಿ ಘಾಸಿ ಗೊಳಿಸುವು ದಿಲ್ಲ". ಕೋಸoಬಿಯವರು ' ಜನರ ಮನಸ್ಸಿನಲ್ಲಿ ಕ್ರಾಂತಿಯ ಉದ್ದೇಶ ಇದ್ದರೂ ಸಹ, ಅದು ಬೂರ್ಜ್ವಾಗಳ ಮತ್ತು ಕಾಂಗ್ರೆಸ್ ನ ಉದ್ದೇಶ ವಾಗಿರಲ್ಲಿಲ್ಲಾ ಎಂಬುದಕ್ಕೆ ಆಳವಾದ ವರ್ಗ ವಿಶ್ಲೇಷಣೆಯನ್ನ ಕೊಡುತ್ತಾರೆ. ಈ ಸಂದರ್ಭ ದಲ್ಲಿ ' ಲೆನಿನ್ ರ ಮಾತುಗಳನ್ನು ನೆನಪಿಸಿ ಕೊಳ್ಳಬೇಕು, " ಯಾವಾಗ ಕೆಳ ವರ್ಗದವರು ಹಳೆಯ ವ್ಯವಸ್ಥೆ ಯನ್ನ ತಿರಸ್ಕರಿಸುತ್ತಾರೆ ಮತ್ತು ಉಚ್ಚ ವರ್ಗ ದವರು ತಮ್ಮ ಹಳೇ ವ್ಯವಸ್ಥೆ ಮುಂದುವರಿಸಲು ಸಾಧ್ಯ ವಿಲ್ಲ ಎಂದು ತಿಳಿಯುತ್ತಾರೆ, ಆಗ ಮಾತ್ರವೇ ಒಂದು ಕ್ರಾoತಿ ವಿಜಯೀ ಆಗುತ್ತದೆ ". ಈ ಸತ್ಯ ವನ್ನ ಇನೊಂದು ರೀತಿ ಹೇಳ ಬಹುದು, ' ಒಂದು ಕ್ರಾಂತಿಕಾರೀ ಬಿಕ್ಕಟ್ಟು ಶೋಷಿತ ಮತ್ತು ಶೋಷಕ ಇಬ್ಬರನ್ನೂ ಆವರಿಸಿದರೆ ಮಾತ್ರ ಕ್ರಾಂತಿ ಸಂಭವಿಸುವುದು '... 1942 ರಲ್ಲಿ ದುಡಿಯುವ ವರ್ಗ ಅತ್ಯಂತ ಆಳ ವಾದ ದುರವಸ್ಥೆ ಮತ್ತು ಅವನತಿ ಯನ್ನು ತಲುಪಿತ್ತು.
ಆದರೆ ಆಗ ಭಾರತದ ಬೂರ್ಜ್ವಾ ಗಳು ಎಂದಿಗಿಂತಲು ಹೆಚ್ಚಾಗಿ ಮೆರೆಯುತ್ತಿದ್ದರು. ಅಂದರೆ ಈ ಯುದ್ಧದ ಗುತ್ತೇದಾರಿ, ಬೆಲೆಗಳ ಉಬ್ಬರ, ವಿಸ್ತೃತ ಕಪ್ಪು ಮಾರುಕಟ್ಟೆ ಇವೆಲ್ಲದರ ಲಾಭವನ್ನು ಹೂಡಿಕೆ ದಾರರು ಮತ್ತು ಕೈಗಾರಿಕೆಗಳು ಅನುಭವಿಸುತ್ತಿದ್ದರು. ಅಷ್ಟು ಏಕೆ ಸಾಮಾನ್ಯ ವಾಗಿ ಭಾರತದಲ್ಲಿ ಅಸಂತೋಷ ವನು ಮುನ್ನೆಲೆಗೆ ತರುವ ‘ಕೆಳ ಮಧ್ಯಮ ವರ್ವು’ ಸಹ ಒಂದು ರೀತಿಯ ಉನ್ನತಿ ಯನ್ನೆ ಕಂಡರು. ಅವೇನೆಂದರೆ ಹೊಸದಾಗಿ ಸೃಷ್ಟಿಸಿದ ಗುಮಾಸ್ತ ಮತ್ತು ಸರ್ಕಾರಿ ನೌಕರಿಗಳು, ಯುದ್ಧ ಮತ್ತು ವಿಸ್ತೃತ ಗೊಳ್ಳು ತ್ತಿದ ಆರ್ಥಿಕ ವ್ಯವಸ್ಥೆ ಯಿಂದಾಗಿ ಪ್ರಯೋಜನ ಪಡೆದರು. ಇದನ್ನು ಗಮನಿಸಿದ ಬ್ರಿಟಿಷರು ಭಾರತ ದಲ್ಲಿ ಹೆಚ್ಚಿನ ಬಂಡವಾಳ ಹೂಡಿ, ಭಾರತದ ಬಂಡವಾಳಿಗರು ಹೆಚ್ಚಿನ ಲಾಭ ಪಡೆಯುವಂತೆ ಅವಕಾಶ ಮಾಡಿಕೊಟ್ಟರು. ಈ ಕಾರಣಕ್ಕಾಗಿ 1942 ನಲ್ಲಿ ಯಾವುದೇ ಪ್ಲಾನ್ ಇರಲಿಲ್ಲ. ಜನತೆ ಕ್ರಾಂತಿ ಗಾಗಿ ಹಂಬಲಿಸಿದ್ದರು ಸಹ ಅನೇಕ ತಡೆಗಳು ಏಕೆ ಬಂದವು ಎಂದು ತಿಳಿಯ ಬಹುದು '.(from exasperating essays, pp16-17)
ನಂತರದ ಚಾರಿತ್ರಿಕ ಅಧ್ಯಯನದ(೧೫) ಮುಖಾoತರ ಒಂದು ಅoಶ ಹೊರ ಬಂದಿದೆ, ' ಭಾರತ ಬಿಟ್ಟು ಚಳುವಳಿ ', ಯ ಮೂಲ ಉದ್ದೇಶ : ಬ್ರಿಟೀಷ್ ರಾಜ್ ಜತೆ ಮುಖಾ ಮುಖಿ ಸಂಘರ್ಷ ವಾಗಿರಲಿಲ್ಲ. ಬದಲಾಗಿ ಅದು ಮುನ್ನುಗ್ಗುತ್ತಿರುವ ಜಪಾನೀಯರ ಆಕ್ರಮಣ ದಿಂದ ಕೆಂಗೆಟ್ಟಿದ ಬ್ರಿಟಿಷರು ಕಾಂಗ್ರೆಸ್ ಪಕ್ಷಕ್ಕೆ, ಅಂದರೆ ಮುಸ್ಲಿಂಲೀಗ್ ಹೊರತು ಪಡಿಸಿ, ಅಧಿಕಾರ ಹಸ್ತಾಂತರಕ್ಕೆ ಒತ್ತಡದ ತಂತ್ರಗಾರಿಕೆ ಅಷ್ಟೇ ಆಗಿತ್ತು. ಬಹಿರಂಗ ವಾಗಿ ಗಾಂಧಿ ಯವರು ಯಾವುದೇ ರಾಜಿಗೆ ಸಿದ್ಧ ವಿಲ್ಲಾ ಎಂದು ಹೇಳುತ್ತಾ ಚೌಕಾಸಿ ಮಾಡಲು ಎಲ್ಲಾ ಮಾರ್ಗ ಗಳನ್ನು ತೆರೆದಿಟ್ಟಿದ್ದರು. ಗಾಂಧಿಯವರು 4 ಆಗಸ್ಟ್ 1942 ರ ಸರ್ ತೇಜ್ ಬಹದ್ದೂರ್ ಸಪ್ರು ರವರಿಗೆ ಬರೆದ ಒಂದು ಪತ್ರದಲ್ಲಿ , ' ನಾನು ಬಿಕ್ಕಟ್ಟನ್ನು ತಡೆಯಲು ಎಲ್ಲಾ ಪ್ರಯತ್ನ ಮಾಡು ತ್ತಿದ್ದೇನೆ, ಏಕೆಂದರೆ ಸಣ್ಣ ಪುಟ್ಟ ಕ್ರಮ ಗಳಿಂದ ಅದೇ ಫಲಿತಾಂಶ ಪಡೆಯಬಹುದೇ ಎಂದು '. ಆಗಸ್ಟ್ 6 ರಂದು ಅವರು 'ಭಾರತ ಬಿಟ್ಟು ತೊಲಗಿ ' ನಿರ್ಣಯ ಅಂಗೀಕರಿಸಿ ದ ಮೇಲೆ ಎಸೋಸಿಯೇಟ್ಡ್ ಪ್ರೆಸ್ ಗೆ ನೀಡಿದ ಹೇಳಿಕೆ ಯಲ್ಲಿ ' ನಿಜ, ವೈಸರಾಯ್ ಗೆ ಒಂದು ಪತ್ರ ಹೋಗೆ ಹೋಗುತ್ತದೆ, ಅದೇನೂ ಅಂತಿಮ ಎಚ್ಚರಿಕೆ ಅಲ್ಲ, ಬದಲಾ ಗಿ ಸಂಘರ್ಷವನ್ನ ತಪ್ಪಿಸ ಬೇಕೆಂದು ಅದರಲ್ಲಿ ಮನವಿ ಮಾಡಲಾಗುತ್ತೆ. ಈ ಪತ್ರ ವೆನಾದರೂ ಅನುಕೂಲಕರ ಪ್ರತಿಕ್ರಿಯೆ ನಿಮ್ಮoದ ಉಂಟು ಮಾಡಿದರೆ, ಇದನ್ನೆ ಮಾತುಕತೆಯ ತಳಹದಿ ಎಂದು ಪರಿಗಣಿಸ ಬಹುದು'ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಗಾಂಧಿಯವರ ಅಗಸ್ಟ್ 8 ರ ಭಾಷಣ, ' ಮಾಡು ಇಲ್ಲಾ ಮಡಿ ' ದಲ್ಲಿ ಅವರು ಜನತೆ ಯಾವುದೇ ಉದ್ರೇಕ ಕಾರಿ ಕ್ರಿಯೆ ಮಾಡ ಬಾರದು ಮತ್ತು ತಾವು ವೈಸರಾಯ್ ಗೆ ಬರೆದ ಪತ್ರದ ಉತ್ತರ ವನ್ನು ಎದುರು ನೋಡೋಣಾ ಎoದರು. ಕೆಲವು ದಿನಗಳ ಹಿಂದೆ ಗಾಂಧಿ ಯವರು ವಿನೋಭಾ ಭಾವೆ ಜತೆ ಮಾತನಾಡುತ್ತಾ ಜಪಾನೀಯವರ ದಾಳಿ ಯಿಂದಾಗಿ ಅನಿವಾರ್ಯ ವಾಗಿ ಮಾತು ಕತೆಗೆ ಬ್ರಿಟೀಷ್ ರು ಬರಬೇಕಾಗುತ್ತದೆ, ಅವರು ಎಂದರೆ ನೆಹರು ಮತ್ತು ಅಜಾದರು, ಅಮೆರಿಕ ಅಧ್ಯಕ್ಷ ರೂಸ್ವೇಲ್ಟ್ ರವರು, ವಿಶ್ವ ಸಂಸ್ಥೆ ಮೂಲಕ ಚರ್ಚಿಲ್ ಮೇಲೆ ಒತ್ತಡ ಹೇರಿ ಅವರು ಕಾಂಗ್ರೆಸ್ ಜತೆ ಮಾತು ಕತೆಗೆ ತೊಡಗುವಂತೆ ಮಾಡುವರೆಂದು ನಿರೀಕ್ಷಿಸಿದ್ದರು.
ಈ ಎಲ್ಲಾ ನಿರೀಕ್ಷೆ ಗಳನ್ನ ಸುಳ್ಳು ಮಾಡುತ್ತಾ ಗಾಂಧಿಯವರ ಪತ್ರಕ್ಕೆ ವೈಸರಾಯ್ ಯಾವುದೇ ಸೊಪ್ಪು ಹಾಕದೆ, ದುರಹಂಕಾರಿ ಆಡಳಿತದ ಮೂಲಕ ಇಡೀ ಕಾಂಗ್ರೆಸ್ ನಾಯಕತ್ವವನ್ನ ಜೈಲಿಗೆ ತಳ್ಳಿದರು. ಆಗ ಗಾಂಧಿಯವರ ಮಾತು, ' ನಾನು ನಿಮ್ಮ ಮಿತ್ರ ನಾಗಿಯ್ ಉಳಿದಿದ್ದೇನೆ '. ಗಾಂಧಿಯವರು ವೈಸರಾಯ್ ರವರನ್ನು ಉದ್ದೇಶಿಸಿ, ' ತಾವು ನಾನು ಹೇಳಿದಂತೆ ಕ್ರಿಯಾಶೀಲ ರಾಗಲ್ಲಿಲ್ಲ, ಆದಾಗ್ಯೂ ನೀವು ಯಾವಾಗಲೂ ತಕ್ಷಣ ಕ್ರಮ ತೆಗೆದು ಕೊಳ್ಳುವ ಮೊದಲು ನನ್ನನ್ನು ಕರೆಸಿ ಕೊಳ್ಳಿ, ನಿಮ್ಮ ಆತಂಕಗಳನ್ನು ತಿಳಿಸಿ, ಅದರಿಂದ ನಿಮಗೆ ವಸ್ತು ಸ್ಥಿತಿಯ ಅರಿವು ಆಗುತ್ತದೆ. ನಿಮ್ಮ ಕ್ರಮ ದ ಅರಿವು ನಿಮಗೆ ಆಗುವುದು'.
ಆ ಸಮಯದಲ್ಲಿ ಉಂಟಾದ ಬೃಹತ್ ಜನತೆಯ ಹೋರಾಟ ಗಳನ್ನು ತಡೆಯಲು ಕಾಂಗ್ರೆಸ್ ಪಕ್ಷ ದ ನಾಯಕರನ್ನು ಸರ್ಕಾರ ಬಿಡುಗಡೆ ಮಾಡಲಿಲ್ಲ. ಇದರಿದಾಗಿ ' ಭಾರತ ಬಿಟ್ಟು ತೊಲಗಿ ' ಚಳುವಳಿಯು, ಲಾರ್ಡ್ ಲಿನಲಿತೋಗೌ ಹೇಳಿದಂತೆ, '1857ರ ನಂತರ ಆದ ಅತಿ ದೊಡ್ಡ ದಂಗೆ ಅದು '. ಲಿನಲಿತೋಗೌ ರವರು ಚರ್ಚಿಲ್ ರಿಗೆ ಕಳುಹಿಸಿದ ಸಂದೇಶದ ಪ್ರಕಾರ, ' ಜೈಲ್ ನಿಂದ ಗಾಂಧಿ ಮತ್ತು ಅವರ ಸಹಚರರು, ಹಿಂಸೆಯನ್ನು ಖಂಡಿಸುತಿದ್ದರು, ಎಲ್ಲಾ ಹೋರಾಟ ಗಾರರು ಪೊಲೀಸರಿಗೆ ಶರಣಾಗಿ ಎಂದು ಕರೆ ನೀಡುತ್ತಿದ್ದರು, ಮತ್ತು ಬ್ರಿಟೀಷ್ ಸರ್ಕಾರದ ಜತೆ ಸಹಕರಿಸಿ ಎಂದು ಕರೆ ನೀಡು ತಿದ್ದರು '. ಈ ಮೂಲಕ ಜಿ ಡಿ ಬಿರ್ಲಾ ರಂತವರ ರಾಯಭಾರಿಕೆ ಯಿಂದ ಗಾಂಧಿ ಬ್ರಿಟೀಷ್ ರ ವಿಶ್ವಾಸ ಗಳಿಸುತ್ತಿದ್ದರು ಎಂದು ಸಂದೇಶ ನೀಡುತ್ತಿದ್ದರು.
ಗಾಂಧಿ ನಾಯಕತ್ವದ ಸಂಶಯಾಸ್ಪದ ಇಂತಹ ಇಬ್ಬಂದಿ ನೀತಿಯ ನಾಯಕತ್ವ ವನ್ನು ಮಾದ್ಯಮದ ಸಹಕಾರ ಮತ್ತು ಗಾಂಧಿಯವರ ಸುಧೀರ್ಘ ಜೈಲು ವಾಸ ದಿಂದಾಗಿ ಈ ವಿಚಾರ ವನ್ನು ಮುಚ್ಚಿ ಇಡಲಾಗುತ್ತಿತ್ತು. ಆದರೆ ಯುದ್ಧದ ನಂತರ ಗಾಂಧಿ ನಾಯಕತ್ವ ಹೆಚ್ಚಿದ ಹೆಮ್ಮೆಯಿಂದ ಹೊರಬಂದು ಮಾತುಕತೆಯ ಹೊಸ ಸುತ್ತಿನಿಂದಾಗಿ ಆಗಸ್ಟ್ 1947ರ ಅಧಿಕಾರ ಹಸ್ತಾಂತರ ದಲ್ಲಿ ಕೊನೆಗೊಂಡಿತು. ಆದರೆ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಜಯ ಪ್ರಕಾಶ್ ನಾರಾಯಣ್, ಆಚ್ಯುತ್ ಪಟವರ್ಧನ್ ಮತ್ತು ಇತರರ ಸಮರ್ಥ ಮುಂಚೂಣಿ ನಾಯಕತ್ವದಲಿ ಮಿಲಿಟೆoಟ್ ಚಳುವಳಿ ಮುಂದುವರೆಯಿತು. ಮುಸ್ಲಿಂ ಲೀಗ್ ಮತ್ತು ಅರ್ ಎಸ್ ಎಸ್/ ಹಿಂದೂ ಮಹಾ ಸಭಗಳು ಈ ಚಳುವಳಿಯ ನ್ನು ಕಟುವಾಗಿ ಟೀಕಿಸಿದವು. ಅದರಲ್ಲೂ ಹಿಂದೂ ಮಹಾಸಭಾ ನಾಯಕ ಶಾಮ್ ಪ್ರಸಾದ್ ಮುಖರ್ಜಿ ಪ್ರಾಂತೀಯ ಮಂತ್ರಿಗಳ ಸಭೆಯ ಪ್ರತಿನಿಧಿ ಯಾಗಿ, ಈ ಚಳುವಳಿ ಯನ್ನು ಹತ್ತಿಕ್ಕಲು ಭಾಗವಹಿಸಿದರು.
ಸಿ. ಪಿ. ಐ. ಭಾರತ ಕಮ್ಯುನಿಸ್ಟ್ ಪಕ್ಷದ ತಪ್ಪುಗಳ ಗುಣಲಕ್ಷಣಗಳು:
ನಿರ್ದಿಷ್ಟವಾಗಿ 1942 ನಲ್ಲಿನ ಸಿಪಿಐ PW (people's war) ರಾಜಕೀಯ ಪಾತ್ರ ಹಾಗು ಮಾರ್ಗವು, ಪಕ್ಷದ ಫೆಬ್ರವರಿ 1948 ನಲ್ಲಿ ನಡೆದ ಎರಡ ನೆಯ ಅಧಿವೇಶನ ದಲ್ಲಿ ಸ್ವಲ್ಪ ಮಟ್ಟದ ಸ್ವ ವಿಮರ್ಶೆಗೆ ಒಳಗಾಯಿತು. 1942 ನಲ್ಲಿ ನಡೆದ ಆ ತಪ್ಪಿನ ಕಾರಣದ ಸೈದ್ಧಾಂತಿಕ ನೆಲೆ ಯನ್ನ ಈ ರೀತಿಯಾಗಿ ಗುರುತಿಸಲಾಯಿತು. ಅದೇನೆಂದರೆ, ‘ಫ್ಯಾಸಿಸಂ ಮತ್ತು ಸಾಮ್ರಾಜ್ಯ ಶಾಹಿ ಯ ಅಪಜಯದ ನಂತರ ಜನತೆಯ ಸ್ವಾತಂತ್ರ್ಯವು ಸ್ವಯಂ ಚಾಲಿತವಾಗೀ ತಾನೇ ತಾನಾಗಿ ಆಗುತ್ತದೆ ಎಂಬ ವಿಚಾರದ ನoಬಿಕೆ’ ಆಗಿತ್ತು. ಇಲ್ಲಿ ಪರಾಜಿತ ಫ್ಯಾಸಿಸಂ ಮತ್ತು ಸಾಮ್ರಾಜ್ಯ ಶಾಹಿಯು 'ಜನತೆಯ ಕ್ಯಾಂಪ ನಲ್ಲಿ ಬಂಧಿಯಾಗಿರುವುದು' ಎಂದು ನಂಬಲಾಗಿತ್ತು.
'ಜನತೆಯ ಸಮರದ ಕಾಲ ದಲ್ಲಿನ ಈ ರೀತಿಯ ಸಾಮ್ರಾಜ್ಯ ಶಾಹಿ ಪಾತ್ರ ವನ್ನ ಸರಿಯಾಗಿ ಅಂದಾಜು ಮಾಡದೆ ಇದಿದ್ದುದರಿಂದ ನಾವು ಫ್ಯಾಸಿಸ್ಟ್ ವಿರೋಧಿ ಯುದ್ಧದ ಒಳಗೆ ಸಾಮ್ರಾಜ್ಯ ಶಾಹಿಯನ್ನು ಸಹ ಎದುರಿಸುವ ಕರ್ತವ್ಯ ವನ್ನು ಮರತೆ ಬಿಟ್ಟೆವು(16). ಈ ಸ್ವಯಂ ವಿಮರ್ಷೆ ಯನ್ನು ಮುಂದುವರಿಸಿ ಮತ್ತು ಆಳ ಗೊಳಿಸುವ ಬದಲು, ಕೆಲವು ಹಿರಿಯ ಕಾಮ್ರೇಡ್ ಗಳು ತದ್ ವಿರುದ್ಧ ವಾಗಿ ನಡೆದು ಕೊಂಡರು. ಹೀಗಾಗಿ ಇಎಂ ಎಸ್ ನಂಬೂದರಿ ಪಾದ್ ರವರ ಪುಸ್ತಕ "Reminiscences of the Indian communists", ದಲ್ಲಿ ಭಾರತ ಕಮ್ಯುನಿಸ್ಟರ ಆಯ್ಕೆಯ ಸಂಕಷ್ಟ ಗಳನ್ನು ಗುರುತಿಸಿದ್ದಾರೆ. (ಅದೇನೆಂದರೆ ಪಕ್ಷದ ನಾಯಕತ್ವವು ರಾಷ್ಟ್ರೀಯ ಶತ್ರು ವಿರೋಧಿ ಹೋರಾಟ ದಲ್ಲಿ ತೊಡಗಿಸಿ ಕೊಂಡರೆ ಫ್ಯಾಸಿಸ್ಟ್ ವಿರೋಧಿ ಹೋರಾಟವು ಕ್ಷೀಣಿಸುತ್ತದೆ.ಅಥವಾ ಫ್ಯಾಸಿಸ್ಟ್ ವಿರೋಧಿ ಶಕ್ತಿಯನ್ನು ಬೆಂಬಲಿಸಿದರೆ, ದೇಶ ಪ್ರೇಮಿ ಜನತೆ ಯಿಂದ ದೂರ ವಾಗ ಬೇಕಾಗುತ್ತದೆ). ಆದ್ದರಿಂದ, ಪಾರ್ಟಿ ನಾಯಕತ್ವವು ಮೊದಲಿನ ಆಯ್ಕೆಯನ್ನು ಮೊದಲು ಆರು ತಿಂಗಳು ಮಾಡಿ, ನಂತರದಲ್ಲಿ ಎರಡನೆಯ ಆಯ್ಕೆಯನ್ನು ಡಿಸೆಂಬರ್ 1941ನಲ್ಲಿ ಮಾಡಿತ್ತು (ಪುಟ 87).
ಇಲ್ಲಿ ಇಡೀ ವಿಷಯ ವನ್ನು ಐಕ್ಯ ಕಮ್ಯುನಿಸ್ಟ್ ಪಕ್ಷದ ನಾಯಕತ್ವ, ಯಾವುದೇ ಹೊರಗಿನ ಮಧ್ಯ ಪ್ರವೇಶ ವಿಲ್ಲದೆ ಒಂದು ಸಮತೋಲನವಾದ ನ್ಯಾಯ ಬದ್ಧ ನಿರ್ಣಯ ತೆಗೆದು ಕೊಂಡಿತ್ತೆಂದು ಹೇಳ ಲಾಗಿದೆ. ಇದು ಸತ್ಯ ವಲ್ಲ. ಇನ್ನೊಂದು ಸಣ್ಣ ಟಿಪ್ಪಣಿ ಯಲ್ಲಿ ನಂಬೂದರಿ ಪಾದ್ ಗುರುತಿಸಿ ಹೀಗೆ ಹೇಳಿದ್ದಾರೆ, ‘ಕಮ್ಯುನಿಸ್ಟ್ ಚಳುವಳಿಯು, ರಾಷ್ಟ್ರೀಯ ಚಳುವಳಿಯ ನಾಯಕರಾದ ನೆಹರು ಮತ್ತು ಆಜಾದ್ ರವರ ನಿರ್ಣಯ ವನ್ನು ಕಮ್ಯುನಿಸ್ಟ್ ಚಳುವಳಿಯು ನಂತರದಲ್ಲಿ ಅನುಸರಿಸಿದ ಬಗ್ಗೆ ನಾಚಿಕೆ ಪಡ ಬೇಕಿಲ್ಲ’ (ಪುಟ 17). 'ಉನ್ನತ ರಾಷ್ಟ್ರೀಯ ನಾಯಕರುಗಳ' ನೆರಳಿನಲ್ಲಿ ಅವಿತು ಕೊಳ್ಳುವ ಬದಲು, ಕಮ್ಯುನಿಸ್ಟ್ ನಾಯಕತ್ವವು ಆ ತಪ್ಪುಗಳು ಹೆಚ್ಚು ಅಪಾಯ ಕಾರಿ ಮತ್ತು ನಾಚಿಗೆ ಕೇಡಿನದು ಎಂದು ಗೊತ್ತಿದ್ದರೂ ಸಹ, ಪಕ್ಷವು ಈ 'ತಪ್ಪು ನಿರ್ಣಯವನ್ನು' ಕೊನೆಯತನಕವು ಹಠಹಿಡಿದು ಅದನ್ನೆ ಎತ್ತಿ ಹಿಡಿಯಿತು. ಗಾಂಧಿ ನಾಯಕತ್ವದ ' ಭಾರತ ಬಿಟ್ಟು ತೊಲಗಿ ' ಚಳುವಳಿಗೆ ಸೈದ್ಧಾಂತಿಕ ಆಧಾರ ವಿದೆಯಾದರೂ, ನಂತರದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕರುಗಳು ಬ್ರಿಟೀಷ್ ವಿರೋಧಿ ಅಲೆಗಳ ಕ್ರಾಂತಿಕಾರೀ ಸತ್ವವನ್ನು ಅರಿಯ ಬೇಕಿತ್ತು. ಅದನ್ನು ಫ್ಯಾಸಿಸ್ಟ್ ವಿರೋಧಿ ಹೋರಾಟ ಗಳನ್ನು ನಡೆಸುತ್ತಾ ಮತ್ತು ಜಪಾನೀಯರ ಆಕ್ರಮಣ ವಿರುದ್ಧ ಏಕ ಕಾಲಕ್ಕೆ ತಯ್ಯಾರಾಗಿ ಮುನ್ನುಗ್ಗ ಬೇಕ್ಕಿತ್ತು. ಸ್ಟಾಲಿನ್ ಗಾರ್ಡ್ ನಲ್ಲಿ ಸೋವಿಯೆತ್ ವಿಜಯದ ನಂತರ ಪಕ್ಷವು ಫ್ಯಾಸಿಸ್ಟ್ ವಿರೋಧಿ ಕಾರ್ಯ ಕ್ರಮ ಬಿಟ್ಟು ಸಾಮ್ರಾಜ್ಯ ಶಾಹಿ ವಿರೋಧಿ ಕಾರ್ಯ ವಿಧಾನ ವನ್ನು ತನ್ನ ಕಾರ್ಯಕ್ರಮದಲ್ಲಿ ಸೇರಿಸಿ ಕೊಳ್ಳ ಬೇಕಿತ್ತು.
ಆ ಸಮಯದಲ್ಲಿ ಒಂದು, ಪ್ರಭುತ್ವ ಧ್ವನಿ ಗಳಿಗೆ ಏನೂ ನಷ್ಟ ಇರಲ್ಲಿಲ್ಲ. ಉದಾಹರಣೆಗೆ ಸಿಪಿಐನ ಒಳ್ಳೆಯ ಮಿತ್ರ ಮತ್ತದರ ರಾಜಕೀಯ ಮಾರ್ಗ ಒಪ್ಪುತ್ತಿದ್ದ ಸ್ವಾಮಿ ಸಹಜಾ ನಂದರು ಬಿಹಾರದ ಕಡೆ Bakasht ಚಳುವಳಿಯನ್ನು ಪೂನರ್ಜಿವನ ಗೊಳಿಸಲು ಒತ್ತಾಯಿಸಿದ್ದರು. 'ಅವರ ಪ್ರಕಾರ ಕಿಸಾನ್ ಸಭಾವು ಆಂಟಿ ಫ್ಯಾಸಿಸ್ಟ್ ಚಳುವಳಿಯನ್ನು ಮುಂದು ವರಿಸುತ್ತಾ ಬ್ರಿಟಿಷರ ಜಪಾನಿ ವಿರುದ್ಧ ಯುದ್ಧ ಪ್ರಯತ್ನ ವನ್ನೂ ಬೆಂಬಲಿಸುತ್ತಾ , ಅದೇಸಮಯ ಕೃಷಿ ಹೋರಾಟಗಳನ್ನು ಸಹ ಮುಂದುವರಿಸ ಬೇಕು' (೧೮). ಆದರೆ ಈ ಬುದ್ದಿ ಮಾತುಗಳನ್ನು ಕೇಳುವವರಿಲ್ಲ ದಿಂದಾಗಿ ಅವರು ಬೇರೆ ದಾರಿ ಹಿಡಿದರು. ಆದಾಗ್ಯೂ ಅನೇಕ ಸಿ ಪಿ ಐ ಸದಸ್ಯರು, ವೈಯಕ್ತಿಕವಾಗಿ 'ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ಭಾಗ ವಹಿಸಿದ್ದರು. ಮಾವೋ ಟ್ಸೆತುಂಗ್ ರವರು ಸಿ ಪಿ ಐ ಕೇಂದ್ರ ಸಮಿತಿಗೆ ಏಪ್ರಿಲ್ 1943 ನಲ್ಲಿ ಒಂದು ಸ್ನೇಹ ಪೂರಿತ ಸಂದೇಶ ಕಳುಹಿಸಿದ್ದರು. 'ಇನ್ನೊಂದು ಪಕ್ಷದ ಆoತರಿಕ ವಿಚಾರದಲ್ಲಿ ಮೂಗು ತೂರಿಸ ಬಾರದೆಂಬ ಆಧಾರದ ಮೇಲೆ ಯೇ ಅವರು ಸಿಪಿಐ ಪಕ್ಷವು ತಂತ್ರ ಗಳನ್ನು ಬದಲಿಸಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದ್ದರು.
ಅವರ ಪ್ರಕಾರ, ' ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಇಂಡಿಯಾ ಜನತೆಯ ಪ್ರಯತ್ನದ ಫಲವಾಗಿ ಇoದಿನ ಕಷ್ಟದ ಪರಿಸ್ಥಿತಿ ಯಲ್ಲಿ ಒ o ದು ಪರಿಹಾರದ ಮಾರ್ಗ ವನು ಕಂಡುಹಿಡಿಯ ಬಹುದು ಎoದು ನಾವು ನಂಬುತ್ತೇವೆ. ಇದರ ಉದ್ದೇಶ ಫ್ಯಾಸಿಸಂ ಅನ್ನು ಸೋಲಿಸುವುದು, ಮತ್ತು ಭಾರತ ಸ್ವಾತಂತ್ರ್ಯ ವನ್ನು ಗಳಿಸುವುದು ಆಗಿದೆ ' (19).
ಸಿಪಿಐ ನ ನಾಯಕರು ಭಾರತದ ಪ್ರಗತಿಪರ ಬುದ್ಧಿಜೀವಿಗಳು ವಸಾಹತುಶಾಹಿ ಮನಸ್ಥಿತಿ ಯನ್ನು ಹೊಂದಿದ್ದರು. ಅದರ ಪ್ರಕಾರ ಇನ್ನೊಂದು ಏಶಿಯನ್ ಪಕ್ಷ ಒoದರ ಸಲಹೆಗಳನ್ನುಗಂಭೀರ ವಾಗಿ ತೆಗೆದು ಕೊಳ್ಳ ಬಾರದೆಂದಿತ್ತು. ಲಂಡನ್ ಅಥವ ಮಾಸ್ಕೋ ದಿಂದ ಯಾವ ತಕರಾರು ಎತ್ತದಿರುವ ಕಾರಣ ಅವರು ಗಳು ತಮ್ಮ ಪುರಾತನ ನಂಬಿಕೆ ಗಳನ್ನೆ ಮುಂದುವರಿಸಿದರು.
ಈ ರೀತಿಯ ಸ್ವವಿಮರ್ಶಾ ಅoಶ ಗಳನ್ನು ಹೇಳಿದನಂತರ, ಎರಡು ಅoಶಗಳನ್ನ ಗುರುತಿಸ ಬೇಕಾಗುತ್ತದೆ. ಒಂದನೆಯದಾಗಿ, ಕಮ್ಯುನಿಸ್ಟರು, ಜನತಾ ಸಮರದ ಕಾಲ ದಲ್ಲಿ, ಪೊಲೀಸ್ ಏಜೆಂಟ್ಸ್ ರಾಗಿ ಬ್ರಿಟೀಷ ರಿಂದ ಹಣ ಪಡೆದು ಕೊಳ್ಳುತ್ತಿದ್ದಾರೆಂಬ ಆರೋಪ ಸಂಪೂರ್ಣ ಆಧಾರ ರಹಿತವಾಗಿದೆ. ಇದಕ್ಕೆ ತದ್ವಿರುದ್ಧ ವಾಗಿ ಜುಲೈ 1942 ಹೊತ್ತಿಗೆ ಬ್ರಿಟಿಷ್ ಸರ್ಕಾರವು ಕಮ್ಯುನಿಸ್ಟ್ ಕೈದಿಗಳನ್ನು ಜೈಲ್ ನಿಂದ ಬಿಡುಗಡೆ ಮಾಡಿದ್ದು ಮತ್ತು ಸಿ ಪಿ ಐ ಗೆ ಕಾನೂನು ಬದ್ಧ ಅಸ್ತಿತ್ವ ನೀಡಿತ್ತು. ಅದು ಸಹ ಮೀನಾ ಮೇಷ ಉದಾಸೀನತೆ ಯಿಂದಲೇ; ಆಗಸ್ಟ್ - ಸೆಪ್ಟೆಂಬರ್ ರಲ್ಲೀ ಜನತಾ-ಸಮರದ(PW) ಕ್ರಿಯಾಶೀಲತೆಯ ಪರಾಕಾಷ್ಠೆಯಲ್ಲಿ ಸರ್ಕಾರದ ನಿಲುವು ಕಮ್ಯುನಿಸ್ಟರ ಬಗ್ಗೆ ಹೀಗಿತ್ತು, ಅದೇನೆಂದರೆ, ' ಇದು ಮೂಲತಃ ಒಂದು ಭಾರತದ ಸ್ವಾತಂತ್ರ್ಯಕ್ಕೆ ಕೆಲಸಮಾಡುವ ರಾಷ್ಟ್ರವಾದಿ ಪಕ್ಷ '. ಅವರು ಸರ್ಕಾರ ದಿಂದ ಯಾವುದೇ ರೀತಿಯ ಆರ್ಥಿಕ ಅಥವಾ ಇತರೆ ಸಹಾಯವನ್ನು ತಮ್ಮ ಹೋರಾಟಗಳಲ್ಲಿ ಪಡೆಯಲು ಇಷ್ಟ ಪಡುವುದಿಲ್ಲ. ಮತ್ತು ತಮ್ಮ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಹತೋಟಿಯ ಮತ್ತು ನಿರ್ದೇಶನಗಳನ್ನು ಪಡೆಯಲು ಒಪ್ಪುವುದಿಲ್ಲ ಎಂಬುವುದು ಸ್ಪಷ್ಟ ……. (20)
ಎರಡನೇಯದಾಗಿ, ಅನೇಕ ತ ಪ್ಪುಗಳ ಹೊರತಾಗಿಯೂ ಜನತಾ - ಸಮರದ (PW) ಘಟ್ಟದಲ್ಲಿ
ಸಿಪಿಐ ಪಕ್ಷದ ಪರಿಪೂರ್ಣ ಬೆಳವಣಿಗೆ ಆಯಿತು. ಬುದ್ಧಿ ಜೀವಿಗಳ ನಡುವೆ ಪಕ್ಷವು ವಿಶಾಲವಾದ ವಿಸ್ತಾರ ಗೊಂಡು ಅವರ ಫ್ಯಾಸಿಸ್ಟ್ ವಿರೋಧಿ ಕಾರ್ಯ ಕ್ರಮದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ವಾಯಿತು. ಕಾನೂನು ಬದ್ ವಾಗಿ ಕೆಲಸಮಾಡಲು ಅವಕಾಶವನ್ನು ಕಮ್ಯುನಿಸ್ಟ್ ಪಕ್ಷ ವು ಸೆಪ್ಟಂಬರ್ 1942 ಮತ್ತು ಮೇ 1943 ಅವಧಿ ಯಲ್ಲಿ ಪಡೆಯಿತು. ಎರಡು ವಿಸ್ತೃತ ಬಹಿರಂಗ ಸಮ್ಮೇಳನ ಮತ್ತು ಮೊದಲನೆಯ ಪಕ್ಷದ ಮಹಾಅಧಿವೇಶನ ಗಳನ್ನು ನಡೆಸಿ, ಪ್ರಚಾರ ಮತ್ತು ಪಕ್ಷದ ಬೆಳವಣಿಗೆಗೆ ಒತ್ತು ನೀಡಲಾಯಿತು. ಸದಸ್ಯರ ಸಂಖ್ಯೆ 1942 ರಲ್ಲಿ 4000 ಇದ್ದಿದ್ದು 1943 ಮಧ್ಯ ಭಾಗ ಹೊತ್ತಿಗೆ 15,OOO ಕ್ಕೆ ಏರಿಕೆ ಆಗಿತ್ತು. ಮತ್ತು 1946 ಮಧ್ಯ ಭಾಗದ ಹೊತ್ತಿಗೆ 53,000 ಕ್ಕೆ ಹೆಚ್ಚಿತ್ತು. 1943 ನಂತರ ಮತ್ತು ಪಶ್ಚಿಮ ಬಂಗಾಳದ ಕ್ಷಾಮದ ಸಮಯ ನಡೆಸಿದ ಪರಿಹಾರ ಕಾರ್ಯ ಕ್ರಮ ಗಳಿಂದ ಜನತೆ ಯಲ್ಲಿನ ವಿಶ್ವಾಸ ವನ್ನು ಅದು ವಾಪಸು ಪಡೆಯಿತು. ಅದು ಬಹಿರಂಗ ಸಂಘಟನೆ ಗಳನ್ನು , ಮಹಿಳೆಯರು, ವಿದ್ಯಾರ್ಥಿ ಗಳು, ಕಾರ್ಮಿಕರು, ರೈತರು ಮತ್ತು ಅದರಲ್ಲೂ ಮುಖ್ಯ ವಾಗಿ ಕಲೆ ಮತ್ತು ಸಾಹಿತ್ಯ ಕಾರ್ಯಕರ್ತರಲ್ಲಿ ಬೆಳೆ ಸಿತು. 1943 ರಲ್ಲಿ ಪ್ರಾರಂಭ ವಾದ ಇಂಡಿಯನ್ ಪೀಪಲ್ಸ್ ಥೇಟರ್ ಅಸೋಸಿಯೇಷನ್, ವಿಖ್ಯಾತ ಪ್ರತಿಭಾವಂತರಾದ ಸಲಿಲ್ ಚೌಧುರಿ, ದೇವವೃತ ಬಿಶ್ವಾಸ, ಶಂಭು ಮಿತ್ರ,. ಬಲರಾಜ್ ಸಾಹನಿ, ಖೈಫಿ ಆಜ್ಮಿ, ಕೆ ಅಭಾಸ್ ಮುಂತಾದವರನ್ನು ಒಳಗೊಂಡಿತು. ಸಾಹಿತಿ ಗಳಾದ ಮಾಣಿಕ್ ಬಂಧೋಪದ್ಯಾಯ, ಶ್ರೀಕಾಂತ್ ಭಟ್ಟಾ ಚಾರ್ಯ, ಸುಕಾಂತ್ ಭಟ್ಟಾ ಚಾರ್ಯ, ಭಿಷ್ಣು ಡೆ, ಸಮರ್ ಸೇನ್, ಕಮ್ಯುನಿಸ್ಟ್ ಪಕ್ಷ ಸೇರಿದರು. ಇಲ್ಲ, ಅದರ ನಿಕಟ ವರ್ತಿಗಳಾದರು. ಇವೆಲ್ಲವೂ ಸಹ ಪ್ರಜ್ಞಾ ವಂತ ಭಾರತೀಯರ ಪಕ್ಷವು, ಒಂದು ಮಹಾನ್ ಧ್ಯೇಯಕ್ಕಾಗಿ, ಅದರ ಪ್ರಾಮಾಣಿಕ ಧ್ಯೇ ಯದಲ್ಲಿ ಇಟ್ಟ ನಂಬಿಕೆಯ ಧೃ ಡೀ ಕರಣ ವಾಗಿತ್ತು (ಈ ಸಂದರ್ಭ ದಲ್ಲಿ ಫ್ಯಾಸಿಸಂ ನಿಂದ ಮಾನವ ಸಂಕುಲ ವನ್ನು ರಕ್ಷಿಸುವ ಅಂತಾರಾಷ್ಟ್ರೀಯ ಕರ್ತವ್ಯ). ಮತ್ತು ಮಾತ್ತೃ ಭೂಮಿ ಯ ರಕ್ಷಣೆಗಾಗಿ ನಡೆಸಿದ ತ್ಯಾಗ ಗಳ ದಾಖಲೆ ಆಗಿತ್ತು.
ಯುಧೋತ್ತರ ಉಬ್ಬರ: ಈ ಸಮಯದ ಬಗ್ಗೆ ಸುಮೀತ್ ಸರ್ಕಾರ ರವರು ಹೆಚ್ಚಿನ ಖಚಿತತೆ ಮತ್ತು ಕರಾರು ವಕ್ಕಾಗಿ ಹೇಳಿದ್ದಾರೆ. ' ಬ್ರಿಟೀಷ್ ಆಳ್ವಿಕೆ ಯ ಕೊನೆಯ ಎರಡು ವರ್ಷ ಗಳಲ್ಲಿ ಎರಡು ಮೂಲ ಭೂತ ಧಾರೆಗಳು ಹೊರಹೊಮ್ಮಿದವು. ಅದೇನೆಂದರೆ, ಒಂದೆಡೆ ‘ ಬ್ರಿಟೀಷ್ ರು ಕಾಂಗ್ರೆಸ್ ಮತ್ತು ಲೀಗ್ ನಾಯಕರ ನಡುವೆ ಕ್ಲಿಷ್ಟ ಕರವಾದ ಮಾತುಕತೆ ನಡೆಯುತ್ತಿದ್ದರೆ, ಇನ್ನೋoದೆಡೆ, ಸ್ಥಳೀಯ ವಾದ, ಆದರೆ ಅತ್ಯಂತ ಸಮರಶೀಲ ವಾದ ಮತ್ತು ಐಕ್ಯವಾದ ಸಾಮೂಹಿಕ ಜನರ ಕಾರ್ಯಾಚರಣೆಗಳು ನಡೆಯುತ್ತಿದ್ದವು -, ಇಂಡಿಯನ್ ನ್ಯಾಷನಲ್ ಆರ್ಮಿ (INA) ಬಿಡುಗಡೆ ಚಳುವಳಿ ಮತ್ತು ರಾಯಲ್ ಇಂಡಿಯನ್ ನೇವಿ(RIN), 1945-46 ರ ದಂಗೆ; ಅದೇ ಸಮಯದಲ್ಲಿ ಅನೇಕಾನೇಕ ಮುಷ್ಕರಗಳು ಮತ್ತು 1946-1947 ರಲ್ಲಿ ಬಂಗಾಳ ದಲ್ಲಿನ ತೇಭಾಗ ಚಳುವಳಿ, ತಿರುವಾಂಕೂರಿನಲ್ಲಿ ಪುನ್ ಪುರ ವಯಲಾರ್ ಮತ್ತು ಹೈದ್ರಾಬಾದ್ ನಲ್ಲಿ ತೆಲಂಗಾಣ ರೈತರ ಸಶಸ್ತ್ರ ಹೋರಾಟ ' ಮುಂತಾದವು ಆಗಿದ್ದುವು (21).
ಈ ಮೊದಲಾದ ಘಟನಾವಳಿಗಳ ಸರಮಾಲೆ ಯಿಂದ ದೂರ ವಿರದ ಕಮ್ಯುನಿಸ್ಟರು ತಮ್ಮ ಎರಡನೆಯ, ಅಂದರೆ ಪಾರ್ಲಿಮೆಂಟ ಯೇತರ, ರಂಗವನ್ನು ಮುಖ್ಯ ಕರ್ಯ ಕ್ಷೇತ್ರ ಮಾಡಿ ಕೊಂಡರು. ರೈತರ ಹೋರಾಟದ ಮುಖ್ಯ ಅಧ್ಯಾಯ ಗಳಲ್ಲಿ ಅವರು ಸಂಘಟಿಸಿದ ತೇಭಾಗ, ಪುನ್ ಪುರ ವಯಲಾರ್ ಮತ್ತು ತೆಲಂಗಾಣ ವಿದ್ರೋಹ ಗಳು ಪ್ರಮುಖ ವಾಗಿವೆ. ಪಕ್ಷ ದ ಟ್ರೇಡ್ ಯೂನಿಯನ್ ಮತ್ತು ವಿದ್ಯಾರ್ಥಿ ವಿಭಾಗಗಳು ಸಾಕಷ್ಟು ಕ್ರಿಯಾ ಶೀಲ ವಾಗಿದ್ದ’ ಸಾಮ್ರಾಜ್ಯ ಶಾಹಿ ವಿರುದ್ಧದ ಮತ್ತು ಉಗ್ರವಾದ ಸಮರ ಶೀಲ ಕೋಮು ಸೌಹಾರ್ದದ ಐಕ್ಯತೆಯ ಚಳುವಳಿಯ ಮುoಚೂಣಿ ಯಲ್ಲಿ ಅವರು ಇದ್ದರು. ನವೆಂಬರ್ 1945 ರಂದು ಕಲ್ಕತ್ತಾದಲ್ಲಿ ವಿದ್ಯಾರ್ಥಿ ಗಳು ಟ್ರಾಮ್ ಕಾರ್ಮಿಕರು, ಮುನ್ಸಿಪಲ್ ಕೆಲಸ ಗಾರರು ಮತ್ತು ಇತರರುಅಂದರೆ forward Block ಕಾರ್ಯಕ್ರತರು, ಕಮ್ಯುನಿಸ್ಟ್ ಪ್ರಭಾವ ದಿಂದ ಒಗ್ಗೂ ಡಿದರು. ಅದೇ ರೀತಿ ಮುಂದಿನ ವರ್ಷ ಫೆಬ್ರವರಿ ಯಲ್ಲಿ ಇಂಡಿಯನ್ ನೇಷನಲ್ ಆರ್ಮಿ ಯ ಅಬ್ದುಲ್ ರಶೀದ್ ರವರಿಗೆ ಏಳು ವರ್ಷದ ಕಠಿಣ ಶಿಕ್ಷೆ ಯನು ವಿಧಿಸಿದಾಗ ಇದೇ ರೀತಿಯ ಸಮರಶೀಲ ರಾಜಕೀಯ ಮತ್ತು ಕೋಮುಸೌಹಾರ್ದದ ಸ್ಫೋಟ ಕಂಡು ಬಂದಿತ್ತು.
13 ಫೆಬ್ರವರಿ ಯಂದು ಕಲ್ಕತ್ತಾದಲ್ಲಿ ಈ ಹೋರಾಟ ದಿಂದ ಯಶಸ್ವಿ ಸಾವರ್ತಿಕ ಮುಷ್ಕರ ನಡೆಯಿತು. ಇದೇರೀತಿ ಐಕ್ಯತೆ ಯನ್ನು 29 ಜುಲೈ ರಂದು ಅoಚೆ ನೌಕರ ರ ಮುಷ್ಕರಕ್ಕೆ ಬೆಂಬಲ ವನ್ನು ಎಲ್ಲಾ ಜನ ಸಮೂಹ ವ್ಯಕ್ತಪಡಿಸಿದರು. ಅದು ಸಹ ಕುಪ್ರಸಿದ್ಧ ಕೋಮು ಹತ್ಯಾ ಕಾಂಡಕ್ಕೆ (Nokhali incidence?) 18 ದಿನಗಳ ಮುಂಚೆ. ಐದು ತಿಂಗಳನಂತರ ಹಿಂದೂ ಮತ್ತು ಮುಸ್ಲಿಂ ಟ್ರಾಮ್ ನೌಕರರು ಒಗ್ಗೂಡಿ 85 ದಿನಗಳ ಯಶಸ್ವಿ ಮುಷ್ಕರ ನಡೆಸಿದರು. ಆ ಮುಷ್ಕರ ಪ್ರಾರಂಭ ವಾದ 21 ಜನವರಿ 1947ರಂದು ಕಮ್ಯುನಿಸ್ಟ್ ನಾಯಕತ್ವ ದಲ್ಲಿ ಪ್ರದರ್ಶನ ವ ನ್ನು ವಿದ್ಯಾರ್ಥಿ ಗಳು ಡಂ ಡಂ ವಿಮಾನ ನಿಲ್ದಾಣವನ್ನು ಫ್ರಾನ್ಸ್ ನ ಯುದ್ಧ ವಿಮಾನಗಳು ಉಪಯೋಗಿಸುವ ವಿರುದ್ಧ 'ವಿಯಟ್ನಾಂ ನಿಂದ ತೊಲಗಿ ' ಎಂಬ ಘೋಷಣೆ ಯೋoದಿಗೆ ಮುಷ್ಕರ ಪ್ರಾರಂಭಿಸಿದರು. 1946, 22 ಫೆಬ್ರವರಿ ರoದು, ಮುಂಬೈನ RIN ದಂಗೆಗೆ ಬೆಂಬಲವಾಗಿ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ ಜತೆ ಸೇರಿ, ಸಿಪಿಐ ಪಕ್ಷವು ಹರತಾಳಕ್ಕೆ ಕರೆ ನೀಡಿತ್ತು. ಆಗ ಈ ಹೋರಾಟಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ವಿರೋಧ ವ್ಯಕ್ತಪಡಿಸಿತ್ತು. ಆ ಹೋರಾಟ ವನ್ನು ಸೆದೆಬಡೆಯಲು ಸೈನ್ಯ ವನ್ನು ಕರೆಸಲಾಗಿತ್ತು. ಮತ್ತು ಎರಡೂ ಕಡೆ ಸಾವು ನೋವು ಉಂಟಾದವು.
ಈ ಎಲ್ಲಾ ಘಟನೆ ಗಳು, ಒಂದು ಮೂಲ ಭೂತ ಬಲಹೀನತೆ ಯಿಂದ ಕೂಡಿದ್ದವು. ಇವೆಲ್ಲವೂ ಸ್ಥಳೀಯ ಕಾರ್ಯ ಕರ್ತರ ಪ್ರಥಮ ಹೆಜ್ಜೆ ಗಳಾಗಿದ್ದುವು, ಮತ್ತು ಕೇಂದ್ರ ನಾಯಕತ್ವವು ಈ ಹೋರಾಟಗಳ ಯೋಜನೆ, ಕಾರ್ಯಾ ಚರಣೆ ಅಥವಾ ಸಮನ್ವಯ ವನ್ನು ಅಖಿಲ ಭಾರತ ಮಟ್ಟದಲ್ಲಿ ಮಾಡಲು ಏನು ಪ್ರಯತ್ನ ಮಾಡಲಿಲ್ಲ. ಪಕ್ಷದ ಕೇಂದ್ರ ಕಛೇರಿ ಮುಂಬೈನ ಆಯಕಟ್ಟು ಪ್ರದೇಶ ದಲ್ಲಿ ಇದ್ದರೂ ಸಹ ಈ ಇಂಡಿಯನ್ ನ್ಯಾಷನಲ್ ಆರ್ಮಿ (RIN) ನ ನಾಯಕತ್ವ ವಹಿಸಲು ಏನೂ ಪ್ರಯತ್ನ ಮಾಡಲಿಲ್ಲ. ಅಥವಾ ದೇಶದ ವಿವಿಧ ಭಾಗದಲ್ಲಿ ನಡೆಯುತ್ತಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ ಯ ವಿರುದ್ಧ ದ ವಿಚಾರಣೆ ಗಳ ವಿರುದ್ಧ ಪ್ರದರ್ಶನ ಗಳನ್ನು ಸಂಘಟಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಅಖಿಲಭಾರತ ನಾಯಕತ್ವವು ಪುನ್ ಪುರ ವಯಲಾರ್ ಮತ್ತು ತೇಭಾಗ ಹೋರಾಟ ಗಳನು ಆರ್ಥಿಕ ಸ್ತರದಿಂದ ರಾಜಕೀಯ ಸ್ತರಕ್ಕೆ ಮಾರ್ಗ ದರ್ಶನ ನೀಡಲು ಪ್ರಯತ್ನ ಪಡಲೇ ಇಲ್ಲ. ತೆಲಂಗಾಣ ಹೋರಾಟದ ಕೇಂದ್ರ ಸಮಿತಿಯ ಮಧ್ಯ ಪ್ರವೇಶ ತಡವಾಗಿದ್ದು ಗೊಂದಲ ಮಯ ವಾಗಿದ್ದು, ಬಹುಪಾಲು ನೇತ್ಯಾತ್ಮಕ ವಾಗಿ ತ್ತು. ಆ ಪರಿಸ್ಥಿತಿಯನ್ನು, ' ಜ್ವಾಲಾಮುಖಿ ಅಂಚಿನಲ್ಲಿ ' , 'ಕ್ರಾಂತಿ ಯ ಅಂಚಿನಲ್ಲಿ', ಮುಂತಾಗಿ ವರ್ಣಿಸಿದರೂ ಸಹ ಈ ಪರಿಸ್ಥಿತಿಯಲ್ಲಿ ಸಿಪಿಐ ನಾಯಕತ್ವವು ' ಘಟನೆ ಗಳ ಹಿಂದೆ ಓಡುತ್ತಿ ದ್ದವು. ಎಲ್ಲಾ ಕ್ರಾಂತಿಕಾರಿ ಅಲೆಗಳನ್ನು ರೈತರ ವಿದ್ರೋಹದ ತಳಹದಿ ಮೇಲೆ ಸಂಘಟಿಸಿ, ಒಂದು ಅಖಿಲ ಭಾರತ ಚಳುವಳಿಯನ್ನಾಗಿ ಪರಿವರ್ತಿಸಿ, ಬ್ರಿಟೀಷ್ ಸಾಮ್ರಾಜ್ಯ ಶಾಹಿ ಮತ್ತು ಭಾರತದ ಪ್ರತಿಗಾಮಿ ಗಳನ್ನು ಕಿತ್ತೊಗೆಯಲು ಬೇಕಾದ ರಾಜಕೀಯ ಇಚ್ಚಾ ಶಕ್ತಿ ಇವರಲ್ಲಿ ಇರಲ್ಲಿಲ್ಲ.
ಪಕ್ಷದ ಮಾರ್ಗದರ್ಶಿ ಸಿದ್ಧಾಂತ ಕಾರ್ಮಿಕ ವರ್ಗದ ಕ್ರಾಂತಿಕಾರಿ ಗುಣ ಲಕ್ಷಣ ವಾಗಿರಲಿಲ್ಲ, ಬದಲಾಗಿ, ಪೆಟ್ಟಿ ಬೂರ್ಜ್ವಾ ಸುಧಾರಣಾ ವಾದಿ ಬಾಲ oಗೋಚಿ ತನವಾಗಿತ್ತು. ಇದು ಅoದಿನ ಕಾಲದ ದಸ್ತಾವೇಜು ಗಳನ್ನು ಅವಲೋಕಿಸಿದರೆ ಸ್ಪಷ್ಟ ವಾಗುತ್ತದೆ.
ಅಗಸ್ಟ್ 1946 ಕೇಂದ್ರ ಸಮಿತಿಯ ನಿರ್ಣಯದ ತಲೆ ಬರಹ, ' ಅoತಿಮ ಆಘಾತ ಕೋಸ್ಕರ ', ದಲ್ಲಿ ಕಾಂಗ್ರೆಸ್ ಮತ್ತು ಲೀಗ್ ವಿರುದ್ಧ ನ್ಯಾಯೋಚಿತ ವಿಮರ್ಶೆ ಮಾಡಲಾಗಿದೆ. ಅದರಲ್ಲಿ ತಳ ಮಟ್ಟದ ಓ ತ್ತಡ ಹೆಚ್ಚಾದಲ್ಲಿ ಈ ' ದೇಶ ಭಕ್ತಿ ಶಕ್ತಿಗಳು ', ಕಮ್ಯುನಿಸ್ಟರು ಸೇರಿದಂತೆ ಇನ್ನಿತರೆ ಶಕ್ತಿ ಜತೆ ಸೇರಿ ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಸಾಧಿಸ ಬಲ್ಲರು ಎಂದು ಹೇಳಲಾಗಿದೆ. ಜೂನ್ 1947 ನಿರ್ಣಯ ದ ತಲೆಬರಹ, ' ಮೌಂಟ್ ಬ್ಯಾಟನ್ ಪ್ರಶಸ್ತಿ ದಸ್ತಾವೇಜು ಸನ್ನದು ಮತ್ತು ನಂತರ ', ದ ಬಗ್ಗೆ ಸರಿಯಾದ ಮೌಲ್ಯ ಮಾಪನ ಮಾಡಲಾಯಿತು. ಅದು ಸಾಮ್ರಾಜ್ಯ ಶಾಹಿ ನೀತಿಗಳ, ದ್ವಿಮುಖನೀತಿ ಯ ಉತ್ಪನ್ನ ವಾಗಿತ್ತು. ಅದರಲ್ಲಿ ರಾಷ್ಟ್ರೀಯ ಬೇಡಿಕೆಯಾದ ಅಧಿಕಾರದ ವರ್ಗಾವಣೆ ಬಗ್ಗೆ ರಿಯಾಯಿತಿ ನೀಡುತ್ತಾ, ಜನತೆಯ ಹೋರಾಟ ಗಳನ್ನು ಛಿದ್ರ ಗಳಿಸಲು ಪ್ರತಿಗಾಮಿ ಶಕ್ತಿ ಗಳಿಗೆ ಕುಮ್ಮಕ್ಕು ನೀಡಲಾಗುತ್ತಿತ್ತು. ಇದರಿಂದಾಗಿ ನಿಜವಾದ ಸ್ವಾತಂತ್ರ್ಯ ಗಳಿಸಲು ತಡೆ ಉಂಟಾಯಿತು. ಪ್ರಜಾಸತ್ತೆಯ ಬೆಳವಣಿಗೆಯ ಕತ್ತು ಹಿಸುಕಲಾಯಿತು. ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ತಡೆ ಉಂಟು ಮಾಡಿತು. ಆದಾಗ್ಯೂ ಪಿತೂರಿಯ ಪಾಲು ದಾರರಗಿದ್ದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಗಳನ್ನು 'ರಾಷ್ಟ್ರೀಯ ನಾಯಕತ್ವ ', ಎಂದು ಒಪ್ಪಲಾಯಿತು. ನಂತರ ದಲ್ಲಿ ಈ ಪಕ್ಷ ಗಳು ನಡೆಸುತ್ತಿದ್ದ ಸ್ಥಳೀಯ ಸರ್ಕಾರಗಳನ್ನು ಬೆಂಬಲಿಸಲು ಒಪ್ಪ ಲಾಯಿತು.
ಈ ರೀತಿಯ 'ವಿಮರ್ಶಾತ್ಮಕ ಬಾಲಂಗೋಚಿತನ'ವೆಂದು ಹೇಳುವುದಾದರೆ ಅದು ಸಿಪಿಐ ರಾಜಕೀಯವು ಹೋರಾಟದ ಸಮಯದಲ್ಲಿ ಮತ್ತು ಇತಿಹಾಸದಲ್ಲಿ ಅತ್ಯಂತ ಗಮನಾರ್ಹ ವಾದ ಗುಣಲಕ್ಷಣಗಳೆಂದು ತಿಳಿದು ಕೊಳ್ಳಬೇಕು.
ಯಜಮಾನಿಕೆ ಗಾಗಿ ಸಂಘರ್ಷದ ಚಾರಿತ್ರಿಕ ಸೋಲು: ಈಗ ನಾವು ಭಾರತದ ಸ್ವಾತಂತ್ರ್ಯ ಹೋರಾಟದ 25 ವರ್ಷದ ಕಮ್ಯುನಿಸ್ಟ್ ಚಳುವಳಿಯ ಅವಧಿಯ ಪಾತ್ರವನ್ನು ಹೀಗೆ ಹೇಳ ಬಹುದು:
ಪ್ರಾರಂಭ ದಿoದ ಲೂ ಸಾಮ್ರಾಜ್ಯ ಶಾಹಿ ಯಿಂದ ರಾಷ್ಟ್ರೀಯ ವಿಮೋಚನೆ, ರಾಷ್ಟ್ರೀಯ ಗೌರವ ಮತ್ತು ಸಾರ್ವಭೌಮತ್ವ , ದಮನಿತರ ಸಾಮಾಜಿಕ ಆರ್ಥಿಕ ಉದ್ಧಾರಕ್ಕಾಗಿ, ಸಾಮಾಜಿಕ ನ್ಯಾಯ ಮತ್ತು ದುಡಿಯುವವರ ರಾಷ್ಟ್ರೀಯ ಅಭಿವೃದ್ಧಿ ಬಗ್ಗೆ ಕಮ್ಯುನಿಸ್ಟರು ಗುರುತಿಸಲ್ಪಡುತ್ತಿದರು. ದೇಶದ ಅನೇಕ ಕಡೆ ಕಮ್ಯುನಿಸ್ಟ್ ರೆ ರಾಷ್ಟ್ರೀಯ ಚಳುವಳಿಯನ್ನು ಪ್ರಾರಂಭಿಸಿದ್ದರು. ಇದು ಅವರ ಹೆಗ್ಗಳಿಕೆ ಆಗಿತ್ತು. ಟ್ರಾವೆಂಕೋರ, ಕೋಚಿನ್ ಮತ್ತು ಮಲಬಾರ್ ನಲ್ಲಿ ಎಕೆ ಗೋಪಾಲನ್, ಕೃಷ್ಣನ್ ಪಿಳ್ಳೈ, ಇಎಂಎಸ್ ನಂಬೂದರಿ ಪಾದ್ ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ ವನ್ನ ಮತ್ತು ಕಾಂಗ್ರೆಸ್ ಚಳುವಳಿ ಯನ್ನು ಸಹ ಪ್ರಾರಂಭಿಸಿದರು. ಭಾರತ ರಾಷ್ಟ್ರೀಯ ವಿಮೋಚನಾ ಚಳುವಳಿ ಮತ್ತು ದುಡಿಯುವ ವರ್ಗದ ಚಳುವಳಿ (1942-45) ಅವಧಿ ಯನ್ನು ಬಿಟ್ಟು, ತಮ್ಮ ಎಲ್ಲಾ ತಪ್ಪು ಗಳಿದ್ದರೂ ಸಹ, ತಮ್ಮ ಮಹಾನ್ ಹೋರಾಟದ ಮೂಲಕ ರಾಷ್ಟ್ರೀಯ ಹೋರಾಟಗಳಿಗೆ ಒಂದು ಎಡ ದಿಕ್ಕಿನ ಒತ್ತಡವನ್ನು ನೀಡಲು ಸಾಧ್ಯ ವಾಯಿತು. 1925-35 ರ ವರೆಗೆ ಪoಥ ವಾದಿ ಮಾರ್ಗವನ್ನು ಪಕ್ಷ ಅನುಸರಿಸುತ್ತಿದ್ದರೂ, ಅದು ಅದೇ ಪ್ರಾಮಾಣಿಕ ಆಶೋತ್ತರಗಳನ್ನು ಹೊಂ ದಿತ್ತು. ಕಾಂಗ್ರೆಸ್ ನಾಯಕರುಗಳು, ಅದರಲ್ಲಿ ಎಡ ನಿಲುವಿನ ನೆಹರು ಮತ್ತು ಬೋಸರವರು ರಾಷ್ಟ್ರೀಯ ಚಳುವಳಿ ಯನ್ನು ಬುಡಮೇಲು ಮಾಡುತಿದ್ದಾರೆ ಎಂದು ಹೇಳುತ್ತಾ ಅವರನ್ನು ಬಹಿರಂಗ ಪಡಿಸಿ ಅವರನ್ನು ಮೂಲೆ ಗುಂಪು ಮಾಡ ಬೇಕೆಂದು ಕಮ್ಯುನಿಸ್ಟ್ ರ ನಿಲುವಾಗಿತ್ತು. ಆದರೆ ಇದು ಪ್ರಾಮಾಣಿಕ ನಂಬಿಕೆ ಆಗಿದ್ದರೂ,’ ಎಳಸಾದ ಮತ್ತು ವಿಫಲ’ ಪ್ರಯತ್ನ ವಾಗಿತ್ತು. ಇತರ ಸಮಯದಲ್ಲಿ ಸಿಪಿಐಯು ಕಾಂಗ್ರೆಸ್ ಪಕ್ಷ ದೊಳಗೆ ಇದ್ದು, ಅದನ್ನು 'ಮಾತ್ರು ಸಂಘಟನೆ', ಎಂದು ಅದರೊಂದಿಗಿನ ಐಕ್ಯತೆ ಯನ್ನು ಉಳಿಸಿ ಕೊಂಡರು. ಅನೇಕ ಬಾರಿ ತನ್ನ ಅಸ್ತಿತ್ವದ ಉಳಿವಿನ ಬಗ್ಗೆ ಯೋಚನೆ ಮಾಡಿದರು, 'ಭಾರತ ಬಿಟ್ಟುತೊಲಗಿ' ಚಳುವಳಿಯನ್ನು ವಿರೋಧಿಸುತ್ತಾ, ಬೋಸ್ ರವರ ವಿರುದ್ಧ ಅತ್ಯಂತ ಹೀನಾಯ ಟೀಕೆ ಗಳನ್ನು ಮಾಡಲಾಯಿತು. ಅದರ ಉದ್ದೇಶ ವೈಯಕ್ತಿಕ ದ್ವೇಷ ಅಥವಾ ಸ್ವಾರ್ಥ ಕಾರಣ ಆಗಿರಲಿಲ್ಲ. ಬದಲಾಗಿ, ಭಾರತದ ನೆಲದಲ್ಲಿ ಫ್ಯಾಸಿಸ್ಟ್ ವಿರೋಧಿ ಹೋರಾಟ ಗಳನ್ನು ಮುನ್ನೆಡಿಸುವ ಪ್ರಾಮಾಣಿಕ ಪ್ರಯತ್ನ ವಿತ್ತು.
ಹೌದು, ಪ್ರತೀ ಕಮ್ಯುನಿಸ್ಟ್ ಪಕ್ಷದ ಚರಿತ್ರೆ ಗಳಲ್ಲಿ ತಪ್ಪುಗಳು ಸಹಜ. ಪೇಶಾವರ್ ಮತ್ತು ಕಾನ್ಪುರ್ ಪಿತೂರಿ ಕೇಸ್ ಕಾಲದಿಂದಲೂ, ಅಂದರೆ ಕಮ್ಯುನಿಸ್ಟ್ ಪಕ್ಷದ 1925 ರಲಿ ಸ್ಥಾಪಿತ ಆಗುವ ಮೊದಲಿನಿಂದಲೂ ಸಹ, ಕಮ್ಯುನಿಸ್ಟರು ರಾಷ್ಟ್ರೀಯ ಮತ್ತು ಸಾಮಾಜಿಕ ಬಿಡುಗಡೆ ಹೋರಾಟ ಗಳಲ್ಲಿ ಬ್ರಿಟಿಷರು ಮತ್ತು ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ವನ್ನು ಅನುಭವಿಸುತ್ತಾ ಬಂದಿದ್ದಾರೆ. ಆದರೆ ಚೀನಾ ಮತ್ತು ವಿಯಟ್ನಾಂ ಸಂಗಾತಿಗಳoತೆ, ನಾವು ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ಬರ ಲಾಗಲಿಲ್ಲ, ಎಲ್ಲಿ ಮೂಲಭೂತ ತಪ್ಪಾಯಿತು?
ಈ ಪ್ರಶ್ನೆ ನಮ್ಮನ್ನು ಸಾಕಷ್ಟು ಸಮಯದಿಂದ ಕಾಡುತ್ತಿದೆ. 1991 ರಲ್ಲಿ ನಾವು ಈ ಪ್ರಶ್ನೆಗೆ ಒಂದು ರೀತಿಯ ಉತ್ತರ ವನ್ನು ನಮ್ಮ ಉದ್ದೇಶಿತ ಭಾರತ ಕಮ್ಯುನಿಸ್ಟ್ ಚಳುವಳಿಯ ಇತಿಹಾಸ , 5- ಸಂಪುಟ ದ ಭಾಗವಾದ, ಸoಪುಟ ಒಂದರಲ್ಲಿ ಸಮಾಪ್ತಿ ಅದ್ಯಾಯ ವನ್ನಾಗಿ ಮಾಡಿದ್ದೆವು (22). ಅಲ್ಲಿನ ಪುಟ 20ರಲ್ಲಿನ ವ್ಯೂಹಾತ್ಮಕ ಕಣ್ಣೋಟ ಆಗಿದೆ ಆ ಮೌಲೀಕರಣದ ಸಂಕ್ಷಿಪ್ತ ವರದಿಯನ್ನು ಚರ್ಚೆಗೆ ಈ ಕೆಳಗೆ ನೀಡಲಾಗಿದೆ:
ಮುಂದಿನ ಚರ್ಚೆಗಾಗಿ ಈ ಕೆಳಗಿನ ಮೌಲ್ಯ ಮಾಪನದ ಸಂಕ್ಷಿಪ್ತ ವಿಚಾರಗಳನ್ನು ಮಂಡಿಸಲಾಗಿದೆ.
ಆ ಕಾಲದಲ್ಲಿ ಕಮ್ಯುನಿಸ್ಟ್ ಚಳುವಳಿಯ ರಣ ನೀತಿ ಹೀಗಿತ್ತು, ಒಂದು ಮುಖ್ಯ ವಾದ ವೈರುಧ್ಯವು ಏನೆಂದರೆ , ಹೊರಹೊಮ್ಮುತ್ತಿರುವ ಭಾರತ ರಾಷ್ಟ್ರೀಯತೆ ಮತ್ತು ಬ್ರಿಟಿಷ್ ಸಾಮ್ರಾಜ್ಯ ಶಾಹಿ ನಡುವೆ ಆಗಿತ್ತು. ಎರಡನೆಯ ದಾಗಿ ಇದರ ಬೇರೆ ಎರಡು ಮುಖ್ಯ ವೈರುಧ್ಯಗಳು ಹೀಗಿತ್ತು : ಊಳಿಗಮಾನ್ಯ ವ್ಯವಸ್ಥೆ ವಿರುದ್ಧ ವಿಶಾಲ ಜನತೆ ಅಂದರೆ,ನಿರ್ದಿಷ್ಠ ವಾಗಿ ಭೂಮಾಲೀಕರ ವಿರುದ್ದ ರೈತರು; ಇ ನ್ನೊ o ದು, ಬ್ರಿಟಿಷ್ ಮತ್ತು ಭಾರತದ ದೊಡ್ಡ ಬೂ ರ್ಜ್ವಾ ಗಳು ಒಂದೆಡೆ ಮತ್ತು ಭಾರತದ ದು ಡಿಯುವ ವರ್ಗವು ಇನೊಂದೆಡೆ. ಸಿಪಿಐ ಈ ಎಲ್ಲಾ ಮೂರೂ ಸ್ತರ ಗಳಲ್ಲಿ ಕೆಲಸ ಮಾಡುತ್ತಿತ್ತು.ಆದರೆ ಅದರ ಸೋಲು ಮತ್ತು ಕಾಂಗ್ರೆಸ್ಸನ ವಿಜಯಕ್ಕೇ ಕಾರಣ ಎ ಲ್ಲಿತೆಂದರೆ, ರೈತರನ್ನು ಸಂಘಟಸು ವುದರಲ್ಲಿ ಅದು ವಿಫಲರಾಗಿದ್ದು. ಇದರಿಂದಾಗಿ ದೇಶದ ಅತಿದೊಡ್ಡ ಭಾಗ ರೈತರು ಸ್ವಾತಂತ್ರ್ಯ ಚಳುವಳಿಯ ಅoಚಿಗೆ ತಳ್ಳಲ್ಪಟ್ಟರು. ಅಂದರೆ ಅವರು ದೇಶದ ರಾಜಕೀಯ ಜೀವನದಿoದ ಹೊರತಾದರು.
ಇನ್ನೂ ವಿಸ್ತೃತವಾಗಿ ಹೇಳುವುದಾದರೆ, 1920- 30 ದಶಕ ಗಳಲ್ಲಿ ಬ್ರಿಟೀಷ್ ಸಾಮ್ರಾಜ್ಯ ಶಾಹಿ ವಿರುದ್ಧದ ಹೋರಾಟವು ಬಹುವರ್ಗ ಚಳುವಳಿ ಯಾಗಿದ್ದು, ಅದು ಹೆಚ್ಚಾಗಿ ಎಲ್ಲಾ ಪದರ ಗಳನು ಹೊಂದಿದ್ದು, ಬೂಜ್ವಾ ಗಳ ಯಜಮಾನಿಕೆ ಯಲ್ಲಿ ನಡೆಯುತ್ತಿತ್ತು. ಅದರಲ್ಲಿ ಕಮ್ಯುನಿಸ್ಟ್ ಮತ್ತು ಕಾರ್ಮಿಕರ ಪ್ರಭಾವ ಕೂಡಾ ಇತ್ತು. ಬೂರ್ಜ್ವಾ ಯಜಮಾನಿಕೆಯ ಗಾಂಧಿಯ ' ರೈತಾಪಿ ಮೌಲ್ಯಗಳು ' ಮತ್ತು ನೆಹುರು ರವರ’ ಸಮಾಜವಾದಿ’ ಪದಗಳ ಕಲಾಪವು ಸಹ ಇದ್ದವು. ಈ ಯಜಮಾನಿಕೆ ವಿರುದ್ಧ ಕಮ್ಯುನಿಸ್ಟ್ ಚಳುವಳಿ ಒಂದು ಸವಾಲಾಗಿ ಬೆಳೆಯಿತು. ಇದೆಲ್ಲದರ ನಡುವೆ ‘ದೇಶ ಪ್ರೇಮಿ ಭಯೋತ್ಪಾದನೆ’, ಮತ್ತು ಸ್ವಯಂಪ್ರೇರಿತ ರೈತರ ಮತ್ತು ಆದಿವಾಸಿಗಳ ‘ವಿದ್ರೋಹವು’ ಕಾಲ ಕಾಲಕ್ಕೆ ಕoಡ ಬಂದಿತ್ತು. ಮತ್ತು ಕಾಲ ಕಳೆದಂತೆ ಆ ಧಾರೆಗಳು ಕಳೆದು ಹೋದವು.
ಬೂರ್ಜ್ವಾ ರಾಷ್ಟ್ರವಾದ ಮತ್ತು ಕಮ್ಯುನಿಸಂ ಶಕ್ತಿಗಳು, ಎರಡೂ ಸಹ ಸಾಮ್ರಾಜ್ಯ ಶಾಹಿ ವಿರೋಧಿ ಹೋರಾಟಗಳು ಬಹು ವರ್ಗ (multi-class) ಗುಣಲಕ್ಷಣ ಗಳನ್ನುಪಕ್ಷವು ಅರ್ಥೈಸ್ ಬೇಕಿತ್ತು.(ಹಾಗಾಗಿ ಇಬ್ಬರಿಗೂ ಸಂಯುಕ್ತರಂಗದ ದಾರಿ) ಇಬ್ಬರೂ ತಮ್ಮ ವರ್ಗ ನಿಲುವು ಗಟ್ಟಿಮಾಡ ಬೇಕ್ಕಿತ್ತು. ಈ ಧೀರ್ಘ ಕಾಲದ ಐಕ್ಯತೆ ಮತ್ತು ಹೋರಾಟದ ತಾತ್ವಿಕ ಶಿಷ್ಟಾಚಾರ ವೆ ರಾಷ್ಟ್ರೀಯ ವಿಮೋಚನಾ ಹೋರಾಟ ಕ್ಕೆ ಮುಖ್ಯ ವಾಗಿತ್ತು, ಆದರೆ ಇಡಿ ನಾಯಕತ್ವವು, ಅದು ಬೂರ್ಜ್ವಾ ಯಜಮಾನಿಕೆ ಅಡಿಯಲ್ಲಿತ್ತು. ಆದರೂ ಅದು ಕಾರ್ಮಿಕರ ಮತ್ತು ಕಮ್ಯುನಿಸ್ಟ್ ಪ್ರಭಾವಕ್ಕೆ ಸಹ ಒಳಗಾಗಿತ್ತು. ಇದುವೆ ಅoತಿಮ ವಾಗಿ 1947ರ ಭಾರತ ಗಳಿಸಿದ ‘ಅಪೂರ್ಣ ಸ್ವಾತಂತ್ರ್ಯ’ ದ ಗುಣಲಕ್ಷಣ ವಾಗಿತ್ತು.
25 ವರ್ಷಗಳ ‘ಐಕ್ಯತೆ ಮತ್ತು ಹೋರಾಟ’ ಸ್ವಾತಂತ್ರ್ಯ ಚಳುವಳಿ ವರೆಗೆ ನಡೆಯಿತು. ಎರಡೂ ಮುಖ್ಯ ಶಕ್ತಿಗಳ ತಂತ್ರಗಾರಿಕೆ ಯಲ್ಲಿನ ತಪ್ಪುಗಳಿಂದ ಹಿನ್ನಡೆ ಅನುಭವಿಸ ಬೇಕಾಯಿತು. ಆಗಾಗ ರಾಷ್ಟ್ರವಾದಿ ನಾಯಕತ್ವ ಅನೇಕ ತಪ್ಪು ನಿರ್ಧಾರ ಗಳಿಂದ ಜನತೆಯ ಹೋರಾಟ ದಿoದ ದೂರ ಉಳಿಯಿತು. ಅದೇ ಕಾಲದಲ್ಲಿ ಸಿಪಿಐ ಸಹ ಬೂ ರ್ಜ್ವಾ ಗಳ ದ್ರೋಹವನ್ನು ಎದುರಿಸುವ ಅತಿ ಉತ್ಸಾಹ ತೋರಿತ್ತು. 1942 ರಲ್ಲಿ ಅoತಾರಾಷ್ಟ್ರಿಯ ಕರ್ತವ್ಯ ವನ್ನು ಯಾಂತ್ರಿಕವಾಗಿ ನಿಭಾಯಿಸುವ ಭರದಲ್ಲಿ ರಾಷ್ಟ್ರೀಯ ಮುಖ್ಯ ದಾರಿ ಯಿಂದ ಹೊರ ಉಳಿಯ ಬೇಕಾಯಿತು. ಒಟ್ಟಾರೆಯಾಗಿ ಗಾಂಧಿ ಮತ್ತು ನೆಹರು ಹೊಂದಾಣಿಕೆ ಯಿಂದ ಜನತೆಯ ಹೃದಯ ಮತ್ತು ಮನಸ್ಸಿನಲ್ಲಿ ಕಮ್ಯುನಿಸ್ಟರು ಸ್ಥಾನ ಗಳಿಸಲು ವಿಫಲ ಲಾದರು. ಗಾಂಧಿ ಯವರ ‘ಸಂತರ’ ಆಕರ್ಷಣೆಯು ಭಾವನೆ ಗಳ ಮಟ್ಟದಲ್ಲಿ ಬಹಳ ಪರಿಣಾಮಕಾರಿ ಯಾದರೆ, ನೆಹರು ರವರ ನಿರರ್ಗಳ ‘ಸಮಾಜವಾದಿ’ ಮಾತುಗಳು ಕಮ್ಯುನಿಸ್ಟರ ಪ್ರಯತ್ನ ಗಳನ್ನು ಬಲಹೀನ ಗೊಳಿಸಿದುವು.
ಇದು ಭಾರತದ ಕಮ್ಯುನಿಸ್ಟರು, ಗಾಂಧಿ ಮತ್ತು ನೆಹರು ವಿರುದ್ಧ ಅನುಭವಿಸಿದ ರಾಜಕೀಯ ಸೋಲನ್ನು ಎತ್ತೀ ಹಿಡಯುತ್ತದೆ. ಗಾಂಧಿಯವರು ತಮ್ಮೊಡನೆ ಭಾರತೀಯ ಸಮಾಜದ ಮುಖ್ಯ ಭಾಗ ವಾದ ರೈತರನ್ನು ಕರೆದೊಯ್ದರು. ನೆಹರು (ಅನೇಕ ಬಾರಿ ಸುಭಾಷ್ ಬೋಸ್ ರೊಂದಿಗೆ) ಭಾರತದ ಎಡ ಒಲುವಿನ ಕ್ರಾಂತಿಕಾರೀ ಬದಲಾವಣೆಯ ವಾಹಕರಾಗಿದ್ದ ಯುವ ಜನರ ಹೃದಯ ವನ್ನು ಗೆದ್ದರು. ಅವರಾರು ದುಡಿಯುವ ವರ್ಗ ದೊಡನೆ ಯಾವುದೇ ಧೃಡ ತಳಹದಿಯನ್ನು ಕಟ್ಟಲಾಗಲಿಲ್ಲ. ಗಾಂಧಿಯವರ ಟ್ರಸ್ಟಿ ಶಿಪ್ (Trusteeship) ಪರಿಕಲ್ಪನೆ ಯನ್ನು ದುಡಿಯುವ ವರ್ಗವು ತಮ್ಮ ಜೀವನ ಸ್ಥಿತಿಗೆ ಮತ್ತು ಹೋರಾಟ ಗಳಿಂದಾಗಿ ಒಪ್ಪಿ ಕೊಳ್ಳ ಲಾಗಲಿಲ್ಲ. ಅವರು ಗಳು ಬಹುಪಾಲು ಕಮ್ಯುನಿಸ್ಟರ ಕ್ಷೇತ್ರ ದಲ್ಲೆ ಉಳಿದರು. ಆದರೆ ಚೀನಾ ದಂತೆ ಚಳುವಳಿಯ ಮಾರ್ಗವನ್ನು ಕಂಮ್ಯುನಿಸ್ಟ್ರಿಗೆ ನಿರ್ಧರಿಸಲು ಸಾಧ್ಯ ವಾಗಲಿಲ್ಲ. ಚೀನಾದಲ್ಲಿ ಮಾವೋ ರವರು ದುಡಿಯುವ ರೈತರ ಕ್ರಾಂತಿ ಕಾರಿ ಕಾರ್ಮಿಕರ ನೇತೃತ್ವ ವನ್ನು ಪ್ರತಿನಿಧಿಸಿದ್ದರು.
ಭಾರತದಲ್ಲಿ ಇತಿಹಾಸವು ಗಾಂಧಿಯವರ ಪ್ರತಿಬಿಂಬದಂತೆ ರಚಿಸಲ್ ಪಟ್ಟಿತ್ತು. ಗಾಂಧಿ ಯವರನ್ನು ಆಕರ್ಷಕ ಸುಧಾರಣಾ ವಾದಿ ಯನ್ನಾಗಿಸಿ, ಬೂರ್ಜ್ ಗಳು ಅವರನ್ನು ತಮ್ಮ ನಾಯಕರೆಂದು ಎ ತ್ತಿ ಹಿಡಿದಿದ್ದಾರೆ. ಅಷ್ಟೇ ಅಲ್ಲ ಗಾಂಧಿಯನ್ನು ಪಿತಾಮಹ, ಮಹಾತ್ಮ ಎನ್ನಾಲಾಯಿತು. ಇಲ್ಲಿ ಗಮನಿಸ ಬೇಕಾದ ಅ o ಶ ವೆಂದರೆ ಬೂರ್ಜ್ವ ಗಳು ಪ್ರಜ್ಞಾ ಪೂರ್ವಕ, ಲೆಕ್ಕಾಚಾರ ಮತ್ತು ಸಂಘಟಿತ ಬೆಂಬಲದಿoದಲೇ ಈ ಪರಿಸ್ಥಿತಿ ಉಂಟಾಯಿತು. ಇನ್ನೂ ಒಂದು ಕಾರಣ ವೆಂದರೆ ಬ್ರಿಟೀಷ್ ರ ನಿಲುವು, ಅದೇನೆಂದರೆ ಗಾಂಧಿಯು ಸಂಧಾನ ನಡೆಸಲು ಒಬ್ಬ ಒಪ್ಪತಕ್ಕ ನಾಯಕನೆಂದು ಪರಿಗಣಿಸಿತ್ತು. ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹ ರಣನೀತಿ , ಯಾವತ್ತೂ ಸಫಲತೆ ಗಳಿಸುವುದಿಲ್ಲ ಎಂದು ಅವರು ತಿಳಿದಿದ್ದರು. ಆದರೆ ಅದು ಇನ್ನೊಂದು ಕತೆ.
ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಕಾರ್ಮಿಕ ವರ್ಗ ಮತ್ತು ಪಕ್ಷವು, ರೈತಾಪಿ ವರ್ಗದೊಡನೆ ಕ್ರಾಂತಿ ಕಾರಿ ಐಕ್ಯತೇ ಯನ್ನು ಕಟ್ಟಲಾಗದೆ ಹೋದದ್ದು, ಹೀಗಾಗಿ ಭಾರತ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ಬದಲಿಸುವ ಮತ್ತು ಅದರ ನಾಯಕರಾಗಲುಕಂಮ್ಯುನಿಸ್ಟರಿಗೆ ಸಾಧ್ಯವಾಗಲಿಲ್ಲ. ಸಿಪಿಐ ಪಕ್ಷವು ಸಾಮಾನ್ಯ ವಾಗಿ ರಾಷ್ಟ್ರೀಯ ವಿಮೋಚನಾ ಚಳುವಳಿಯ ಕೇಂದ್ರ ತಳಹದಿ ಕೃಷಿ ಕ್ರಾಂತಿ ಎಂದು ನಂಬಿದ್ದರು. ಆದರೆ ಅದನ್ನು ಸಾಧಿಸಲು ಅವಶ್ಯ ವಾದ ನಿರ್ದಿಷ್ಠ ಮಾರ್ಗ, ಸಂಘಟನೆ ರೂಪ ಮತ್ತು ಕಾರ್ಯ ಶೈಲಿ ಅನ್ನು ರೂಪಿಸಲು ಅದು ವಿಫಲ ವಾಯಿತು. ಕಮ್ಯುನಿಸ್ಟರು ಸತತ ವಾಗಿ ಎಲ್ಲಾ ಕೆಲಸ ಮಾಡುತ್ತಿದ್ದರೂ ಉದಾಹರಣೆಗೆ ( ಮಲಬಾರಿನ ಲ್ಲಿ 1930 ದಶಕದ ಮಧ್ಯಭಾಗದಲ್ಲಿ), ಅಲ್ಲಿ ಗಾಂಧಿವಾದದ ಪ್ರಭಾವ ಮೇಲೆ ಮೇಲೆ ಅಂದರೆ ಕಾಲ್ಪನಿಕ ವಾಗಿ ಇದ್ದಿತ್ತು, ಅಲ್ಲಲ್ಲಿ ಮಾತ್ರ ಹರಡಿತ್ತು .
ಮೊದಲನೆಯದಾಗಿ, ವಸಾಹತು ಅರೆ ವಸಾಹತು ದೇಶ ಗಳಲ್ಲಿ ರೈತ ರೊಡನೆ ಕಮ್ಯುನಿಸ್ಟ್ ಪಕ್ಷಗಳ ಸಂಭಂದವೇ ಮೂಲಭೂತ ನೀತಿಯ ಪ್ರಶ್ನೆ ಆಗಿದೆ. ಎರಡನೆಯ ದಾಗಿ, ಅದರ ಸಂಭಂದ ಬೂರ್ಜ್ವ ಗಳೊಡನೆ ಮತ್ತು ಅದರ ಪಕ್ಷ ವಾದ ರಾಷ್ಟ್ರೀಯ ಕಾಂಗ್ರೆಸ್ ನೋoದಿಗೆ ಆಗಿದೆ.
ಭಾರತ ಕಮ್ಯುನಿಸ್ಟರು ಇಲ್ಲಿ ಚೀನಾದ ಕಮ್ಯುನಿಸ್ಟರ ಗಿಂತ ಬಹಳ ಸಂಕೀರ್ಣ ಪರಿಸ್ಥಿತಿ ಎದುರಿಸ ಬೇಕಿತ್ತು. ಕಾಂಗ್ರೆಸ್ ಪಕ್ಷ ಪ್ರಾರಂಭದಲ್ಲಿ ಒಂದು ‘ಚಳುವಳಿ’ ಆಗಿತ್ತು. ಆದರೆ ಅದು ಪಕ್ಷ ವಾಗಿರಾಲ್ಲಿಲ್ಲ. ನಂತರದ ಘಟ್ಟದಲ್ಲಿ ಗಾಂಧಿಯವರು ಅದರ ಮೇಲೆ ಹತೋಟಿ ಸಾಧಿಸಿದ ಮೇಲೆ ಅದು ವಿಸ್ತಾರವಾಗಿ , ಅದೊಂದು ಎಲ್ಲಾ ಸಾಮ್ರಾಜ್ಯ ಶಾಹಿ ವಿರೋಧಿ ಶಕ್ತಿಗಳ ಒಂದು ವಿಶಾಲ ರಾಷ್ಟ್ರೀಯ ರಂಗವಾಯಿತು . ಇದೇ ಕಾರಣಕ್ಕಾಗಿ ಬೂ ರ್ಜ್ವ ಗಳು ತಮ್ಮ ಹಿತಾಸಕ್ತಿ ಸಾಧಿಸಿ ಕೊಳ್ಳಲು ಬದ್ಧರಾಗಿದ್ದರು. ಹೀಗಾಗಿ ಕಾಂಗ್ರೆಸ್ ಎಲ್ಲಾ ಶಕ್ತಿಗಳ ಒಳಗೊಳ್ಳುವಿಕೆ ಎಂಬುದು ಅದರ
ಅoತರಗತ ಗುಣವಾಗಿತ್ತು. ಅಥವಾ ಅದರ ಬಿಡಿಸಲಾಗದ ಗುಣ ಲಕ್ಷಣ ವಾಗಿತ್ತು.ಅದಕ್ಕೇ, ಗಾಂಧಿ ಅಥವಾ ನೆಹರು ರವರ ಉದಾರತೆ ಕಾರಣ ಆಗಿರಲಿಲ್ಲ. ಅವರುಗಳು ಕಾಂಗ್ರೆಸ್ ಒಳಗೆ ಅನೇಕ ಕ್ರಾಂತಿಕಾರಿ ಪ್ರಜಾ ಸತ್ತಾತ್ಮಕ ಶಕ್ತಿ ಗಳನ್ನು (ಎಡ ಪಂಥೀಯರನು) ಸೇರಿಸಿ ಕೊಂಡರು. ಅದು ಈ ಎಡ ಪಂಥೀಯರ ಸಮರ ಶೀಲತೆ ಯನ್ನ ಹದ್ದು ಬಸ್ತಿನಲ್ಲಿ ಇಡುವ ಮತ್ತು ರಾಜಕೀಯ ವಾಗೀ ಜೀರ್ಣಿಸಿ ಕೊಳ್ಳುವ ತಂತ್ರ ವೇ ಆಗಿತ್ತು. ಅನೇಕ ಲೇಖಕರು ಗಮನಿಸಿದಂತೆ ಈ ವಿಲೋಮ ಸಂಬಂಧವು ಹೇಗಿತ್ತೆಂದರೆ, ಒಂದೆಡೆ ಕಾಂಗ್ರೆಸ್ ಸಂಘಟನೆ ಗಟ್ಟಿ ಗೊಳ್ಳುವಿಕೆ ಮತ್ತೊoದೆಡೇ ಜನತೆಯ
ಮಿಲಿಟೆನ್ಸಿ ಮತ್ತು ಕ್ರಾಂತಿ ಕಾರಿ ರಾಡಿಕಲ್ ಅಂದರೆ ಸಮರ ಶೀಲತೆ ಮತ್ತು ರಾಜಕೀಯ ಶಕ್ತಿ ಗಳ ಮುನ್ನಡೆ ಯು ಸಹ ಆಗಿತ್ತು. ರಾಷ್ಟ್ರವಾದಿ, ಉದಾರವಾದಿ ಸ್ಕೂಲ್ ನ ಚರಿತ್ರ ಕಾರರು, ಈ ಸಂಭಂದ ವನ್ನು ಉದಾಸೀನ ಮಾಡುತ್ತಾರೆ ಮತ್ತು ಕಾಂಗ್ರೆಸ್ - ಸಿಪಿಐ ಸಂಯುಕ್ತ ರಂಗ ದ ಕಷ್ಟಗಳನ್ನು ಅಸಡ್ಡೆ ಮಾಡುತ್ತಾರೆ. ಅವರುಗಳು ಕಾರ್ಮಿಕ - ರೈತರ WPP (Workers & peasants Party) ಪಕ್ಷ ದ ಮಾದರಿಯನ್ನು ಹೊಗಳುತ್ತಾರೆ ಮತ್ತು ಅದರ ಕೊನೆ ಗೊಳ್ಳುವಿಕೆ ಬಗ್ಗೆ ವಿಷಾದಿಸುತ್ತಾರೆ. ಏಕೆಂದರೆ ಸಿಪಿಐ ಕಾಂಗ್ರೆಸ್ ನೊಳಗೆ ಲೀನ ವಾಗುತ್ತಿತ್ತು. ಹೌದು, ನಾವು ಇದರ ಬಗ್ಗೆ ನಮ್ಮದೇ ಆದ ವಿಮರ್ಷೆ ಯನ್ನು ಮಾಡುತ್ತೇವೆ. ಅದು WPP ನ ಏಕಾಏಕಿ ಮತ್ತು ಸಂಪೂರ್ಣ ವಾಗಿ ನಿಂತು ಹೋದುದರ ಬಗ್ಗೆ ನಮ್ಮದೇ ಆದ ನಿಲುವು ಹೊಂದಿದ್ದೇವೆ. ಆದರೆ ಅದು ಬೇರೆಯೇ ದೃಷ್ಟಿಕೋನ ದಿಂಧ….
ಭಾರತದ ಕ್ರಾಂತಿ ಅಥವಾ ಮಾರ್ಕ್ಸ್ ವಾದ - ಲೆನಿನ್ ವಾದದ ಭಾರತೀ ಕರಣದ ಬಗ್ಗೆ ಒಂದು ತಾತ್ವಿಕ ನಿಲುವನ್ನು ಬೆಳೆಸಲು ಸಿಪಿಐ ನ ಪ್ರಯತ್ನ ನಿರಾಶಾ ದಾಯಕವಾಗಿದೆ. ನಮ್ಮ ನೆರೆಯ ಚೀನಾ ದಲ್ಲಿ ಮಾವೋ ತ್ಸೇ ತುಂಗ್ ಅವರು ಪ್ರಾರಂಭ ದಿಂದಲೂ ಮಾರ್ಕ್ಸ್ ವಾದ - ಲೆನಿನ್ ವಾದ ವನ್ನು
ಚೀನಾದ ಪರಿಸ್ಥಿತಿಗೆ ಹೊಂದಿಸಲು ಸತತ ವಾಗಿ ದುಡಿದರು. ಈ ರೀತಿಯಾಗಿ ಅವರು ಒಂದು ರೀತಿ ಕಮ್ಯುನಿಸ್ಟ್ ಅoತರಾಷ್ಟ್ರಿಯದ (Comintern) ನಿಲುವುಗಳನ್ನು ತಂತ್ರಗಾರಿಕೆ ನಿಲುವಿನಲ್ಲಿ ನಿರಾಕರಿಸುತ್ತಲೇ ತಳ್ಳಿಹಾಕಿದರು. ತದ್ವಿವಿರುದ್ಧ ವಾಗಿ ಸಿಪಿಐ ನಾಯಕತ್ವ ಯಾವುದೇ ಧೈರ್ಯ, ನಂಬಿಕೆ, ಹಾಗೂ ಸೃಜನಶೀಲತೆ ಹೊಂದಿರಲಿಲ್ಲ. ಆದ್ದರಿಂದ ಯಾವಾಗಲೂ ಭಾರತದ ಕಮ್ಯುನಿಸ್ಟರು ತನ್ನ ಕಾರ್ಯ ನೆಡೆಯಬಗ್ಗೆ Comintern ನ ನಿರ್ದೇಶನಗಳನ್ನು ಎದುರು ನೋಡುತಲೇ ಇತ್ತು . ಈ ರೀತಿಯ ಅತಿ ಅವಲಂಬನೆ ಅಥವಾ ಅoತರಾ ಷ್ಟ್ರೀಯ ಸಲಹೆಗಳ ವಿಮರ್ಶಾ ರಹಿತ ಒಪ್ಪಿ ಕೊಳ್ಳುವಿಕೆ ಯಿಂದಾಗಿ, 1942 ರಲ್ಲಿ ಮಾರಣಾಂತಿಕವಾಗಿ (ಭಾರತ ಬಿಟ್ಟು ತೊಲಗಿ ಚಳುವಳಿ ಯಲ್ಲಿ ಭಾಗ ವಹಿಸಲಿಲ್ಲ) ಇದು ಪರಿಣಮಿಸಿತ್ತು. ಇದೇ ಕಾರಣಕ್ಕಾಗಿ ಒಂದು ಶಕ್ತಿಯುತ ಪ ಕ್ಷದ ನಾಯಕತ್ವವು ವರ್ಗ ಹೋರಾಟ ಮತ್ತು ಏರಡು ಮಾರ್ಗದ (Two-line struggle) ಸಂಘರ್ಷದ ಮೂಲಕ ಆಗಬೇಕಿತ್ತು. ಆದರೆ ಅದು ಆಗಲಿಲ್ಲ .
ನಾಯಕತ್ವದ ಸಮಸ್ಯೆಗಳು:- ಭಾರತ ದಲ್ಲಿ ಕಮ್ಯುನಿಸ್ಟ್ ನಾಯಕತ್ವ ವು ತನ್ನೆಲ್ಲಾ ಗುಂಪುಗಾರಿಕೆ ಯಿಂದ ಒಟ್ಟಾರೆ ಸ್ವಾಭಾವಿಕವಾಗಿ ಕೆಳಮಟ್ಟವನ್ನು ತಲುಪಿದವು. ಪಕ್ಷ ವನ್ನು ಕಟ್ಟಲು ಅವಶ್ಯ ವಾದ ಸೈಧಾಂತಿಕ ಅಧ್ಯಯನ ರಾಜಕೀಯ ತರಬೇತಿ ಮತ್ತು ಸಂಘಟನಾತ್ಮಕ ಅಭಿಯಾನದ ಪರಿಶೀಲನೆ, ಸದಸ್ಯತ್ವದ ಸಕ್ರಮಗೊಳಿಸುವಿಕೆ ಬಗ್ಗೆ ಬಹಳ ಅಲ್ಪ ಪ್ರಮಾಣದ ಗಮನ ಹರಿಸ ಲಾಯಿತು . ಆದರೆ ಅದು ಪಕ್ಷ ಕಟ್ಟುವುದನ್ನು ಒಂದು ಮುಖ್ಯ ಕರ್ತವ್ಯ ವೆoದು ಪರಿಗಣಿ ಸಲಿಲ್ಲ .
ಮೇಲಿನ ಅ o ಶ ಗಳು ಮೂಲ ಭೂತ ವಾಗಿ 1917-39 ರ ಅವಧಿಯ ಬಗ್ಗೆ ಆಗಿದೆ. ಈ ಪ್ರಬಂಧದಲ್ಲಿ ನಮ್ಮ ಮಾತು ಗಳನ್ನು ಕೆಳಗಿನಂತೆ ಸೇರಿಸಿ ಬಹುದು.
ಎರಡನೆ ವಿಶ್ವ ಮಹಾಯುದ್ಧ ಮತ್ತು ನಂತರ ಜನತೆಯ ನಾಯಕತ್ವ ನೀಡಲು ಕಾಂಗ್ರೆಸ್ ಅನ್ನು ಅವಲಂಬಿಸುವ ತನ್ನ ಹಳೇ ಚಾಳಿಯನ್ನೆ ಸಿಪಿಐ ಮುಂದು ವರಿಸಿತು. ಅದು ಸಹ ರಾಜ್ಯಗಳಲ್ಲಿ ಇದ್ದ ಕಾಂಗ್ರೆಸ್ ಸರ್ಕಾರಗಳು ನಡೆಸಿದ ದಬ್ಬಾಳಿಕೆ ವಿರುದ್ಧ ಪ್ರತಿಭಟಿಸಲಿಲ್ಲ. ಈ ರೀತಿಯ ಕಾಂಗ್ರೆಸ್ ಮೇಲಿನ ಅವಲಂಬನೆ ಯಿಂದಾಗಿ ಒಂದು ರೀತಿಯ ನಿಷ್ಕ್ರಿಯತೆಯು ಅಂಗ ಸಂಸ್ಥೆಗಳಲ್ಲಿ ನ ಕಾರ್ಯ ಕರ್ತರಲ್ಲಿ ಉಂಟಾಯಿತು. ನಾವು ಇದನ್ನು ' ವಿಮರ್ಶಾತ್ಮಕ (critical) ಬಾಲ ಬಡುಕುತನ ' ವೆಂದು ಕರೆಯುತ್ತೇವೆ. ಇದರಿಂದಾಗಿ ಪಕ್ಷವು ಸ್ವತಂತ್ರ ವಾಗಿ ಮುಂದೆ ಬರುವುದು ಅಥವಾ ಸಮರ ಶೀಲ ಎಡ ಐ ಕ್ಯ ತೆ ಕಟ್ಟಿ ಕಾಂಗ್ರೆಸ್ ಅನ್ನು ಎದುರಿಸುವ ಪ್ರಯತ್ನ ಮಾಡಲಿಲ್ಲ.
ಈ ರಾಜಕೀಯ ದಿವಾಳಿ ತನಕ್ಕೆ ಕಾರಣ ಸಿಪಿಐ ಸಿದ್ಧಾಂತ ಬಗ್ಗೆ ಯೂರೋಪ್ ನ ಸಂಗಾತಿ ಗಳ ಸಹ ವರ್ತಿ ಅವಲಂಬನೆ ಸಹ ಎಂದು ಒತ್ತಿ ಹೇಳಬೇಕು. ಇದಕ್ಕೆ ಜನತೆ ಮತ್ತು ಅವರ ಸೃಜನಾತ್ಮಕ ಶಕ್ತಿ ಮತ್ತು ಬುದ್ಧಿ ಮತ್ತೆಯಲ್ಲಿ ನಂಬಿಕೆ ಇರದಿರುವುದೆ ಆಗಿದೆ.
ಸದ್ಯಕ್ಕೆ ಇಷ್ಟು ಸಾಕು. ಈ ಆಗಸ್ಟ್ ನಲ್ಲಿ ಇತರ ಕೆಲವರು ಮೇಲೆ ಹೇಳಿದ್ದನ್ನು ನೆನಸಿ ಕೊಳ್ಳುತ್ತಾರೆ. ಆದರೆ ನಾವು ಗಂಭೀರ ವಾದ ಆತ್ಮಾವಲೋಕನ ಮಾಡಿ ಕೊಂಡು, ನಾವು ಸ್ವಾತಂತ್ರ್ಯ ಚಳುವಳಿ ಯಲ್ಲಿ ಚಾರಿತ್ರಿಕ ವಿಫಲತೆಗೆ ಮೂಲ ಬೇರುಗಳನ್ನು ಹುಡುಕುವುದು ಅನಿವಾರ್ಯ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಾವು ನಮ್ಮ ಮೇಲಿರುವ ಅರೆ ವಸಾಹತು ಶಾಹಿ ಗುಲಾಮಗಿರಿ ಬಿಡುಗಡೆ ಗಾಗಿ ಮಾಡ ಬೇಕಾದ ಎ ರಡನೆ ಸಂಗ್ರಾಮದ ಜವಾಬ್ದಾರಿ ಗೆ ನಾವು ನ್ಯಾಯ ದೊರಕಿಸೋಣ.
ಅದಕ್ಕಾಗಿ ನಾವು ನಮ್ಮಲ್ಲಿ ಹಾಕಿ ಕೊಳ್ಳ ಬೇಕಾದ ಪ್ರಶ್ನೆ 'ಈ ತಪ್ಪು ದಾರಿಗಳು’ ಇತಿಹಾಸ ಮಾತ್ರವೇ? ಸ್ಪಷ್ಟವಾಗಿ ಅಲ್ಲಾ. ಹಳೆಯ ಸೈದ್ಧಾಂತಿಕ ತಪ್ಪು ದಾರಿಗಳನ್ನು ಇಂದಿನ ಕಾರ್ಯ ಚರಣೆ ಯಲ್ಲಿ ಸರಿಪಡಿಸಬೇಕು. ಇದು ಕಮ್ಯುನಿಸ್ಟರು ಇತಿಹಾಸವನ್ನು ಇಂದಿನ ಪರಿಸ್ಥಿತಿಯಲ್ಲಿ ಸರಿ ಪಡಿಸುವ ವಿಧಾನ. ಇದೇ ನಮ್ಮ ಐತಿಹಾಸಿಕ ಉದ್ದೇಶವಾಗಿದೆ. ಅದು ಎರಡನೇ ಭಾಗದ ಅಧ್ಯಯನ ಇರಬಹುದು. ಇಲ್ಲಾ ನಮ್ಮ ಅನೇಕ ಭಾಗಗಳ ಕೆಲಸ ವಾಗ ಬಹುದು.